ಉಪ್ಪಿಗಿಂತ ರುಚಿ ಬೇರೆ ಇಲ್ಲ

ಉಪ್ಪಿಗಿಂತ ರುಚಿ ಬೇರೆ ಇಲ್ಲ

Regular price
$4.99
Sale price
$4.99
Regular price
Sold out
Unit price
per 
Shipping does not apply

Upendra is one of the great directors in Indian cinema...ಈ ಮಾತನ್ನು ಹೇಳಿದ್ದು ಯಾರು ಗೊತ್ತೇ, ಸೂಪರ್ ಸ್ಟಾರ್ ರಜನಿಕಾಂತ್‌.

ಹೌದು, ಅನುಮಾನವೇ ಇಲ್ಲ. ಶ್ರೀಯುತ ಉಪೇಂದ್ರ ಕನ್ನಡ ಚಿತ್ರರಂಗದ ಮಾತ್ರವಲ್ಲ,ಭಾರತೀಯ ಚಿತ್ರರಂಗದಲ್ಲಿಯೇ ಓರ್ವ ಪ್ರತಿಭಾವಂತ ನಿರ್ದೇಶಕ, ಅಂತೆಯೇ ನಟ ಕೂಡ. ಅವರ ಸಿನಿಮಾಗಳು, ಸಿನಿಮಾಗಳಲ್ಲಿನ ಸಂಭಾಷಣೆಗಳು ಸಮಾಜಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಸಂದೇಶ ನೀಡುತ್ತಲೇ ಇವೆ.ಅವರ ಸ್ಫೂರ್ತಿ ಮಾತುಗಳು ಎಷ್ಟೋ ಯುವಕರಿಗೆ ದಾರಿ ದೀಪವಾಗಿವೆ. ಅವರ ಸಿನಿಮಾ ಡೈಲಾಗ್‌ಗಳನ್ನು ಆಧಾರವಾಗಿಟ್ಟುಕೊಂಡೇ ಈ ವ್ಯಕ್ತಿತ್ವ ವಿಕಸನ ಪುಸ್ತಕ ಬರೆದು ಸಮಾಜಕ್ಕೆ ಉತ್ತಮ ಸಂದೇಶವನ್ನು ತಲುಪಿಸುವ ಕೆಲಸವನ್ನು ಲೇಖಕರು ಮಾಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನೆಮಾಗಳನ್ನು ಅವರ ಅಭಿಮಾನಿಯೊಬ್ಬರು ಸೂಕ್ಷ್ಮವಾಗಿ ಗಮನಿಸಿ, ಅವರ ಚಿತ್ರಗಳಲ್ಲಿನ ಅದ್ಭುತ ಸಂಭಾಷಣೆಯನ್ನು ಹೆಕ್ಕಿ ತೆಗೆದು, ಅದರಲ್ಲಿನ ಜೀವನ ಪಾಠವನ್ನು ಕನ್ನಡದ ಓದುಗರೆದುರು ತರುವ ಒಂದು ಹೊಸ ಬಗೆಯ ಪ್ರಯತ್ನವನ್ನು ಲೇಖಕರಾದ ರಾಮಸ್ವಾಮಿ ಹುಲಕೋಡು ಅವರು ಇಲ್ಲಿ ಮಾಡಿದ್ದಾರೆ. ಉಪೇಂದ್ರ ಅವರ ಚಿತ್ರಗಳ 25 ಡೈಲಾಗ್ ಅನ್ನು ಇಲ್ಲಿ ಆರಿಸಿ, ಅದರ ಕುರಿತು ಚೆಂದದ ಬದುಕಿನ ಪಾಠವನ್ನು ಸರಳವಾದ ಭಾಷೆಯಲ್ಲಿ ಇಲ್ಲಿ ಓದುಗರೆದುರು ಇಟ್ಟಿದ್ದಾರೆ ಲೇಖಕರು.

ಪುಟಗಳು: 160