ಓದೋಣ, ಓದಿಸೋಣ

ನಾನು ಕನ್ನಡ ಸಾಹಿತ್ಯದ ಪೋಷಕ | Become a Patron of Kannada Literature

ನಾನು ಕನ್ನಡ ಸಾಹಿತ್ಯದ ಪೋಷಕ Become a Patron of Kannada Literature

ಕನ್ನಡ ಸಾಹಿತ್ಯವನ್ನು ಮುಂದಿನ ತಲೆಮಾರಿಗೂ ಹೊತ್ತೊಯ್ಯುವ ಪುಣ್ಯದ ಕೆಲಸದಲ್ಲಿ ನೀವೂ ಪಾಲ್ಗೊಳ್ಳಿ

ನಾವೆಲ್ಲ ಕನ್ನಡ ಪುಸ್ತಕಗಳನ್ನು ಓದುತ್ತ ಬೆಳೆದು ಬಂದವರು. ನಮ್ಮ ಬುದ್ದಿ, ಭಾವಗಳನ್ನು ತಿದ್ದಿ ತೀಡಿದ ಬೆಳಕು ಕನ್ನಡ ಪುಸ್ತಕಗಳು. ಇಂತಹ ಪುಸ್ತಕಗಳನ್ನು ಜಗತ್ತಿನ ಯಾವುದೇ ಮೂಲೆಯಿಂದಲೂ, ಕೈಯಲ್ಲಿರುವ ಮೊಬೈಲ್ ಫೋನಿನಲ್ಲೇ ಓದುವ, ಕೇಳುವ ಆಯ್ಕೆ ಕಲ್ಪಿಸಿದ ಕನ್ನಡದ ಮೊದಲ ಸಂಸ್ಥೆ ಮೈಲ್ಯಾಂಗ್ ಬುಕ್ಸ್. ಕಳೆದ ಐದು ವರ್ಷಗಳಿಂದ ಲಕ್ಷಕ್ಕೂ ಹೆಚ್ಚು ಓದುಗರ ಮತ್ತು ಸಾವಿರಾರು ಲೇಖಕ/ಪ್ರಕಾಶಕರ ನಂಬುಗೆಯ ಸಂಸ್ಥೆಯಾಗಿದೆ.

ಕನ್ನಡ ನಾಡಿನ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ಕುವೆಂಪು, ತೇಜಸ್ವಿ, ಪಂಜೆ ಮಂಗೇಶರಾಯರು ಮುಂತಾದ ದಿಗ್ಗಜರ ಅಪರೂಪದ ಪುಸ್ತಕಗಳನ್ನು ತಲುಪಿಸಲು ಮೈಲ್ಯಾಂಗ್ ಹಮ್ಮಿಕೊಂಡಿರುವ ಯೋಜನೆ "ನಾನು ಕನ್ನಡ ಸಾಹಿತ್ಯದ ಪೋಷಕ"

ನೀವೂ ಕೈ ಜೋಡಿಸಿ ಮತ್ತು ಕನ್ನಡ ಪುಸ್ತಕಗಳ ಬೆಳಕು ಇನ್ನಷ್ಟು ಕನ್ನಡದ ಮಕ್ಕಳ ಬುದ್ದಿ, ಭಾವಗಳನ್ನು ಬೆಳಗಿಸುವಲ್ಲಿ ನೆರವಾಗಿ.

ವಿವರಗಳು:

  • ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಆಯಾ ಶಾಲೆಯ ಗ್ರಂಥಾಲಯದ ಮೂಲಕ ನೀವು ನೀಡುವ ನೆರವಿನ ಮೌಲ್ಯದ ಇಬುಕ್/ಆಡಿಯೋಪುಸ್ತಕಗಳನ್ನು ಈ ಯೋಜನೆಯ ಮೂಲಕ ತಲುಪಿಸಲಾಗುವುದು.
  • ಪ್ರತಿ ಶಾಲೆಯ ಕನ್ನಡ ಅಧ್ಯಾಪಕರು, ಗ್ರಂಥಪಾಲಕರು ಇಲ್ಲವೇ ಮುಖ್ಯೋಪಾಧ್ಯಯರ ಮೂಲಕ ಇದನ್ನು ಮಕ್ಕಳಿಗೆ ತಲುಪಿಸಲಾಗುವುದು.
  • ಶಾಲೆಯಲ್ಲಿ ಮಕ್ಕಳೆಲ್ಲರೂ ಕೂತು ಆಡಿಯೋ ಕೇಳಲು ಅನುಕೂಲವಾಗುವಂತೆ ಒಂದು ಗುಣಮಟ್ಟದ ಬ್ಲೂಟೂತ್ ಸ್ಪೀಕರ್ ಅನ್ನು ಶಾಲೆಗೆ ಒದಗಿಸಲಾಗುವುದು.
  • ಶಾಲೆಗೆ ಡಿಜಿಟಲ್ ರೂಪದಲ್ಲಿ ಪುಸ್ತಕಗಳನ್ನು ಒದಗಿಸಿದ ವಿವರಗಳನ್ನು ಮೈಲ್ಯಾಂಗ್ ಬುಕ್ಸಿನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುವುದು

ಈ ಕೆಳಗಿನ ಯಾವುದೇ ಯೋಜನೆಯನ್ನು ಆಯ್ಕೆ ಮಾಡಿಕೊಂಡು ನೀವು ಈ ಯೋಜನೆಯನ್ನು ಬೆಂಬಲಿಸಬಹುದು.

ನಿಮ್ಮ ಪೋಷಕ ಯೋಜನೆಯನ್ನು ಆಯ್ಕೆಮಾಡಿಕೊಳ್ಳಿ

ಬೆಳ್ಳಿ / Silver

$50
  • ಒಂದು ಶಾಲೆಗೆ 50 ಡಾಲರ್ಸ್ ಮೌಲ್ಯದ ಯಾವುದೇ ಇಬುಕ್/ಆಡಿಯೋಬುಕ್ಸ್ ಒದಗಿಸಿ
  • 50 ಡಾಲರ್ಸ್ ಮೌಲ್ಯದ ಯಾವುದೇ ಇಬುಕ್/ಆಡಿಯೋಬುಕ್ಸ್ ಪಡೆಯಿರಿ
  • ಕನ್ನಡ ಸಾಹಿತ್ಯದ ಪೋಷಕ (ಬೆಳ್ಳಿ) ಡಿಜಿಟಲ್ ಸರ್ಟಿಫಿಕೇಟ್ ಪಡೆಯಿರಿ
ಪೋಷಿಸಿ/ Become a Patron
Silver Plan QR Code

ಚಿನ್ನ / Gold

$100
  • ಒಂದು ಶಾಲೆಗೆ 100 ಡಾಲರ್ಸ್ ಮೌಲ್ಯದ ಯಾವುದೇ ಇಬುಕ್/ಆಡಿಯೋಬುಕ್ಸ್ ಒದಗಿಸಿ
  • 100 ಡಾಲರ್ಸ್ ಮೌಲ್ಯದ ಯಾವುದೇ ಇಬುಕ್/ಆಡಿಯೋಬುಕ್ಸ್ ಪಡೆಯಿರಿ
  • ಕನ್ನಡ ಸಾಹಿತ್ಯದ ಪೋಷಕ (ಚಿನ್ನ) ಡಿಜಿಟಲ್ ಸರ್ಟಿಫಿಕೇಟ್ ಪಡೆಯಿರಿ
ಪೋಷಿಸಿ/ Become a Patron
Gold Plan QR Code

ಪ್ಲಾಟಿನಂ / Platinum

$250
  • ಒಂದು ಶಾಲೆಗೆ 250 ಡಾಲರ್ಸ್ ಮೌಲ್ಯದ ಯಾವುದೇ ಇಬುಕ್/ಆಡಿಯೋಬುಕ್ಸ್ ಒದಗಿಸಿ
  • 250 ಡಾಲರ್ಸ್ ಮೌಲ್ಯದ ಯಾವುದೇ ಇಬುಕ್/ಆಡಿಯೋಬುಕ್ಸ್ ಪಡೆಯಿರಿ
  • ಕನ್ನಡ ಸಾಹಿತ್ಯದ ಪೋಷಕ (ಪ್ಲಾಟಿನಂ) ಡಿಜಿಟಲ್ ಸರ್ಟಿಫಿಕೇಟ್ ಪಡೆಯಿರಿ
ಪೋಷಿಸಿ/ Become a Patron
Platinum Plan QR Code