ತಿರುಳು

ತಿರುಳು

Regular price
$5.99
Sale price
$5.99
Regular price
Sold out
Unit price
per 
Shipping does not apply

ಬರೀ ಎರಡೇ ಎರಡು ಪುಟಗಳಲ್ಲಿ ಲೇಖಕರು ಹೇಳಹೊರಟಿದ್ದು ದೊಡ್ಡ ದೊಡ್ಡ ಸಿದ್ದಾಂತಗಳನ್ನೇನಲ್ಲ. ಬದುಕಿನ ತಿರುಳನ್ನಷ್ಟೇ.
ಅಷ್ಟಕ್ಕೂ ಬದುಕು ಅಂದರೇನು? ಅಷ್ಟು ಸುಲಭಕ್ಕೆ ಧಕ್ಕಿಬಿಡುವಂತಹ ಉತ್ತರವೇ ಇದು? ಖಂಡಿತ ಅಲ್ಲ. ಬೆಳಕೂ ಹೌದು, ಕತ್ತಲೆಯೂ ಹೌದು, ಸತ್ಯವೂ ಹೌದು, ಮಿಥ್ಯವೂ ಹೌದು, ಚೆಲುವೂ ಹೌದು, ಸೋಲು ಹೌದು ಮತ್ತು ಇವ್ಯಾವವೂ ಅಲ್ಲ! ಇದರ ಅರ್ಥವನ್ನು ಬೆನ್ನಟ್ಟಿ ಹೋಗಿ ಸಾಕ್ಷಾತ್ಕಾರ ಕಂಡುಕೊಂಡ ಕೆಲವೇ ಮಹನೀಯರು ಕೊನೆಯಲ್ಲಿ ಕಂಡುಕೊಂಡಿದ್ದು ಹೊರಗಿನ ದಾರಿಯನ್ನಲ್ಲ. ತಮ್ಮೊಳಗಿನ ದಾರಿಯನ್ನು. ಬಿಟ್ಟಿದ್ದು ಹೊರಗಿನದ್ದಲ್ಲ, ತಮ್ಮೊಳಗಿನ ಅಹಮಿಕೆ, ದ್ವೇಷ, ಸ್ವಾರ್ಥಗಳನ್ನು. ಹಿಡಿದಿಟ್ಟುಕೊಂಡಿದ್ದೂ ಹೊರಗಿನದ್ದಲ್ಲ ತಮ್ಮೊಳಗಿನ ಚಾಂಚಲ್ಯ, ಆಸೆಗಳನ್ನಷ್ಟೇ. ಅಂದರೆ ಪ್ರಶ್ನೆ ಉದ್ಭವಿಸಿದ್ದಲ್ಲೇ ಉತ್ತರವೂ ಇದೆ. ಅದನ್ನು ಕಂಡುಕೊಳ್ಳಲು ಒಳಗಣ್ಣು ತೆರೆಯಬೇಕು. ನಾವು ಸೋಲುತ್ತಿರುವುದು ಅಲ್ಲಿಯೇ.
ಇವುಗಳನ್ನೇ ಲೇಖಕರು ಆತ್ಮೀಯ ಗೆಳೆಯನಂತೆ ಹೆಗಲ ಮೇಲೆ ಕೈಹಾಕಿ ಹೇಳುತ್ತಾ ಹೋಗುತ್ತಾರೆ ಈ ಪುಸ್ತಕದಲ್ಲಿ.