ಅಬಲೆಯ ಬಲೆ

ಅಬಲೆಯ ಬಲೆ

Regular price
$3.99
Sale price
$3.99
Regular price
Sold out
Unit price
per 
Shipping does not apply

GET FREE SAMPLE

‘ಅಬಲೆಯ ಬಲೆ’ ಎಂಬ 'ಪನ್’ ಉಪಯೋಗಿಸಿ ಉಪಯೋಗಿಸಿ ಶೀರ್ಷಿಕೆ ಇತ್ತಿದ್ದಕ್ಕೂ ಕತೆಯಲ್ಲಿ ಬಲವಾದ ಕಾರಣವಿದೆ. ಇದು ಇಂದಿನ ಪ್ರಸ್ತುತ ವಿದ್ಯಮಾನಗಳಲ್ಲಿ ತಲೆಬರಹದಲ್ಲಿ ಕಾಣಿಸಿಕೊಳ್ಳುವ “ಮನಿ ಲಾಂಡರಿಂಗ್” ( ಅಕ್ರಮ ಹಣ ವಹಿವಾಟು) ವಿವಾದದ ಸುತ್ತ ಹೆಣೆದ ಓರ್ವ ಅಸಹಾಯಕ ತಾಯಿಯ ನಿಗೂಢ ಕತೆ. ಈಕೆ ಮತ್ತು ಪತ್ತೇದಾರರು ಹೇಗೆ ಚಿತ್ರರಂಗ ಮತ್ತು ಬ್ಯಾಂಕಿಂಗ್ ಎರಡನ್ನೂ ಸುತ್ತಿರುವ ಕರಾಳ ದಂಧೆಯ ಮುಸುಕನ್ನು ಸರಿಸಬಲ್ಲರು ಎಂಬುದೇ ಕತೆಯ ಸ್ವಾರಸ್ಯಕರ ಸವಾಲು.

ಈ ಘಟ್ಟದಲ್ಲಿ ವಿಜಯ್- ವಿಕ್ರಮ್ ಜೋಡಿಯ ಹಿನ್ನೆಲೆ ಮತ್ತು ವ್ಯಕ್ತಿತ್ವ ಚಿತ್ರ ನೀಡುವುದು ಸೂಕ್ತವೆನಿಸಿದೆ. ವಿಜಯ್ ದೇಶಪಾಂಡೆ ಈ ಜೋಡಿಯ ತಲೆ (ಬ್ರೈನ್) ಆದರೆ ವಿಕ್ರಮ್ ಕಾರಂತ್ ಅದರ ಸಬಲ ದೇಹ.(ಬ್ರಾನ್). ವಿಜಯ್ ಸೂಕ್ಷ್ಮ ಗ್ರಾಹಿ, ಬಿಜಿನೆಸ್ಸಿನಲ್ಲಿ ನಿಪುಣ. ಸುಳಿವುಗಳನ್ನು ಪತ್ತೆಹಚ್ಚಬಲ್ಲ ಜಾಣ. ವಿಕ್ರಮ್ ಓರ್ವ ಮಿಲಿಟರಿಯ ಹೀ-ಮ್ಯಾನ್ ತರಹ ವ್ಯಕ್ತಿತ್ವದವನು. ಅಸ್ತ್ರ-ಶಸ್ತ್ರಗಳಲ್ಲಿ, ದೈಹಿಕ ಹೋರಾಟದಲ್ಲಿ ಒಂದು ಕೈ ಮೇಲು. ಇಬ್ಬರೂ ಮಿಲಿಟರಿ ಪೋಲೀಸ್ ವೃತ್ತಿಯಲ್ಲಿದ್ದು ಬಂದು ಜಂಟಿಯಾಗಿ ಸಂಸ್ಥೆ ಕಟ್ಟಿದವರು. ವಿಜಯ್‌ಗೆ ಪ್ರೇಮಿಯಾಗಿ ಆಗಲೇ ಲೂಸಿ ಎಂಬ ಆಂಗ್ಲೋ ಇಂಡಿಯನ್ ಸಮರ್ಥ ವಕೀಲೆ ಹಿಂದಿನ ಕರಾಳಗರ್ಭ ಕತೆಯಲ್ಲಿ ಪರಿಚಿತಳಾಗಿದ್ದಾಳೆ. ಆದರೆ ಆಕೆ ಈ ಕತೆಯ ಓಟಕ್ಕೆ ಅಡ್ಡಿಬರದಂತೆ ಆಗಾಗ ಪೋಷಕ ಪಾತ್ರಧಾರಿಯಂತೆ ಬಂದುಹೋಗುತ್ತಾಳೆ. ಈ ಸರಣಿಯಲ್ಲಿ ಇನ್ನೂ ವಿಕ್ರಮನಿಗೆ ಅವನ ಬಾಳ ಸಂಗಾತಿ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ಏನಾಗುತ್ತದೋ ಕಾದು ನೋಡಬೇಕು! ಈ ಜೋಡಿ ಪತ್ತೇದಾರರ ಮೂರನೆಯ ಸಾಹಸವನ್ನು ಬರೆಯುತ್ತಿದ್ದೇನೆ.

 

 -ನಾಗೇಶ್ ಕುಮಾರ್ ಸಿಎಸ್

 

ಪುಟಗಳು: 150

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !