ಹತ್ತು ನಾಕು ಮೆಟ್ಟಿಲು

ಹತ್ತು ನಾಕು ಮೆಟ್ಟಿಲು

Regular price
$14.99
Sale price
$14.99
Regular price
Sold out
Unit price
per 
Shipping does not apply

ಪ್ರಕಾಶಕರು: ಸಾವಣ್ಣ

Publisher: Sawanna

 

333 ಸುನೀತಗಳಿಂದ(ಸಾನೆಟ್‌) ಕೂಡಿದ ಈ ಪದ್ಯಗಳು ನಮ್ಮ ಓದುಗರಿಗಾಗಿ.

ಚಂದ್ರ ಕೂಡ ಪೂರ್ಣವಾಗುವುದು ಹದಿನಾಕು ತಿಥಿಗಳಲ್ಲಿ, ಪೂರ್ಣ ಚಂದ್ರ ಶೂನ್ಯವಾಗುವುದೂ ಹದಿನಾಕು ದಿನದಲ್ಲಿ. ಎಷ್ಟೇ ಅಗಲವಾದ ಕಾಗದವನ್ನು ಅರ್ಧರ್ಧ ಮಡಚುತ್ತಾ ಹೋದರೆ ಪ್ರಪಂಚದ ಯಾವ ಯಂತ್ರ ಬಳಸಿದರೂ ಹದಿನಾಲ್ಕಕ್ಕಿಂತಾ ಹೆಚ್ಚು ಬಾರಿ ಮಡಚಲಾಗದು. ಜಗತ್ತಿನ ಯಾವುದೇ ಕಾರ್ಯವನ್ನು ತೆಗೆದುಕೊಂಡರೂ ಅದನ್ನು ಹದಿನಾಕು ಹಂತಗಳಲ್ಲಿ ಸಂಪೂರ್ಣ ಮಾಡಬಹುದು. ರಾಮಾಯಣದಲ್ಲಿ ಶ್ರೀರಾಮರು ಸೂರ್ಯಕಿರಣವೂ ಮುಟ್ಟದಂತಿದ್ದ ದಕ್ಷಿಣ ಭಾರತದ ದಂಡಕಾರಣ್ಯಾದಿ ಅನೇಕ ವನಗಳಲ್ಲಿ ಪಾದಯಾತ್ರೆ ಮಾಡಿ ಸ್ವಾತಂತ್ರ್ಯ ಕರುಣಿಸಿ ನಾಗರಿಕತೆಯ ಬೀಜಾಂಕುರ ಮಾಡಿದ್ದು ಹದಿನಾಕು ವರ್ಷ ವನವಾಸದಲ್ಲೇ ಅಲ್ಲವೆ? ಹೀಗೆ ಮನಸ್ಸಿಗೆ ಬಂದ ಯಾವುದೇ ವಿಚಾರವನ್ನು ಹದಿನಾಕು ಸಾಲುಗಳಲ್ಲಿ ಅರ್ಥಗರ್ಭಿತವಾಗಿ ಹೇಳಬಹುದೆಂದು ಆರಂಭಿಸಿದ ಈ ಪ್ರಯಾಣ ಇಂದು ಈ ಹೊತ್ತಗೆಯ ರೂಪದಲ್ಲಿ ನಿಮ್ಮ ಮುಂದಿದೆ.

333 ಸುನೀತಗಳಿಂದ ಕೂಡಿದ ಈ ಹೊತ್ತಗೆಗೆ ಮೇಲ್ಕಂಡ ಕಾರಣಗಳಿಂದಾಗಿ ‘ಹದಿನಾಕು ಮೆಟ್ಟಿಲು’ ಎಂಬ ಹೆಸರಿಡಬೇಕೆಂದು ಯೋಚಿಸುತ್ತಿದ್ದಾಗ ನಮ್ಮ ಕಸ್ತೂರಿ ಕನ್ನಡದಲ್ಲೆ ಸಾಧ್ಯವಾಗುವಂತಹ ಅದ್ಭುತ ಹೆಸರು ‘ಹತ್ತು ನಾಕು ಮೆಟ್ಟಿಲು’ ಎಂಬ ದ್ವಂದ್ವಾರ್ಥ ನಾಮ ಸಿಕ್ಕಿತು. ಧರ್ಮ(ಗುಣ), ಅರ್ಥ(ಹಣ), ಕಾಮ(ಮನ) ಮತ್ತು ಮೋಕ್ಷ(ಜಗ) ಎಂಬ ನಾಕು ಮೆಟ್ಟಿಲು ಹತ್ತು ಅವನ ಪಡೆಯಲು ಹಾಗು ‘ಹತ್ತು + ನಾಕು = ಹದಿನಾಕು’ ಮೆಟ್ಟಿಲ ಮೇಲಿರುವ ಹದಿನೈದನೆಯ ಹಂತದ ಭಗನ ಪಾದ ಮುಟ್ಟಲು.

 

ಪುಟಗಳು : 340

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !