ದಕ್ಷಿಣ ಭಾರತದ ಪ್ರಸಿದ್ಧ ನಟರಾದ ಕನ್ನಡಿಗ ಪ್ರಕಾಶ ರೈ ಅವರ ಅಂಕಣಗಳ ಕೃತಿ ತನ್ನ ಸರಳ ಭಾಷೆಯಿಂದ ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡುವ ಶೈಲಿಯಲ್ಲಿ ಓದುಗನನ್ನು ಕರೆದೊಯ್ಯುತ್ತೆ. ಇಲ್ಲಿ ಕೃಷಿ, ಕೈಗಾರಿಕೆ, ವ್ಯಾಪಾರದ ಯಾಂತ್ರಿಕ ಬದುಕು, ಪ್ರೀತಿ, ನಂಬಿಕೆ, ಹಣ ಎಲ್ಲದರ ನಡುವಿನ ಈ ಕಾಲದ ತಳಮಳಗಳು ಓದುಗನನ್ನು ಚಿಂತನೆಗೆ ಹಚ್ಚಿಸುತ್ತವೆ. ಇರುವುದೆಲ್ಲವ ಬಿಟ್ಟು ಇರದುದ ನೆನೆದು ತುಡಿವ ಇಂದಿನ ಜೀವನದಲ್ಲಿ ಅರೆಗಳಿಗೆ ನಿಂತು ಹಿಂತಿರುಗಿ ನೋಡುವಂತೆ ಓದುಗನನ್ನು ಪ್ರೇರೆಪಿಸುವ ಬರಹಗಳು ಇಲ್ಲಿವೆ.
ಪುಟಗಳು: 152