ಅಂಬರೀಶ್‌

ಅಂಬರೀಶ್‌

Regular price
$7.99
Sale price
$7.99
Regular price
Sold out
Unit price
per 
Shipping does not apply

ನಟ ಅಂದರೆ ನಟನಲ್ಲ. ರಾಜಕಾರಣಿ ಅಂದರೆ ರಾಜಕಾರಣಿ ಆಲ್ಲ. ಅಹಂಕಾರಿ ಅಲ್ಲ, ಸ್ಟಾರ್‌ ಅಲ್ಲ, ಸೋಮಾರಿ ಅಲ್ಲ, ಸಮಯ ಪಾಲಕ ಅಲ್ಲ, ಮಹತ್ವಾ ಕಾಂಕ್ಷಿ ಮೊದಲೇ ಅಲ್ಲ. ಗೆಲ್ಲಬೇಕು ಅಂತ ಹೊರಡಲಿಲ್ಲ. ನಿಲ್ಲಬೇಕು ಅಂತ ಹೋರಾಡಲೂ ಇಲ್ಲ. ಅಂಬರೀಶ್‌ ಇದ್ದದ್ದೇ ಹಾಗೆ... Most reluctant actor. More reluctant politician. ಪಾಲಿಗೆ ಬಂದದ್ದು ಪರಮ ಸುಖ ಆಂತ ಇದ್ದುಬಿಟ್ಟ ಸಂತ. ಯಾರ ತಾಳಕ್ಕೂ ಕುಣಿಯದ ನಿಶ್ಚಿಂತ. ಮಾತಿಗೆ ಅಂಕುಶ ಇರಲಿಲ್ಲ. ನಡೆ ನುಡಿಯ ನಡುವೆ ಅಂತರ ಇರಲಿಲ್ಲ. ಸೋತ ಬೇಸರ, ಗೆದ್ದ ಅಹಂಕಾರ ಎರಡೂ ಇರಲಿಲ್ಲ. ಅವರ ಬಗ್ಗೆ ಯಾರೂ ಬರೆಯಲಿಲ್ಲ. ಏನು ಬರೆಯಬೇಕು ಅಂತ ಯಾರಿಗೆ ತಾನೇ ಗೊತ್ತಿತ್ತು. ಅವರು ಹೀಗೆ ಅಂತ ಯಾರಾದರೂ ಬರೆದರೆ ತಾನು ಹಾಗಲ್ಲ ಅಂತ ಮರುಕ್ಷಣವೇ ಸಾಬೀತು ಮಾಡುತ್ತಿದ್ದ ಕ್ಷಣ ಕ್ಷಣದ ಅಮರನಾಥ. ಈಗ ಗೆಳೆಯ ಶರಣು ಹುಲ್ಲೂರು ಅವರ ಕುರಿತು ಕುಂದಿಲ್ಲದೆ ಬರೆದು ಅವರ ನೆನೆದಿದ್ದಾರೆ. ಇದು ಅಂಬರೀಶ್‌ ಕುರಿತ ಮೊದಲ ಪುಸ್ತಕ ಅಲ್ಲದೇ ಇರಬಹುದು. ಆದರೆ ಅಂಬರೀಶ್‌ ಅಂತಸ್ಪೂರ್ತಿಯನ್ನು ಯಥಾವತ್ತು ಹಿಡಿದಿಡಲು ಅಚ್ಚುಕಟ್ಟಾಗಿ ಹವಣಿಸಿದ ಮೊತ್ತ ಮೊದಲ ಕೃತಿ. ಶರಣು ಹುಲ್ಲೂರು ಇದನ್ನು ಬರೆದು ನಮ್ಮೆಲ್ಲರ guilt ಕಮ್ಮಿ ಮಾಡಿದ್ದಾರೆ.

-ಜೋಗಿ 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

ಪುಟಗಳು: 164