
ಬರಹಗಾರರು: ಅಹೋರಾತ್ರ
ಅಹೋರಾತ್ರ ಎಂದು ಹೆಸರಾಗಿರುವ ನಟೇಶ್ ಪೊಲೆಪಲ್ಲಿ ಅವರು ಬರೆದಿರುವ ಈ ಪುಸ್ತಕವೂ ಜೀವನ ಸ್ಪೂರ್ತಿಯ ಬರಹಗಳ ಒಂದು ಸಂಕಲನ. ನಮಗೇನು ಗೊತ್ತು ಅನ್ನುವುದು ಜ್ಞಾನವಲ್ಲ. ನಮಗೇನು ಗೊತ್ತಿಲ್ಲ ಎಂದು ಗೊತ್ತಾಗುವುದು ಜ್ಞಾನ ಅನ್ನುವ ತಿಳಿವು ಇಲ್ಲಿನ ಬರಹಗಳಲ್ಲಿದೆ. ನಮ್ಮ ಅನುಭವದಿಂದ ನಾವು ಪಾಠ ಕಲಿಯಲಾರದಷ್ಟು ಮೂರ್ಖರಾಗಿದ್ದೇವೆ ಅನ್ನುವ ದಿನಗಳಲ್ಲಿ ತನ್ನನ್ನು ತಾನೇ ಅರಿಯಲು ಒಂದಿಷ್ಟು ಸ್ಪೂರ್ತಿ ಕೊಡುವ ಬರಹಗಳು ಇಲ್ಲಿವೆ.