Collection: ಹಿರಣ್ಯಗರ್ಭ - (ಆಡಿಯೋ ಬುಕ್)

ನಿರ್ಮಾಣ : ಧ್ವನಿಧಾರೆ ಮೀಡಿಯಾ ತಂಡ

ಬರೆದವರು: ನವೀನ್ ಶಾಂಡಿಲ್ಯ

ಒಟ್ಟು ಸಂಚಿಕೆಗಳು: 21

ದಿನವೂ ಸಂಜೆ ಏಳು ಗಂಟೆಗೆ ಮೈಲ್ಯಾಂಗ್ ಅಲ್ಲಿ ಬಿಡುಗಡೆ

 

ಸಹಸ್ರನಾಮಗಳು, ಸೂಕ್ತಿಗಳು ಎಲ್ಲವೂ ಕೇವಲ ಧಾರ್ಮಿಕ ಪಾಠಗಳೇ ಅಥವಾ ಲೌಕಿಕದಲ್ಲಿ ಶ್ರೀಸಾಮಾನ್ಯನಿಗೆ ಸಂದೇಶಗಳೇ? ಇಂಥ ಜಿಜ್ಞಾಸೆಯ ಎಳೆಯೊಂದರ ಕೌತುಕ  ಕಥಾಹಂದರದ, ನವ ಲೇಖಕ ನವೀನ್ ಶಾಂಡಿಲ್ಯ ಅವರ 'ಹಿರಣ್ಯ ಗರ್ಭ'


1. ನಿಧಿಶೋಧದ ಕಥೆಗಳು ಯಾವಾಗಲೂ ರೋಚಕವೇ. ಕಡೆಯಲ್ಲಿ ದಕ್ಕುವುದೋ ಇಲ್ಲವೋ ಎಂಬ ಕುತೂಹಲದ ಜೊತೆ‌ಗೆ ಹುಡುಕಾಟದ ಹಾದಿಯ ಪ್ರತಿ ತಿರುವೂ, ಸುಳಿವೂ, ದಿಕ್ಕುತಪ್ಪುವುದು, ಸಕಾಲ ಸಹಕಾರ ಸಿಗುವುದು ಎಲ್ಲವೂ ಅದ್ಭುತ ಎನಿಸೋ ಅಪರೂಪದ ಪ್ರಯತ್ನ ತಿಳಿಯುವ ಆಸಕ್ತಿ ನಿಮ್ಮಲ್ಲಿದೆಯೇ?

2. ಬೆಂಗಳೂರೆಲ್ಲಿ, ಹಂಪೆಯೆಲ್ಲಿ, ಮಹಾಕೂಟ ಎಲ್ಲಿ... ಈ ಯುವತಂಡ ನಿಧಿಶೋಧಿಸುತ್ತಾ ಜೊತೆಗೆ ಐತಿಹಾಸಿಕ ಪ್ರವಾಸ ಮಾಡ್ತಿರೋ ಹಾಗಿದೆ. ಇವರ ಪ್ರಯಾಣಕ್ಕೆ ನೀವೂ ಜೊತೆಯಾಗೋ ಉತ್ಸಾಹವಿದೆಯಾ? ಸಿಗೋ ಸುಳಿವುಗಳನ್ನು ಬೇಧಿಸೋ ಆಸಕ್ತಿ ಇದೆಯಾ? 

3. ಲೇಖಕರೂ ಭಾಗವಾಗಿರೋ ಈ ಕಥೆಯಲ್ಲಿ, ನಿಜಕ್ಕೂ ಅವರ ಪತ್ರ ಏನು? ನಿಧಿಶೋಧಕರ ಜೊತೆ ಅವರಿಗೇನು ಕೆಲಸ? ಈ ತಂಡವನ್ನ ಲೇಖಕರು ಸಂಧಿಸಿದ್ದು ಹೇಗೆ? ಅಥವಾ ಇದೆಲ್ಲಕ್ಕೂ ಶ್ರೀಕಾರ ಹಾಡಿದ್ದೇ ಅವರಾ? 

4. ವೇದಗಳ ಸಂದೇಶಗಳನ್ನು ವಿಜ್ಞಾನದ ವ್ಯಾಖ್ಯಾನಗಳಿಂದ ವಿಶ್ಲೇಷಿಸಿ, ವಿಸ್ಮಯಕಾರಿ ಗುಟ್ಟೊಂದನ್ನು ಬೇಧಿಸಲು ನಿಧಿಶೋಧಕ್ಕೆ ಹೊರಟ ಯುವಕರು ತಮ್ಮ ಪ್ರಯತ್ನದಲ್ಲಿ ಸಫಲರಾಗುತ್ತಾರೆಯೇ? 

5. ನಿಧಿಶೋಧಕ್ಕೆ ಉದ್ದೇಶ ಮುಖ್ಯವೇ? ಸ್ವಂತ ಲಾಭಕ್ಕಾದ್ರೆ ನಿಧಿ ಸಿಗೋದಿಲ್ಲವೆ? ಲೋಕಕಲ್ಯಾಣಕ್ಕಾದರೆ ದಕ್ಕುತ್ತದೆಯೇ? ಇವೆಲ್ಲಾ ಜಿಜ್ಞಾಸೆ ಬಿಟ್ಟು ಕುತೂಹಲಕ್ಕೆ ಅಂತ ನಿಧಿ ಹಿಂದೆ ಹೋದರೆ? ಆಗ ಏನು‌ಕಥೆ? 

ಈಗ ಕೇಳಿ ಒಂದು ರೋಚಕ ಆಡಿಯೋ ಸರಣಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ. ದಿನವೂ ಸಂಜೆ ಏಳು ಗಂಟೆಗೆ ಹೊಸ ಎಪಿಸೋಡ್.

0 products

Sorry, there are no products in this collection