ಅಲ್ಪಾಯುಷಿ ಮಹಾನ್ ಸಾಧಕರು-ಸಂಗೀತಗಾರರು (ಆಡಿಯೋ  ಬುಕ್)

ಅಲ್ಪಾಯುಷಿ ಮಹಾನ್ ಸಾಧಕರು-ಸಂಗೀತಗಾರರು (ಆಡಿಯೋ ಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಲೇಖಕಿಯರು : ಪ್ರೊಫೆಸರ್ ಗೀತಾ ಶ್ರೀನಿವಾಸನ್ ಹಾಗು ಕೃತ್ತಿಕಾ ಶ್ರೀನಿವಾಸನ್

ಓದಿದವರು: ಶ್ರೀಮತಿ ರಮಾ ಹಿರೇಮಠ (ನಿವೃತ್ತ ಕಾರ್ಯನಿರ್ವಾಹಕರು A.I.R.)

ಆಡಿಯೋ ಪುಸ್ತಕದ ಅವಧಿ : 4 ಗಂಟೆ 52 ನಿಮಿಷ

ನಿಮಗಿದು ತಿಳಿದಿತ್ತೆ?


೧.ಮಹಾರಾಜ ಸ್ವಾತಿ ತಿರುನಾಳ್ ರವರು ತಮ್ಮ ವರ್ಣಗಳು, ಕೃತಿಗಳು, ಪದಂ, ಜಾವಳಿ, ತಿಲ್ಲಾನಗಳ ಅಮೂಲ್ಯ ಭಂಡಾರಕ್ಕೆ ಪ್ರಸಿದ್ಧರಾಗಿದ್ದಲ್ಲದೆ ದಕ್ಷಿಣ ಭಾರತದ ಪ್ರಪ್ರಥಮ ಖಗೋಳ ಸಮೀಕ್ಷಾ ಕೇಂದ್ರಕ್ಕೆ ಕೂಡ ಕಾರಣಪುರುಷರಾಗಿದ್ದಾರೆ !!

೨. ಅಮೇರಿಕದ ಜಾನ್.ಬಿ.ಹಿಗ್ಗಿನ್ಸ್ ಭಾಗವತರು ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಸರಸ್ವತಿ ಪೂಜೆಯನ್ನು ಮಾಡುವ ಪದ್ಧತಿಯನ್ನು ಪ್ರಾರಂಭಿಸಿದರು !!

೩.ಮದುರೈ ಪುಶ್ಪವನಮ್ ಅಯ್ಯರ್ ಅವರು ಅಂದೂ ತಮ್ಮ ಮೋಹಕ ಸಂಗೀತದಿಂದ ಎಲ್ಲರಿಗೂ ಪ್ರಿಯರಾಗಿದ್ದು, ಇಂದಿನ ಪೀಳಿಗೆಯ ಸಂಗೀತಗಾರರಿಗೂ ಪ್ರಿಯರಾಗಿದ್ದಾರೆ, ಏಕೆಂದರೆ ಇವರಿಂದಲೇ ಸಂಗೀತಗಾರರಿಗೆ ಕೊಂಚ ಒಳ್ಳೆಯ ಸಂಭಾವನೆ ದೊರೆಯಲು ಪ್ರಾರಂಭವಾಗಿದ್ದುದು !

೪.ಹರಿದಾಸಿ ಅಂಬಾಬಾಯಿಯವರ ತವರಿನ ಕುಟುಂಬದಲ್ಲಿ ಎಲ್ಲರೂ ಹರಿದಾಸರಾಗಿದ್ದು, ತಮ್ಮ ಅಂಕಿತಗಳೊಡನೆ ಕೃತಿಗಳನ್ನು ರಚಿಸಿದ್ದರು !

ಬನ್ನಿ, ಇಂತಹ ಮಹಾನ್ ಸಂಗೀತಗಾರರು ಬಗ್ಗೆ ಮತ್ತಷ್ಟು ರೋಚಕ ಕಥೆಗಳು, ಅವರು ನಡೆದ ಹಾದಿ, ಅವರು ಎದುರಿಸಿದ ಕಷ್ಟ ಕಾರ್ಪಣ್ಯಗಳು, ಅಲ್ಪಾಯುಷ್ಯದಲ್ಲೇ ಅವರು ಮಾಡಿದ ಸಾಧನೆಗಳ ಬಗ್ಗೆ ತಿಳಿಯೋಣ, ನಮ್ಮ ಸಾಧನೆಗಳಿಗೂ ಸ್ಪೂರ್ತಿ ಪಡೆಯೋಣ! ಹಾಗೇ ಅವರ ಬಗ್ಗೆ ತಿಳಿದುಕೊಳ್ಳುವುದಲ್ಲದೆ ಅವರ ಕೃತಿಗಳ ಮಾಧುರ್ಯವನ್ನೂ ಸವಿಯೋಣ!

ಆಡಿಯೋಪುಸ್ತಕದಲ್ಲಿ ಪರಿಚಯಿಸಲಾದ ಸಾಧಕರು:

  1. ಅಕ್ಕಮಹಾದೇವಿ
  2. ಗೋಪಾಲನಾಯಕ
  3. ಮೈಸೂರು ಅರಸರು ಮತ್ತು ಇಮ್ಮಡಿ ಕಂಠೀರವ ನರಸರಾಜ ಒಡೆಯರ್
  4. ಗೋಪಾಲದಾಸರು
  5. ಮೋಹನದಾಸರು
  6. ಪಲ್ಲವಿ ದೊರೈಸ್ವಾಮಿ ಅಯ್ಯರ್
  7. ಸರ್ಪಭೂಷಣ ಶಿವಯೋಗಿ
  8. ವಡಿವೇಲು
  9. ಮಹಾರಾಜ ಸ್ವಾತಿ ತಿರುನಾಳ್
  10. ಕರೂರ್ ಚಿನ್ನ ದೇವುಡು
  11. ಅಣ್ಣಾಮಲೈ ರೆಡ್ಡಿಯಾರ್
  12. ಶರಭಾ ಶಾಸ್ತ್ರಿ ಮತ್ತು ಬಿ ಎನ್ ಸುರೇಶ್
  13. ತಿರುಪತಿ ನಾರಾಯಣಸ್ವಾಮಿ ನಾಯ್ಡು
  14. ಅಂಬಾಬಾಯಿ
  15. ಬೆಳೆಗೆರೆ ಜಾನಕಮ್ಮ
  16. ಜಿ ಹರಿಶಂಕರ್
  17. ಸಂಗೀತಗಾರರು
  • ಪಲ್ಲವಿ ಗಾಯನದ ರಾಜ" ಕೊನೇರಿರಾಜಪುರಂ ವಿದ್ಯಾನಾಥ ಐಯ್ಯರ್
  • ಸಂಗೀತ ಸಾಮ್ರಾಟ್ ಮಧುರೈ ಪುಷ್ಪವನಂ
  • ಬಹುಮುಖ ಪ್ರತಿಭೆ ಎನ್.ಸಿ.ವಸಂತಕೋಕಿಲಂ
  • ಜಾನ್ ಬಿ ಹಿಗ್ಗಿನ್ಸ್ ಭಾಗವತರ್
  • ಮ್ಯಾಂಡೋಲಿನ್ ಮಾಂತ್ರಿಕ" ಮ್ಯಾಂಡೋಲಿನ ಯು ಶ್ರೀನಿವಾಸ
  • "ಕೃಷ್ಣಪ್ರಿಯೆ" ರಂಜನಿ ಹೆಬ್ಬಾರ್

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.