ಬದುಕಲು ತಿನ್ನಬೇಕು. ತಿನ್ನಲು ಬದುಕುವುದಲ್ಲ. ನಿಜ, ಆದರೆ ಬದುಕಲು ಏನು ತಿನ್ನಬೇಕು? ತಿಳಿದು ತಿಂದಲ್ಲಿ ಮಾತ್ರ ಆರೋಗ್ಯ, ಇಲ್ಲದಿದ್ದಲ್ಲಿ ಎಲ್ಲ ಇದ್ದೂ ಅನಾರೋಗ್ಯಕ್ಕೆ ಈಡಾಗುವ ಸ್ಥಿತಿ ಇಂದಿನ ಆಧುನಿಕ ಜೀವನದಲ್ಲಿದೆ. ನಮ್ಮ ಆಹಾರದಲ್ಲೇ ನಮ್ಮ ಜೀವನದ ಸಂತಸದ ಗುಟ್ಟೂ ಅಡಗಿದೆ. ಝೆನ್ ಗುರು ಒಬ್ಬರು ಜ್ಞಾನೋದಯವೆಂದರೆ ಹಸಿವಾದಾಗ ಊಟ ಮಾಡುವುದು, ಬಾಯಾರಿಕೆಯಾದಾಗ ನೀರು ಕುಡಿಯುವುದು, ಅಯಾಸವಾದಾಗ ಮಲಗುವುದು ಎನ್ನುತ್ತಾನೆ! ಅದೇ ರೀತಿ ಇನ್ನೊಬ್ಬ ಝೆನ್ ಮಾಸ್ಟರ್ ಸತ್ಯ ದರ್ಶನಕ್ಕೂ ಮೊದಲು ಏನು ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ‘ಕಟ್ಟಿಗೆ ಕಡಿಯುವುದು, ಅಡಿಗೆ ಮಾಡುವುದು’’ಎನ್ನುತ್ತಾನೆ. ಈಗ ಎಂದು ಮತ್ತೊಮ್ಮೆ ಕೇಳಿದಾಗ ‘ಕಟ್ಟಿಗೆ ಕಡಿಯುವುದು, ಅಡಿಗೆ ಮಾಡುವುದು’ ಎನ್ನುತ್ತಾನೆ! ಆಹಾರದ ಕುರಿತು ನಮ್ಮ ತಿಳಿವನ್ನು ಹಿಗ್ಗಿಸುವ ಹಲವು ಉಪಯುಕ್ತ ಬರಹಗಳನ್ನು ಆಹಾರ ತಜ್ಞ ಕೆ.ಸಿ.ರಘು ಅವರು ಇಲ್ಲಿ ತಂದಿದ್ದಾರೆ.
ಪುಟಗಳು: 144