ಅರ್ಥಾರ್ಥ (ಇಬುಕ್)

ಅರ್ಥಾರ್ಥ (ಇಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಸಾಹಿತ್ಯದ ಪ್ರಜ್ಞೆಯುಳ್ಳ ಒಬ್ಬ ಲೇಖಕ ಆರ್ಥಿಕ ವಿದ್ಯಮಾನಗಳನ್ನು ಕುರಿತು ಬರೆದರೆ ಎರಡು ಬಗೆಯ `ಅರ್ಥ'ಗಳು ಒಟ್ಟಿಗೇ ಹುಟ್ಟುವುದು ಸಾಧ್ಯ - ಮೀನಿಂಗ್ ಎಂಬ ಅರ್ಥದ ಅರ್ಥ ಮತ್ತು ಫೈನಾನ್ಸ್ ಎಂಬ ಅರ್ಥದ ಅರ್ಥ. ಎಂ.ಎಸ್. ಶ್ರೀರಾಮ್ ಅವರು ಈ ಪುಸ್ತಕವನ್ನು ಅರ್ಥಾರ್ಥ ಎಂದು ಕರೆದಿರುವುದು ಇಂಥ ದ್ವಂದ್ವೋದ್ದಿಶ್ಯದಿಂದ ಇರಬಹುದೆ? ಅವರ ಉದ್ದಿಶ್ಯ ಏನೇ ಇದ್ದಿರಲಿ, ಇಂಥ ಎರಡು ಅರ್ಥಗಳ ಕಸಿಯ ಪ್ರಯೋಗವು ಈ ಬರಹಗಳ ಮೂಲಕ ಆಗಲಿಕ್ಕೆ ಆರಂಭವಾಗಿದೆ ಎನ್ನುವುದೇ ಈ ಪುಸ್ತಕದ ಪ್ರಮುಖ ಸಾಧನೆ. ಅರ್ಥಶಾಸ್ತ್ರವನ್ನು ಬೇಸರ ಹುಟ್ಟಿಸುವ ಅಂಕಿಅಂಶಗಳ ಕಂತೆಯಾಗಿಯೂ ಕಥನಕಲೆಯನ್ನು ಕೇವಲ ಭಾವೋದ್ದೀಪನೆಯ ಸಾಧನವಾಗಿಯೂ ಬಳಸಲು ಕಲಿತಿರುವ ಈ ಕಾಲಕ್ಕೆ ಇಂಥದೊಂದು ಅರ್ಥಮಿಶ್ರಣ ಖಂಡಿತವಾಗಿಯೂ ಬೇಕಿತ್ತು. ಇಂಥ ಪ್ರಯೋಗದ ಮುಂದಿನ ಹೆಜ್ಜೆಗಳಾಗಿ ಹುಟ್ಟಬಹುದಾದ ಕಥನಮಿಶ್ರಿತ ಅರ್ಥಶಾಸ್ತ್ರಜಿಜ್ಞಾಸೆಯೂ ಅರ್ಥಶಾಸ್ತ್ರದ ಜ್ಞಾನಯುಕ್ತವಾದ ಕಥನವೂ ಕನ್ನಡದಲ್ಲಿ ಹೊಸ ಬಾಗಿಲುಗಳನ್ನು ತೆರೆಯಿಸಬಲ್ಲ ಶಕ್ತಿ ಪಡೆದಿವೆ.

  

ಪುಟಗಳು: 222

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !