ಜೀನ್ಸ್ ಟಾಕ್

ಜೀನ್ಸ್ ಟಾಕ್

Regular price
$7.99
Sale price
$7.99
Regular price
Sold out
Unit price
per 
Shipping does not apply

ಹೆಣ್ಣಿನ ಹಕ್ಕುಗಳಾಗಿರಲಿ, ಸಾಮಾಜಿಕ ಚಿಂತನೆಗಳಿರಲಿ, ಹಿಂದೆಂದಿಗಿಂತಲೂ ಇಂದು ಅಗಾಧವಾಗಿ ಹೆಡೆಯೆತ್ತಿರುವ ಅತ್ಯಾಚಾರದ ಪಿಡುಗಾಗಲಿ, ಸ್ತನ್ಯಪಾನದಂಥ ಮಕ್ಕಳ ಬಗೆಗಿನ ಕಾಳಜಿಯಿರಲಿ, ಅಂಜಲಿ ರಾಮಣ್ಣ ಅವರು ಬರೆದಿರುವುದು ಸಾಕಷ್ಟು ಆಳವಾದ ಅಧ್ಯಯನ ಬಳಿಕವೇ ಎಂದು ಅದನ್ನು ಓದಿ ಮುಗಿಸುವ ಹೊತ್ತಿಗೆ ತಿಳಿದು ಬರುತ್ತದೆ. ‘‘ಜೀನ್ಸ್ ಟಾಕ್‌'' ಲೇಖನಗಳು ನಾನಾ ಆಯಾಮಗಳಲ್ಲಿ ಮೂಡಿ ಬರುವ ಯೋಚನಾಧಾರೆಗಳನ್ನು ಅನಾವರಣಗೊಳಿಸುತ್ತದೆ. ಹೂ ಮಾರುವವಳು, ಶಕೀಲಾ, ಪ್ರಪಂಚವಿಡೀ ಹರಡಿರುವ ಕಂಸರೂ ಮತ್ತು ಅವರ ಅಸಹಾಯಕ ತಂಗಿಯಾದ ದೇವಕಿಯರು, ‘ಮ್ಯೂಚುವಲ್‌ ಕನ್‌ಸೆಂಟಿನಿಂದ ವಿಚ್ಛೇದನ' ಎಂದು ಮದುವೆಗೆ ಮೊದಲೇ ವಕೀಲರ ಬಳಿ ಕರಾರು ಪತ್ರ ರೆಡಿ ಮಾಡಿಸಿಕೊಳ್ಳುವ ಯುವ ಜೋಡಿಗಳು, ಅವ್ಯಕ್ತ ಭಯದಲ್ಲಿ ಬದುಕುವ ಮಹಾ ಬಲಶಾಲಿ ಪೋಲೀಸರು, ಜಡ್ಜ್‍ಮೆಂಟಲ್‌ ಬುದ್ಧಿಯ ಮಹನೀಯರು, ಸದ್ಗುಣಿಗಳಾಗಿಯೇ ಕಾಣಬರುವ ಎಮೋಷನಲ್‌ ಅತ್ಯಾಚಾರಿಗಳು, ಸ್ವ ನಿಯಂತ್ರಣದ ಅರ್ಥವನ್ನರಿಯದ ಹದಿಹರೆಯದವರು, ಪ್ರತಿಭಟನೆಯನ್ನೇ ಮರೆತು ದಿನಾ ಗಂಡ, ಅಣ್ಣ, ಅಪ್ಪ, ಅಥವಾ ಇನ್ನಾರದೋ ಕಡೆಯಿಂದ ಹೊಡೆಸಿಕೊಳ್ಳುವ ಹೆಂಗಸರು, ಎಲ್ಲರನ್ನೂ, ಎಲ್ಲವನ್ನೂ ತಮ್ಮ ತರ್ಕದ ತಕ್ಕಡಿಯಲ್ಲಿ ತೂಗಿ, ನ್ಯಾಯಾ ನ್ಯಾಯಗಳ ಸವಾಲುಗಳನ್ನೆತ್ತಿ ಬರವಣಿಗೆಯ ದರ್ಪಣದ ಮುಖೇನ ಸಮಾಜದೆದುರು ಹಿಡಿದಿದ್ದಾರೆ.

ಪುಟಗಳು : 188