ಹಣ ಮಾಡುವುದು ಒಂದು ಕಲೆ . ಹಣ ಉಳಿಸುವದು ಹೇಗೆ ,ಬೆಳೆಸುವುದು ಹೇಗೆ ಹೀಗೆ ಅನೇಕ ವಿಚಾರಗಳನ್ನು ಲೇಖಕರು ಓದುಗರ ಮುಂದಿಡುತ್ತಿದ್ದಾರೆ. ಓದು ನಿಮ್ಮದು. ದಾರಿಯೂ ನಿಮ್ಮದು.
ಸೋಲದಿರಲಿ ಹೆಜ್ಜೆ.
ಏನೂ ಇಲ್ಲದವರು, ಏನೂ ಓದದವರು ಭಯಂಕರ ಶ್ರೀಮಂತರಾದವರಿದ್ದಾರೆ. ಸಿಕ್ಕಾಪಟ್ಟೆ ಓದಿದವರು, ಏನೇನೋ ತಿಳಿದುಕೊಂಡವರು ಶ್ರೀಮಂತರಾಗದೇ ಹೋದವರಿದ್ದಾರೆ.
ನಮ್ಮೂರಿಂದ ಬಹಳ ಜನ ಹೊಟ್ಟೆಪಾಡಿಗಾಗಿ ಊರು ಬಿಟ್ಟು ಮುಂಬೈ ಅನ್ನೋ ಮಾಯಾಲೋಕ ಸೇರುತ್ತಾರೆ. ಬಹಳ ಹಿಂದೆಯೇ ಆ ಊರಿಗೆ ಹೋದ ಒಂದಷ್ಟು ಮಂದಿ ಊಹಿಸಲಾಗದಷ್ಟು ಎತರಕ್ಕೆ ಬೆಳೆದು ನಿಂತರು. ಹೋಗುವಾಗ ಅವರ ಬಳಿ ದುಡ್ಡಿರಲಿಲ್ಲ. ಪದವಿಯೂ ಇರಲಿಲ್ಲ. ಒಂದಷ್ಟು ವರ್ಷ ಅಲ್ಲಿ ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದರು. ಬೆಳಿಗ್ಗೆದ್ದು ಕಾಫಿ ಕುಡಿದು ಎರಡಿಡ್ಲಿ ತಿಂದು ಆಫೀಸ್ ಸೇರಿ ಸಂಜೆ ಹೊತ್ತು ಸುಸ್ತಾಗಿ ಮನೆಗ್ ಬಂದು ತಾಚಿ ಮಾಡೋರೆಲ್ಲಾ ಒಂದೇ ತರ ಜೀವನ ಸಾಗಿಸುತ್ತಿರುವ ಹೊತ್ತಿಗಾಗಲೇ ಇವರೆಲ್ಲಾ ಉಳಿದವರನ್ನು ಮೀರಿ ಬೆಳೆದರು. ಬೆಳೆಯುತ್ತಾ ಹೋದರು.
ಪಾಠ ಪುಸ್ತಕಗಳಿಂದ ಅವರು ಏನೂ ಕಲಿಯಲಿಲ್ಲ. ಬದುಕು ಕಲಿಸಿದ ಪಾಠವನ್ನು ಯಾವತ್ತೂ ಮರೆಯಲಿಲ್ಲ. ಶ್ರೀಮಂತಿಕೆ ಅವರನ್ನೆಲ್ಲಾ ಅರಸುತ್ತಾ ಬಂದಿತು. ಹೀಗೆಲ್ಲಾ ಅವರು ದೊಡ್ಡವರಾಗಿ ಬದಲಾದ ನಂತರ ಅವರು ದೊಡ್ಡವರಾದ ದಾರಿ ಹೇಗಿತ್ತು ಎಂಬ ಕುತೂಹಲಕ್ಕೆ ಉತ್ತರ ಹುಡುಕುತ್ತಾ ಹೋರಟಾಗ ಸಿಕ್ಕ ನಮ್ಮೂರ ಧಣಿಗಳು ಹೇಳುತ್ತಾ ಹೋದ ಬೆಚ್ಚಿ ಬೀಳಿಸುವ, ಅಚ್ಚರಿಗೊಳಿಸುವ ಮತ್ತು ಸ್ಫೂರ್ತಿಯಾಗುವ ಶ್ರೀಮಂತಿಕೆಯ ಗುಟ್ಟು ಇದು. ಪಾಠ ಪುಸ್ತಕಗಳು ಹೇಳದ, ಇನ್‌ವೆಸ್ಟ್-ಮೆಂಟ್ ಪ್ಲಾನರ್‌ಗಳು ತಿಳಿಸದ, ಫೈನಾನ್ಸರ್‌ಗಳು ಅರಿಯದ ಅನುಭವ ಸತ್ಯ.
ಶಾಲೆಯಲ್ಲಿ ಎಲ್ಲಾ ಸಮಯದಲ್ಲೂ ನೀವು ಚೆನ್ನಾಗಿ ಓದಿ, ಒಳ್ಳೆ ಕೆಲ್ಸ ಪಡ್ಕೋಬೇಕು ಅಂತ ಹೇಳುತ್ತಾರೆಯೇ ಹೋರತು. ನೀನು ದೊಡ್ಡ ಬಿಸಿನೆಸ್‌ಮನ್ ಆಗು ಅಂತ ತಪ್ಪಿಯೂ ಹೇಳುವುದಿಲ್ಲ. ಇನ್‌ವೆಸ್ಟ್-ಮೆಂಟ್ ಪ್ಲಾನರ್‌ಗಳು ಇರುವ ಎಲ್ಲಾ ಮ್ಯೂಚುವಲ್ ಫಂಡ್, ಶೇರ್ ಮತ್ತಿತರ ಯೋಜನೆಗಳ ಮಾಹಿತಿ ನೀಡು ಇಂತಿಷ್ಟು ವರ್ಷದಲ್ಲಿ ನೀವು ಇಂತಿಷ್ಟು ಗಳಿಸಬಹುದೆಂದು ನಗುತ್ತಾರೆಯೇ ಹೊರತು ಬಿಸಿನೆಸ್ ಮಾಡಿ ಶ್ರೀಮಂತರಾಗುವ ಪ್ಲಾನನ್ನು ಯಾವತ್ತೂ ಹೇಳುವುದಿಲ್ಲ.
ಪುಟಗಳು: 136