ಸಮಯವನ್ನು ಕೊಲ್ಲಬೇಡಿ ಪ್ಲೀಸ್‌!

ಸಮಯವನ್ನು ಕೊಲ್ಲಬೇಡಿ ಪ್ಲೀಸ್‌!

Regular price
$7.99
Sale price
$7.99
Regular price
Sold out
Unit price
per 
Shipping does not apply

ಈ ಸಮಯ ಎಂಬ ಅದ್ಭುತವಾದ ಉಡುಗೊರೆಯನ್ನು ಸಮರ್ಪಕವಾಗಿ ಬಳಸಿಕೊಂಡು ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿಕೊಂಡು, ಇಲ್ಲದವನ್ನು ಕಲಿತುಕೊಂಡು ಎತ್ತರೆತ್ತರಕೆ ಸಾಗಲು ನೆರವಾಗುವುದೇ ಈ ಪುಸ್ತಕದ ಉದ್ದೇಶ. ಇದರಲ್ಲಿ ಕೆಲವು ನುಡಿಗಳು, ಕೆಲವು ಸಲಹೆಗಳು ಪದೇ ಪದೇ ಬರುತ್ತವೆ. ಅವುಗಳ ಪುನರಾವರ್ತನೆ ಅವು ಎಷ್ಟು ಮುಖ್ಯ ಎಂಬುದರ ದ್ಯೋತಕವೇ ಹೊರತು ನಿರ್ಲಕ್ಷ್ಯದಿಂದ ಆಗಿರುವುದಲ್ಲ!

ಪ್ರತಿಯೊಬ್ಬರೂ ಚಿನ್ನದ ಗಣಿಯೇ. ಪ್ರತಿಭೆಯ ಮೇಲೆ ಯಾರೊಬ್ಬರ ಸ್ವಾಮ್ಯ ಇಲ್ಲ. ಪ್ರತಿಭೆ ಏಕಮುಖಿಯೂ ಅಲ್ಲ. ಅದಕ್ಕೆ ವಿಭಿನ್ನ ಪ್ರಾಕಾರಗಳಿವೆ. ಹಲವರಿಗೆ ಹಲವು ರೀತಿಯ ಪ್ರತಿಭೆಗಳು ಇರುತ್ತವೆ. ಇವನ್ನು ಗುರುತಿಸಿಕೊಂಡು ಬಳಸಿಕೊಂಡರೆ ಸಾಧಕರಾಗುವುದು ಖಚಿತ. ಇದನ್ನು ನನ್ನ ಪುಸ್ತಕ ಆಕಾಶಕ್ಕೆ ಏಣಿ ಹಾಕಿಯಲ್ಲಿ ವಿವರವಾಗಿ ಪ್ರಸ್ತಾಪಿಸಿದ್ದೇನೆ. ನಮ್ಮಲ್ಲಿ ಹುದುಗಿರುವ ಪ್ರತಿಭೆಗಳು ವಂಶವಾಹಿಯಾಗಿ ಕೆಲವು ಬಂದಿದ್ದರೆ ಕೆಲವನ್ನು ನಾವು ಕಲಿತಿರುತ್ತೇವೆ. ಸಮಯ ನಮಗೆ ಪ್ರಕತಿಯಿಂದ ಸಿಕ್ಕ ಕೊಡುಗೆ. ನಮ್ಮ ಪ್ರತಿಭೆಗಳ ಮತ್ತು ನಮಗೆ ಸಿಕ್ಕಿರುವ ಸಮಯಗಳನ್ನು ಅಮೂಲ್ಯವಾದವು ಎಂದು ಗುರುತಿಸಿಕೊಂಡು ಸರಿಯಾಗಿ ಬಳಸಿಕೊಂಡರೆ, ಆಕಾಶಕ್ಕೆ ಏಣಿ ಹಾಕಿ ಅಲ್ಲಿಯ ವಿಸ್ಮಯ ಲೋಕದಲ್ಲಿ ವಿಹರಿಸಿಕೊಂಡು ಅಲ್ಲಿಗಿಂತ ಮೇಲಿರುವ ಲೋಕಗಳ ಮಾಧುರ್ಯ ಸವಿಯಲು ಹೋಗಬಹುದು.

ಪುಟಗಳು - 152