ಮೂಚಿಮ್ಮ (ಆಡಿಯೋ  ಬುಕ್)

ಮೂಚಿಮ್ಮ (ಆಡಿಯೋ ಬುಕ್)

Regular price
$6.99
Sale price
$6.99
Regular price
Sold out
Unit price
per 
Shipping does not apply

ಓದಿದವರು: ಓದಿದವರು: ಮಮತಾ ಶೆಟ್ಟಿ

ಆಡಿಯೋ ಪುಸ್ತಕದ ಅವಧಿ : 4 ಗಂಟೆ 17 ನಿಮಿಷ


ಬರೆದವರು: ಡಾ.ಅಜಿತ್ ಹರೀಶಿ

ಪ್ರಕಾಶಕರು: ಮೈಲ್ಯಾಂಗ್ ಬುಕ್ಸ್

Publisher: MyLang Books

 

ಸುಳಿದಾಡುವ ಗಾಳಿಯಲ್ಲಿ ಒಲಿದು ಬಂದಂತೆ ಬಂದ ನನ್ನ ಗೆಳೆಯ ಡಾ. ಅಜಿತ್ ಹರೀಶಿ ಕೃತಿಗಳ ಒಳಗೆ ದಟ್ಟವಾದ ಮಾನವೀಯ ಸೆಲೆಗಳನ್ನು ನಾನು ಅನೇಕ ಬಾರಿ ಕಂಡಿದ್ದೇನೆ. ಅವರು ಮಿತಭಾಷಿ ಮತ್ತು ಅನೇಕ ಬಾರಿ ಮೌನಿ. ಅಜಿತ್ ಕಥೆಗಳನ್ನು ಓದಿದಾಗಲೆಲ್ಲಾ ನನಗೆ ಅವರ ಮೌನದ ಅರ್ಥ ಏನು ಎಂಬುದು ಈ ಕೃತಿಯಲ್ಲಿ ಗೊತ್ತಾಗಿದೆ. 


"ಆವಿ” ಕಥೆಯ ಶರತ್ ಅಥವಾ ದಿಶಾಗಿಂತ ಸುನೀಲನ ಮೌನ ಹೆಚ್ಚು ಆಪ್ಯಾಯಮಾನವಾಗುತ್ತದೆ. “ಮೂಚಿಮ್ಮ” ಕಥೆಯಲ್ಲಿ ಬಾಂದು ಕಲ್ಲಿನ ಆ ಕಡೆ ಮತ್ತು ಈ ಕಡೆ ಎರಡು ಪುಟ್ಟ ಪುಟ್ಟ ಔಷಧೀಯ ಗಿಡಗಳನ್ನು ಕೈಯಾರೆ ನೆಟ್ಟ ಮೂಚಿಮ್ಮನ ಮೌನ ಹರಿದಾಡುತ್ತದೆ. “ವಿಲಿಪ್ತ”ದ ಗುರೂಜಿ ವರಲೆ ತಿಂದ ಕಾಷ್ಠವಾಗಿ ಆತನ ಮೌನವೇ ಆತನನ್ನು ಒಳಗೊಳಗೆ ತಿಂದು ಮುಗಿಸುತ್ತದೆ. “ದಹನ”ದ ಕನಸಿನ ಸ್ವಾಮಿ ಗಂಗಾಧರನ ಕನಸುಗಳು ಮತ್ತೊಂದು ಮೌನವನ್ನು ಓದುಗನಿಗೆ ಅರ್ಥಪೂರ್ಣವಾಗಿ ದಾಟಿಸುತ್ತದೆ.”ಪತನ”ದ ವಿನಯನ ಬರಹಗಳಲ್ಲಿ ಮೌನವೇ ಕಥೆಯ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ.”ಜನಾರ್ದನ” ಕಥೆಯಲ್ಲಿ ಜನಾರ್ದನ ಭಟ್ಟರ ಮೌನ ಪುಂಡ ಮಗನನ್ನು ಪರಿವರ್ತಿಸುತ್ತದೆ. “ಬೆಸುಗೆ”ಯ ಸುಮಾ, ಸಿರಿ ಮತ್ತು ಪ್ರಶಾಂತರ ನಡುವಿನ ಪ್ರೀತಿಯ ಸ್ಪರ್ಶದಲ್ಲಿ ತಾನೇ ಮೌನಕ್ಕೆ ಸರಿದ ರೀತಿ ಆಪ್ಯಾಯಮಾನವೆನಿಸುತ್ತದೆ. “ತಾನೊಂದು ಬಗೆದರೆ” ಕಥೆಯಲ್ಲಿ ಸುದೀರ್ಘ ವಿವರಗಳ ನಡುವೆಯೂ ವೆಂಕಟ ತನ್ನ ನಿರೂಪಣೆಯಲ್ಲಿ ಕೊಟ್ಟ ಅಖಂಡ ಮೌನವೊಂದು ನಮ್ಮನ್ನು ದಾಟಿ ಹೋದ ಭಾಸವಾಗುತ್ತದೆ. “ಪರಿವರ್ತನೆ” ಕಥೆಯ ಅನಂತ ಹೆಗಡೇರು ಕಾಲದ ಓಟದಲ್ಲಿ ತಾನೂ ಭಾಗಿಯಾಗಲಾರದೇ ಮೌನ ಸಾಕ್ಷಿಯಾಗಿ ಕೊನೆಗೂ “ಅಪೀ ನಿಧಾನ ಓಡೇ” ಎಂದು ಹೇಳುವಲ್ಲಿಗೆ ಮನಸ್ಸು ಮುದ್ದೆಯಾಗುತ್ತದೆ. “ನಟ’’ ಕಥೆಯಲ್ಲಿ ನಟರಾಜನ ಅಳು ಅವನ ಮನಸ್ಸಿನ ಮೌನದ ಹರಿವಿನಂತೆ ತಾಕುತ್ತದೆ.

ಈ ಕೃತಿಯಲ್ಲಿ ಬಹಳಷ್ಟು ಕಥೆಗಳು ಸಾಗರಸೀಮೆಯ ಲಹರಿಗಳನ್ನು ಢಾಳಾಗಿ ಹರಿಸಿವೆ. ಭರಣಿಯಲ್ಲಿ ಹೊದ್ದು ಮುಚ್ಚಿದ ಅಪ್ಪೆಮಿಡಿಯ ಸೋನೆಯಂತೆ ಘಮ ಇವೆ. ಒಂದೊಂದು ಕಥೆಯೂ ಕಾಯಿ ಹಾಲಿಗೆ ತೊಡೆದೇವು ಮುರುಕಿದಂತೆ ಓದಿನ ರುಚಿಗೆ ನಮ್ಮನ್ನು ಅಣಿಗೊಳಿಸುತ್ತದೆ.

- ಗೋಪಾಲಕೃಷ್ಣ ಕುಂಟಿನಿ

 

ಅಜಿತ್ ಅವರ ಕತೆಗಳನ್ನು ಓದುವಾಗ ಮೊದಲು ನನಗೆ ವಿಶಿಷ್ಟವೆನಿಸಿದ್ದು ವಿಷಯಗಳ, ಕಥಾಸೂತ್ರಗಳ, ಮತ್ತು ಪಾತ್ರಗಳ ವೈವಿಧ್ಯ. ಒಳನಾಡಿನ ಹಳ್ಳಿಗಳ, ಸಣ್ಣ ಊರುಗಳ ಬೆಳೆಗಾರರ ಬದುಕಿನಿಂದ ಹಿಡಿದು ನಗರ ಜೀವನದ ಸೂಕ್ಷ್ಮಗಳ ವರೆಗೂ ಅವರ ಕತೆಗಳ ಹರಹು ಸರಾಗವಾಗಿ ಹಬ್ಬುತ್ತದೆ. ನೆಲದ ಸೊಗಡಿನ ಘಮವನ್ನು ಎಲ್ಲಿಯೂ ಕಳೆದುಕೊಳ್ಳದೆಯೇ ಆಧುನಿಕ ಜೀವನದ ತೊಡಕುಗಳ ಬಗ್ಗೆ , ಸೂಕ್ಷ ಪ್ರಶ್ನೆಗಳ ಬಗ್ಗೆಯೂ ಅಪರೂಪದ ಸಂವೇದನೆಯನ್ನು ಅವರು ಮಿಡಿಯುತ್ತಾರೆ. ಕತೆಗಾರರಲ್ಲಿ ಇಂಥ ವಿಸ್ತಾರ ನಿಜಕ್ಕೂ ಅಪರೂಪ. ಹೊರನೋಟಕ್ಕೆ ಎರಡು ತುದಿಗಳಂತೆ ಕಂಡು ಬರುವ ಇವೆರಡು ಜೀವನ ದೃಷ್ಟಿಗಳ ನಡುವೆ ಸೇತುವೆಗಳನ್ನು ಕಟ್ಟಬಲ್ಲ ಅಜಿತ್ ರಂಥ ಕತೆಗಾರರು ಕನ್ನಡಕ್ಕೆ ಇಂದು ನಿಜಕ್ಕೂ ಬೇಕಾಗಿದ್ದಾರೆ. 

-ಪವಮಾನ್ ಅಥಣಿ, ಮೈಲ್ಯಾಂಗ್ ಬುಕ್ಸ್

  

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.