ಬಾಳುವಂಥ  ಹೂವೇ, ಬಾಡುವಾಸೆ ಏಕೆ?

ಬಾಳುವಂಥ ಹೂವೇ, ಬಾಡುವಾಸೆ ಏಕೆ?

Regular price
$7.99
Sale price
$7.99
Regular price
Sold out
Unit price
per 
Shipping does not apply

ಮದ್ಯವ್ಯಸನ ಒಂದು ಸಮಸ್ಯೆ, ಒಂದು ರೋಗ ಎಂಬುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಅದು ಬೇರೊಂದು ಸಮಸ್ಯೆಯ ಸಂಕೇತ/ ಚಿಹ್ನೆ/ ಸೂಚನೆ ಎಂಬುದು.

ಹೌದು, ಇದು ಮದ್ಯವ್ಯಸನದ ಬಗ್ಗೆ ತಿಳಿಸುವ ಒಂದು ಪುಸ್ತಕ. ಮದ್ಯವ್ಯಸನದ ಕೆಡುಕುಗಳು ಮತ್ತು ಮದ್ಯವ್ಯಸನದಿಂದ ಬಿಡುಗಡೆ ಹೊಂದುವ ಬಗ್ಗೆ ಸಲಹೆಗಳಿರುವ ಪುಸ್ತಕ. ಯಾರು ಬೇಕಿದ್ದರೂ ಮದ್ಯವ್ಯಸನದ ಚಟಕ್ಕೆ ಬಲಿಯಾಗಬಹುದು, ಯಾರು ಬೇಕಾದರೂ ಅದನ್ನು ಬಿಡಬಹುದು, ಯಾವುದೇ ವಯಸ್ಸಿನಲ್ಲಿಯೂ ಬಿಡಬಹುದು ಮತ್ತು ಯಾವಾಗ ಬೇಕಾದರೂ ಬಿಡಬಹುದು. ಆದರೆ ಮದ್ಯವ್ಯಸನ ಬಿಡಲು ಮನಸ್ಸು ಮಾಡಬೇಕಷ್ಟೆ.

ಪೂಜಾ ಭಟ್‌ ಮದ್ಯಕ್ಕೆ ಬೆನ್ನು ಮಾಡುವ ನಿರ್ಧಾರ ಕೈಗೆತ್ತಿಕೊಂಡಾಗ ಆಕೆಯ ತಂದೆ ಆಕೆಯ ಜೊತೆ ನಿಂತ ರೀತಿ ಆಕೆಯಲ್ಲಿ ಹೊಸ ಧೈರ್ಯ ತುಂಬಿತ್ತು. ಆಕೆಗೆ ಮದಿರೆ ಸಪ್ಲೈ ಮಾಡುತ್ತಿದ್ದ ಹುಡುಗ ತೋರಿದ ಕಾಳಜಿ ಆಕೆಯ ನಿರ್ಧಾರಕ್ಕೆ ಮತ್ತಷ್ಟು ಬಲ ನೀಡಿತು. ಇದು ಮದ್ಯವ್ಯಸನದಿಂದ ಮುಕ್ತರಾಗಲು ಜನರಿಗೆ ಅಗತ್ಯ ಇರುವ ಕೌಟುಂಬಿಕ ಮತ್ತು ಸಾಮಾಜಿಕ ಸಹಕಾರಗಳನ್ನು ತಿಳಿಹೇಳುತ್ತದೆ. ಇಂಥಾ ಸಹಕಾರ ಪೂಜಾ ಭಟ್‌ಗೆ ದೊರಕುವುದು ಸುಲಭ. ಆದರೆ ಡಾ॥ ಭಂಡಾರಿ ಮತ್ತು ಶ್ರೀ ನಾಗರಾಜ್‌ ಹೇಳುವ ಕತೆಗಳ ಪಾತ್ರಧಾರಿಗಳಿಗೆ ಅಷ್ಟೊಂದು ಸಹಾನುಭೂತಿ ಅನುಕಂಪ, ತಾಳ್ಮೆ, ಸಹಕಾರ ಸಿಗುವುದು ಸುಲಭವಲ್ಲ. ಯಾಕೆಂದರೆ ನಮ್ಮ ಸಮಾಜ ಎಲ್ಲಾ ವ್ಯಕ್ತಿಗಳಿಗೆ ಗೌರವ, ಬೆಲೆ ಕೊಡುವುದನ್ನು ಕಲಿತಿಲ್ಲ. ಇದು ಬದಲಾಗಬೇಕು. ಆಗ ಒಂದು ಹೆಚ್ಚು ಆರೋಗ್ಯಕರವಾದ ಸಮಾಜ, ಪಾನ ಮುಕ್ತ ಸಮಾಜ ಕಟ್ಟಲು ಸಾಧ್ಯವಾಗಬಹುದು. ನಮ್ಮ ಸುತ್ತಮುತ್ತಲಿರುವ ವ್ಯಸನಿಗಳಿಗೆ ನಾವೆಲ್ಲರೂ ಅವರ ಕುಟುಂಬದಂತೆಯೇ ಸಹಕಾರ, ಬೆಂಬಲ ನೀಡಲು ಸಾಧ್ಯವಾಗಬೇಕು. ಇಲ್ಲವಾದಲ್ಲಿ ಇಲ್ಲಿನ ಕೆಲವು ಕತೆಗಳ ಹಾಗೆ ಅಂತ್ಯ ದುರಂತಮಯವಾಗಬಹುದು.

ಹಿಂದುಸ್ಥಾನೀ ಸಂಗೀತ ಕ್ಷೇತ್ರದ ದಿಗ್ಗಜ ಪಂಡಿತ್‌ ಭೀಮಸೇನ ಜೋಷಿ ಹಿಪ್ನೋಥೆರಪಿಯ ಸಹಾಯ ಪಡೆದರೆ, ನಟರತ್ನಾಕರ ಮಾಸ್ಟರ್‌ ಹಿರಣ್ಣಯ್ಯನವರು ವಿಮಾನದಲ್ಲಿ ವಿದೇಶಿ ಮಹಿಳೆಯಿಂದ ಅವಮಾನಿತರಾದಾಗ ಸ್ವತಃ ತಾನೇ ದೃಢ ಸಂಕಲ್ಪ ಮಾಡಿ ತನ್ನನ್ನು ಜೀವನವಿಡೀ ಸಹಿಸಿಕೊಂಡ ತನ್ನ ಹೆಂಡತಿಯ ಬಗ್ಗೆ ಇರುವ ಕನಿಕರದಿಂದ ಮದ್ಯಪಾನ ನಿಲ್ಲಿಸಿದರಂತೆ. ಆದ್ದರಿಂದ ಮಿತ್ರರೇ ನಿರಾಶರಾಗಬೇಡಿ. ಈ ಮದ್ಯವ್ಯಸನದಿಂದ ಹೊರಬರುವ ಪ್ರಯತ್ನಕ್ಕೆ ಈ ಪುಸ್ತಕ ನಾಂದಿಯಾಗಲಿ ಎಂಬುವದೇ ನಮ್ಮ ಆಶಯ.

ಪುಟಗಳು: 184