ಅಮಲನ ಕಥೆ

ಅಮಲನ ಕಥೆ

Regular price
$1.49
Sale price
$1.49
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

'ಅಮಲನ ಕಥೆ' ಕುವೆಂಪು ಅವರು ಬರೆದ ಮೊದಲ ಪ್ರಕಟಿತ ಕನ್ನಡ ನೀಳ್ಗಾವ್ಯ. ಜೇಮ್ಸ್ ಕಸಿನ್ಸ್ ಅವರನ್ನು ಕಾಣುವುದಕ್ಕೆ ಮುಂಚೆಯೇ 1923ರಲ್ಲಿ ಈ ಕಾವ್ಯವನ್ನು ರಚಿಸಿದ್ದೇನೆಂದು ತಮ್ಮ ಆತ್ಮಕತೆ 'ನೆನಪಿನ ದೋಣಿಯಲ್ಲಿ' ಸೂಚಿಸಿದ್ದಾರೆ. ಕೊಟ್ಟ ಭಾಷೆಗೆ ತಪ್ಪಿ ನಡೆಯದೆ ನಿಷ್ಠೆ ಮತ್ತು ಛಲದಿಂದ ದೈವದ ಪ್ರೀತಿಗೆ ಪಾತ್ರನಾಗುವ ಮತ್ತು ಸಾಕ್ಷಾತ್ಕರಿಸಿಕೊಳ್ಳುವ ಶ್ರೀಸಾಮಾನ್ಯನ ಕತೆ ಈ ಕಾವ್ಯದ ವಸ್ತುವಾಗಿದೆ. ಅಮಲ ಒಣ ಕಟ್ಟಿಗೆಯನ್ನು ಕಡಿದು ಜೀವನ ಮಾಡುವ ಪರಿಸರಸ್ನೇಹಿ. ಗೋವಿನ ಹಾಡಿನ ಲಯದಲ್ಲಿ ಇದು ರಚನೆಯಾಗಿದೆ. ಸರಳ ಭಾಷೆ, ಪದಸಂಪತ್ತು, ನಿಸರ್ಗ ಚಿತ್ರಗಳು ಈ ಕಾವ್ಯದ ಮುಖ್ಯ ಆಕರ್ಷಣೆ. ಅಮಲನ ಜೀವನದಲ್ಲಿ ಘಟಿಸುವ ಘಟನೆಯ ಸುತ್ತ ಉನ್ನತ ನೀತಿ ಮತ್ತು ತತ್ವವನ್ನು ಈ ಕಾವ್ಯ ಹೊಂದಿದೆ. ಕರುಣೆಯೆಂಬುದು ಎಲ್ಲ ಕಾಲಕ್ಕೂ ಅಗತ್ಯವಾದ ಜೀವನ ಮೌಲ್ಯ, ಅದು ಎಲ್ಲರ ಹೃದಯದಲ್ಲೂ ಇರಬೇಕಾದ ಅಗತ್ಯವನ್ನು ಈ ಕಾವ್ಯ ಅಭಿವ್ಯಕ್ತಿಸುತ್ತದೆ. ‘ಕರುಣೆಯೆಂಬ ಮುಕುಟಕ್ಕಿಂತಲೂ ಬೇರೆಯ ಮುಕುಟವಿರುವುದೇ? ಕರುಣೆಯೆಂಬ ಖಡ್ಗಕ್ಕಿಂತಲೂ ಪರಮ ಖಡ್ಗವು ಇರುವುದೇ?’ ಎಂಬ ಪ್ರಶ್ನೆಯ ಶೋಧವನ್ನು ಕುವೆಂಪು ಅವರು ತಮ್ಮ ಬಾಲ್ಯದ ಮೊದಲ ಕಾವ್ಯದಲ್ಲೇ ನಡೆಸಿದ್ದಾರೆ. ಈ ತತ್ವ ತಮ್ಮ ಎಲ್ಲ ಕೃತಿಗಳಲ್ಲೂ ವಿಕಸನಗೊಂಡು ಪಾಪಿಗೂ ಉದ್ಧಾರವಿದೆಯೆಂಬ ದಾರ್ಶನಿಕತೆಯ ಕಡೆಗೆ ಕ್ರಿಯಾಶೀಲವಾಗುತ್ತದೆ.

- ಕೆ.ಸಿ.ಶಿವಾರೆಡ್ಡಿ - ವಿಜಯಕರ್ನಾಟಕದಲ್ಲಿ https://vijaykarnataka.com/lavalavk/weekly-magazine/books/-1924/articleshow/16980771.cms

 

ಪುಟಗಳು: 32

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !