ಬರಹಗಾರ: ಕುವೆಂಪು
ನಿರ್ಮಾಣ ಸಹಾಯ: ಧ್ವನಿಧಾರೆ ಮಿಡಿಯಾ
ಆಡಿಯೋ ಪುಸ್ತಕದ ಅವಧಿ : 8 ಗಂಟೆ 13 ನಿಮಿಷ
27. ಆತ್ಮಹತ್ಯೆ - ಹೂವಯ್ಯ ಮುತ್ತಳ್ಳಿಗೆ
28. ಕೌಲಿ ಕರು ಹಾಕಿದ್ದು - ನಾಗಮ್ಮನವರ ಹತಾಶೆ ಚಂದ್ರಯ್ಯಗೌಡರ ಈರ್ಷ್ಯೆ - ರಾಮಯ್ಯನಿಗೆ ಮದುವೆಯಾಯ್ತು
29. ಪರ್ವತ ಶೃಂಗದಲ್ಲಿ ಸೂರ್ಯೋದಯದ ಸೌಂದರ್ಯಾನುಭೂತಿ - ಮನಸ್ಸಿನ ಮಾಯಾಶಕ್ತಿ
30. ಅಗ್ರಹಾರದ ದೇವಸ್ಥಾನದಲ್ಲಿ - ಕೋಳಿಯಂಕದ ಪಟ್ಟೆಯಲ್ಲಿ
31. ಸೋಮನ ಮೇಲೆ ಪ್ರಲೋಭನ ಪಿಶಾಚಿ - ಸುಬ್ಬಮ್ಮ ಮತ್ತು ಗಂಗೆಯರಿಗೆ ನಡೆದ ಕುಸ್ತಿ
32. ಕುಡಿದಿದ್ದ ಸೇರೆಗಾರರಿಂದ ಪುಟ್ಟನ ಖೂನಿ? - ಓಬಯ್ಯನ ಕಥೆ - ರಾಮಯ್ಯ ಸೀತೆಯನ್ನು ಕಾನೂರಿಗೆ ಕರೆತಂದಿದ್ದು
33. ಸೀತೆಗೆ ನರಕ ಶಿಕ್ಷೆ - ರುದ್ರವಾದರೂ ಮಧುರ ರಾತ್ರಿ - ತಾಯಿಯ ಮರಣಶಯ್ಯೆಯ ಬಳಿ ಮಗನು ಮಾತು ಕೊಟ್ಟದ್ದು
34. ತವರು ಮನೆಯ ಮುಳ್ಳಿನ ಹಾಸಗೆ - ಬೇಸಗೆಯ ನಡುಗಾಡಿನ ಸರಲಿನಲ್ಲಿ ಬೈರ ಸಿದ್ದರ ಏಡಿ ಷಿಕಾರಿ - ಕಣ್ಣೀರಿನ ಗಂಗಾತೀರ್ಥದಲ್ಲಿ ಕಟ್ಟಕಡೆಯ ಸ್ನಾನ
35. ಮತ್ತೆ, ಸುಬ್ಬಮ್ಮ ಕಾನೂರಿಗೆ ಹೆಗ್ಗಡಿತಿ! - ಸುಬ್ಬಮ್ಮನ ದುಃಸ್ವಪ್ನ - ಮನೆಯಲ್ಲಿ 'ಮುಟ್ಟುಚಿಟ್ಟು'!
36. ಬುದ್ಧದೇವನ ಕೃಪಾಮಹಿಮೆ - ಚಿನ್ನಯ್ಯ, ಪುಟ್ಟಮ್ಮ ಮತ್ತು ಅವರ ರಮೇಶ!
37. ಸೇರೆಗಾರರು ಪರಾರಿ! - ಮೃತ್ಯುಮೂರ್ತಿಯ ಮುಂದೆ - ಹತ್ತು ವರ್ಷಗಳಾದ ಮೇಲೆ
ನಾನು ಓದಿದ ಮೊದಲ ಕನ್ನಡ ಕಾದಂಬರಿ ಕುವೆಂಪು ಅವರ ಕಾನೂರು ಹೆಗ್ಗಡಿತಿ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಬೇಸಿಗೆ ರಜೆಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಕಣ್ಣಿಗೆ ಬಿದ್ದ ಈ ಪುಸ್ತಕವನ್ನು ಓದಲು ಆರಂಭಿಸಿ, ಎರವಲು ಪಡೆದು ಮನೆಗೂ ತಂದು ಓದಿ ಮುಗಿಸಿದ್ದು ನೆನಪಿದೆ. ಸುಮಾರು ಆರು ನೂರು ಪುಟಗಳ ಕಾದಂಬರಿ ಓದಿ ಮುಗಿಸಲು ಬಹುಶಃ ಆ ರಜೆಯ ಬಹುಭಾಗವೇ ಹಿಡಿದಿರಬೇಕು. ಈಗ ಹತ್ತು ವರ್ಷಗಳ ಹಿಂದೆ ಮತ್ತೊಮ್ಮೆ ಓದುವಾಗಲೂ ಕಾದಂಬರಿಯ ಸ್ವಾರಸ್ಯಕಡಿಮೆಯಾದಂತೆ ಅನಿಸಲಿಲ್ಲ.
೧೯೩೬ರಲ್ಲಿ ಪ್ರಕಟವಾದ ಈ ಕಾದಂಬರಿಯು ಒಳಗೊಳ್ಳುವ ಪರಿಸರ ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಎಂಬ ಹೆಸರಿನಿಂದ ಗುರುತಿಸಲ್ಪಡುವ ಪ್ರದೇಶ. ನನ್ನ ಊರು ಅದೇ ಪ್ರದೇಶದಲ್ಲಿರುವುದರಿಂದ ಈ ಕಾದಂಬರಿಯಲ್ಲಿ ವರ್ಣನೆಗೊಳ್ಳುವ ಹಲವಾರು ಸ್ಥಳ ಹಾಗೂ ವ್ಯಕ್ತಿಚಿತ್ರಗಳು ನಮಗೆಲ್ಲ ಹೊಸತಾಗಿರಲಿಲ್ಲ. ಆದರೂ ಆ ಕಾರಣಕ್ಕಾಗಿ ಕಾದಂಬರಿಯ ಸ್ವಾರಸ್ಯ ನನಗೇನೂ ಕಡಿಮೆಯಾಗಿರಲಿಲ್ಲ. ಮಲೆನಾಡಿನವರಲ್ಲದ ಓದುಗರಿಗಂತೂ ಇದೊಂದು ಹೊಸ ಪ್ರಪಂಚ. ಕುವೆಂಪು ಅವರಂತಹ ಕಲ್ಪನೆ, ಒಳನೋಟ, ಜೀವನ ಪ್ರೀತಿ ಎಲ್ಲವೂ ಬೆರೆತ ಕೃತಿಕಾರನ ಲೇಖನಿಯಲ್ಲಿ ಮಲೆನಾಡಿನ ಪ್ರಕೃತಿ ಲೋಕ ಕಣ್ಣೆದುರಿಗೇ ನಿಂತಷ್ಟು ನೈಜತೆಯಲ್ಲಿ ಮೂಡಿ ಬರುತ್ತದೆ.
ಕಾದಂಬರಿಯ 'ಅರಿಕೆ' ಯಲ್ಲಿ ಕುವೆಂಪು ಅವರೇ ಹೇಳಿರುವಂತೆ 'ಕಾದಂಬರಿ ಅಂಗೈ ಮೇಲಣ ನಾಟಕಶಾಲೆ'. ವಿಧ ವಿಧದ ದೃಶ್ಯಗಳ, ವ್ಯಕ್ತಿಗಳ, ಸನ್ನಿವೇಶಗಳ ಪೂರ್ಣ ಸ್ವಾರಸ್ಯ ಸಿಗಲು ಅವುಗಳು ಓದುವವರ ಪ್ರತಿಭೆಯಲ್ಲಿ ಮತ್ತೊಮ್ಮೆ ಸೃಷ್ಟಿಯಾಗಬೇಕಾಗುತ್ತದೆ.
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ, ಕಳೆದ ಶತಮಾನದ ಆರಂಭದ ಕಾಲಘಟ್ಟದಲ್ಲಿ ಮಲೆನಾಡು ಪ್ರದೇಶದ ಸೂಕ್ಷ್ಮ ಸಾಮಾಜಿಕ, ರಾಜಕೀಯ ಬದಲಾವಣೆಗಳನ್ನು ಅಲ್ಲಿನ ಕೆಲವು ಕುಟುಂಬಗಳ ಜನರ ಬದುಕಿನ ಹಿನ್ನೆಲೆಯಲ್ಲಿ ಈ ಕಾದಂಬರಿಯ ಓದುಗರು ಗ್ರಹಿಸಬಹುದು. ಜಮೀನುದಾರಿಕೆಯ ದರ್ಪ, ಅಧಿಕಾರದ ಪ್ರತಿನಿಧಿಯಂತಿರುವ ಕಾನೂರು ಚಂದ್ರಯ್ಯಗೌಡರ ಕುಟುಂಬವು ಕತೆಯ ಕೇಂದ್ರಬಿಂದು. ಈ ಕುಟುಂಬದ ಒಳಗಿನ ಹಾಗೂ ಹೊರಗಿನ ಸಂಬಂಧಗಳು ಅಂದಿನ ಕಾಲದ ಕೌಟುಂಬಿಕ ಹಾಗೂ ಸಾಮೂಹಿಕ ಜೀವನದ ಪ್ರತಿಮೆಗಳಾಗಿ ಕಾಣಬರುತ್ತವೆ.
- ಶ್ರೀನಾಥ್ ಶಿರಗಳಲೆ ಬ್ಲಾಗ್ ವಿಮರ್ಶೆ
https://srikannadi.blogspot.com/2016/09/blog-post.html
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.