ಆವಾಹನೆ (ಇಬುಕ್)

ಆವಾಹನೆ (ಇಬುಕ್)

Regular price
$3.99
Sale price
$3.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಅಗೆದಷ್ಟೂ ಕೆಸರು ಮತ್ತೆ ಮುಚ್ಚಿಕೊಳ್ಳುವಂತಹ ವಠಾರದ ಜಗತ್ತಿನೊಡನೆ ಯುವಕನೊಬ್ಬನ ಸೆಣಸಾಟ ಈ ನಾಟಕದ ವಸ್ತು.  ತಾಯಿ, ಹೆಂಡತಿ, ಸ್ನೇಹಿತ ಮತ್ತು ತಾನು ಬದುಕುತ್ತಿರುವ ವಠಾರ – ಇವುಗಳ ನಡುವೆ ಸಿಕ್ಕಿಕೊಂಡ ಶ್ರೀನಿವಾಸ ತನ್ನ ವ್ಯಕ್ತಿತ್ವವನ್ನು ಸ್ಥಾಪಿಸಿಕೊಳ್ಳಲೆಂದು ತನ್ನ ಪರಿಸರವನ್ನು ಧಿಕ್ಕರಿಸುವ ಹಠ ತೊಟ್ಟಿದ್ದಾನೆ. ನಿಜವಾದ ಸಂವಾದಕ್ಕಾಗಿ ಯತ್ನಿಸುವ ಶ್ರೀನಿವಾಸನ ಮಾತುಗಳೆಲ್ಲ ವಠಾರದ ಶಕ್ತಿಗಳೆದುರು ವಾಗ್ವಾದವಾಗಿ ಪರಿಣಮಿಸಿ, ಅವನ ಪರಚಾಟ ಆಳವಾದ ನೋವಿಗೆ ಎಡೆಮಾಡುತ್ತದೆ. ಆತ್ಮನಿಷ್ಠೆ ಮತ್ತು ಸಂಪ್ರದಾಯಗಳ ನಿರಂತರ ಹೋರಾಟವನ್ನು ಚಿತ್ರಿಸುವ ಈ ನಾಟಕದ ವಿವರಗಳೆಲ್ಲ ನೈಜತೆಯೊಡನೆಯೇ ಆಳವಾದ ಅರ್ಥಪೂರ್ಣತೆಯನ್ನೂ ಸೃಷ್ಟಿಸುತ್ತವೆ. ಗಣೇಶನ ಚೌತಿಯ ಹಿನ್ನೆಲೆಯಲ್ಲಿ, ಈ ನಾಟಕದ ಕ್ರಿಯೆಯೊಡನೆ ಹಾಸುಹೊಕ್ಕಾಗಿ ಬಂದಿರುವ ಗಣೇಶನ ಪೂಜೆ ತನ್ನ ಸಾಂಕೇತಿಕತೆಯಿಂದ ನಾಟಕದ ವ್ಯಾಪ್ತಿಯನ್ನು ವಿಸ್ತರಿಸಿದೆ.

  

ಪುಟಗಳು: 50

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !