ವಿಮಾನದ ಕಿಟಕಿಯಿಂದ
ಭೂಮಿಗಾದ ಗಾಯಗಳೆಲ್ಲ ಕಾಣುತ್ತವೆ..
ನಿಮ್ಮೊಳಗಿನ ಗಾಜಬಟ್ಟಲಿನ ಮೀನುಗಳ
ಏಕಾಂಗಿತನಕ್ಕೆ ನಿಮ್ಮ ಹೆಸರಿಟ್ಟು
ನೀರಲ್ಲಿ ತೇಲಿಬಿಡಬಹುದು
ನಗರದ ಬೀದಿದೀಪಗಳಿಗೆ
ಕತ್ತಲಕವಿತೆಗಳ ಮಾತ್ರ ಬೆಳಗುವುದು ಗೊತ್ತು
ವೋಡ್ಕಾ ಬಾಟಲಿನ ಚೂರುಗಳ ಕತೆಯನ್ನಲ್ಲ
-
ಇವು ಇಲ್ಲಿನ ಕವಿತೆಗಳ ಕೆಲವು ಉದಾಹರಣೆಗಳು.. ತಮ್ಮ ಮೊದಲ ಕವನ ಸಂಕಲನದಲ್ಲೇ ತಮ್ಮ ಕವಿತೆಗಳ ಹೊಸತನದಿಂದ, ವಸ್ತುಗಳ ಆಯ್ಕೆ ಮತ್ತು ನಿರೂಪಣೆಯಿಂದ ಗಮನ ಸೆಳೆದಿರುವ ಆಕರ್ಷ ರಮೇಶ ಕಮಲ ಅವರು ನಗರ ಜೀವನದ ಒಳ-ಹೊರಗನ್ನು ತಮ್ಮ ಕವಿತೆಗಳ ಮೂಲಕವೇ ಓದುಗನ ಅಂತರಂಗಕ್ಕೆ ದಾಟಿಸುತ್ತಾರೆ.
ಪುಟಗಳು: 88