ಆಪರೇಷನ್ ಬೆಳಕಿನ ಕಿಡಿಗಳು (ಆಡಿಯೋ  ಬುಕ್)

ಆಪರೇಷನ್ ಬೆಳಕಿನ ಕಿಡಿಗಳು (ಆಡಿಯೋ ಬುಕ್)

Regular price
$6.99
Sale price
$6.99
Regular price
Sold out
Unit price
per 
Shipping does not apply

GET FREE SAMPLE

ಕಳೆದ ದಶಕದಲ್ಲಿ ನಮ್ಮ ಯುವಕ, ಯುವತಿಯರ ಬದುಕಿನ ಶೈಲಿ ತುಂಬ ಬದಲಾಗಿದೆ. ಎಷ್ಟೆಂದರೆ ಮಧ್ಯ ವಯಸ್ಕರಿಗೂ ಅರ್ಥವೇ ಆಗದಷ್ಟು! ಅದರಲ್ಲೂ ನಗರದ ಕಾಲೇಜು ವಿದ್ಯಾರ್ಥಿಗಳ ಬದುಕು, ಅವರ ಆದ್ಯತೆಗಳು, ಅವರ ತವಕ/ತಲ್ಲಣಗಳು ಮತ್ತು ಅವರ ಸಂಭ್ರಮಗಳೂ ತೀರ ಹೊಸರೂಪಗಳನ್ನು ಪಡೆದಿವೆ. ಈ ಬದಲಾವಣೆಗಳ ಬಗ್ಗೆ ಮೂಗು ಮುರಿಯುವುದು ವಯಸ್ಕರ ಸಾಮಾನ್ಯ ಪ್ರತಿಕ್ರಿಯೆಯಾದರೂ ಅದು ಅಷ್ಟು ಸಮರ್ಪಕವಾದದ್ದೆಂದು ನನಗನ್ನಿಸುವುದಿಲ್ಲ. ಉದಾಹರಣೆಗೆ, ಈಗಿನ ಯುವಕರಲ್ಲಿ ಪರಿಸರದ ಬಗೆಗಿನ ಕಾಳಜಿ, ಸಾಮಾಜಿಕ ಸಮಾನತೆಯ ಬಗೆಗಿನ ನಂಬಿಕೆ, ಲಿಂಗ ಸಮಾನತೆಯ ಬಗ್ಗೆ ಸಂವೇದನೆ ಇವೆಲ್ಲವೂ ಹಿಂದಿನ ಪೀಳಿಗೆಗಿಂತ ತುಂಬ ಹೆಚ್ಚಿದೆ ಎಂದು ಗುರುತಿಸಬೇಕು. ಹಾಗಾಗಿ ಅವರ ಹೊಸ ಕಾಲದ ಮೌಲ್ಯಗಳ ಬಗ್ಗೆ ಅಪನಂಬಿಕೆಯನ್ನು ಬಿಟ್ಟು ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯ ಖಂಡಿತ ಇದೆ. 

ಇಂಥ ಇಪ್ಪತ್ತೊಂದನೇ ಶತಮಾನದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳನ್ನು ಕೇಂದ್ರವಾಗಿಸಿಕೊಂಡು ಒಂದು ಒಳ್ಳೆಯ ಥ್ರಿಲ್ಲರ್ ಕಾದಂಬರಿಯನ್ನು ಹೊರತರಬೇಕೆನ್ನಿಸಿದಾಗ ನಾವು ಸಂಪರ್ಕಿಸಿದ್ದು ಕನ್ನಡದ ಹೊಸಗಾಲದ ಬರಹಗಾರ್ತಿಯಾದ ಸಂಯುಕ್ತಾ ಪುಲಿಗಲ್ ಅವರನ್ನು. ಅವರು ಈಗಾಗಲೇ ಒಬ್ಬ ಸಶಕ್ತ ಅನುವಾದಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಅನುವಾದಗಳು ಸಪ್ಪೆಯಾದ ಭಾಷಾಂತರವಾಗದೆ ತಾವೇ ತಾವಾಗಿ ಸೃಷ್ಟಿಶೀಲ ಕೃತಿಗಳಾಗಿವೆ. ಓದುಗರ ಮನಸ್ಸನ್ನು ಮುಟ್ಟಿವೆ, ಗೆದ್ದಿವೆ. ನಾವು ಅವರೊಡನೆ ಹೊಸ ಪುಸ್ತಕದ ಬಗ್ಗೆ ಮಾತು ತೆಗೆದಾಗ, ಆಶ್ಚರ್ಯವೆನಿಸುವಂತೆ ಅವರೂ ಕೂಡ ಇಂಥ ಯಂಗ್ ರೀಡರ್ಸ್ ಗಾಗಿ ಇಂಗ್ಲಿಷಿನ ಎನಿಡ್ ಬ್ಲೈಟನ್ ಅವರ ಫೇಮಸ್ ಫೈವ್ ರೀತಿಯ ಪುಸ್ತಕಗಳನ್ನು ಕನ್ನಡದಲ್ಲಿ ನಮ್ಮದೇ ಸೊಗಡಿನಲ್ಲಿ ತರಬೇಕು ಎಂದುಕೊಂಡಿದ್ದಾಗಿ ಹೇಳಿದರು. ಅಲ್ಲಿಗೆ ನಮ್ಮ ಗುರಿಗಳು ಒಂದುಗೂಡಿದವು. ಹೀಗೆ ಹುಟ್ಟಿದ ಕಾದಂಬರಿಯೇ 'ಆಪರೇಶನ್ ಬೆಳಕಿನ ಕಿಡಿಗಳು'. 

'ಬೆಳಕಿನ ಕಿಡಿಗಳು' ಒಂದು ಹೊಸ ರೀತಿಯ ಕತೆಯನ್ನೊಳಗೊಂಡಿದೆ. ಮತ್ತು ಪಾತ್ರಗಳೆಲ್ಲವೂ ಹೊಚ್ಚ ಹೊಸ ಶೈಲಿ, ಕ್ಯಾರೆಕ್ಟರುಗಳನ್ನು ಮೆರೆಯುತ್ತ ಹಚ್ಚ ಹಸಿರಾಗಿ ಕಂಗೊಳಿಸಿವೆ. ಕಾಲೇಜು ವಿದ್ಯಾರ್ಥಿಗಳ ಸಂಭಾಷಣೆಗಳೆಲ್ಲ ತೀರ ಅಪ್ಯಾಯಮಾನವಾಗಿ ಹೊಸಗಾಲದ ಛಾಪನ್ನು ಹೊಂದಿವೆ. ಅವರಿಗೆ ಎದುರಾದ ಸಮಸ್ಯೆ ಎಂತಹುದು? ಅದು ಕೂಡ ತೀರ ಆಧುನಿಕ ಆಯಾಮಗಳನ್ನು ಒಳಗೊಂಡದ್ದು! ಅದನ್ನು ಅವರು ಎದುರಿಸುವ ಬಗೆ, ಮೆರೆಯುವ ಸಾಹಸ, ಅದಲ್ಲೆದರ ಜೊತೆ ಎಂದೂ ಕಳೆದುಕೊಳ್ಳದ ಸಹಾನುಭೂತಿ ಎಲ್ಲವನ್ನೂ ನೀವು ಅಸ್ವಾದಿಸಿ ನಲಿಯಬೇಕು! ನಲಿಯುತ್ತೀರಿ ಎನ್ನುವ ನಂಬಿಕೆ ನಮಗಿದೆ. ನೀವು ಕೂಡ ಕಾಲೇಜು ವಿದ್ಯಾರ್ಥಿಗಳಾಗಿದ್ದರಂತೂ ಇದರಲ್ಲಿ ನಿಮ್ಮನ್ನೇ ನೀವು ಕಂಡುಕೊಳ್ಳುತ್ತೀರಿ.

ಕೇಳಿ, ಆನಂದಿಸಿ! ಅಷ್ಟೇ ಅಲ್ಲ ಯುವಕ,ಯುವತಿಯರನ್ನು ಅರ್ಥ ಮಾಡಿಕೊಳ್ಳಿ!

 

-ಪವಮಾನ್ ಅಥಣಿ
ಮೈಲ್ಯಾಂಗ್ ಬುಕ್ಸ್

 

 ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.