ಆಗಸ್ಟ್‌ ಮಾಸದ ರಾಜಕೀಯ ಕಥನ (ಇಬುಕ್)

ಆಗಸ್ಟ್‌ ಮಾಸದ ರಾಜಕೀಯ ಕಥನ (ಇಬುಕ್)

Regular price
$8.99
Sale price
$8.99
Regular price
Sold out
Unit price
per 
Shipping does not apply

GET FREE SAMPLE

 

ಪ್ರಕಾಶಕರು: ಕಾನ್ ಕೇವ್ ಮೀಡಿಯಾ ಮತ್ತು ಪ್ರಕಾಶಕರು

Publisher: Concave Media and Publisher

 

ಇನ್ನು 1940ರ ನಂತರ ಸ್ವಾತಂತ್ರ್ಯದ ತನಕದ ಕೋಮುಗಲಭೆಗಳು ಮಾಡಿದ ಹಾನಿ ಇದಕ್ಕಿಂತಲೂ ಭೀಕರ. ಜಿನ್ನಾರ ಒಂದು ಕರೆ, 1946ರಲ್ಲಿ ಕಲ್ಕತ್ತಾ, ಪೂರ್ವ ಬಂಗಾಳ, ನೋಕಾಲಿ ಪ್ರದೇಶವನ್ನು ಅಕ್ಷರಶಃ ಸಾವಿನ ಮನೆಯಾಗಿಸಿತು. ಅಲ್ಲಿಯ ತನಕ ವರ್ಷದಲ್ಲಿ ಲೆಕ್ಕಕ್ಕೆ ಸಿಕ್ಕ ಮತ್ತು ಸಿಗದಿರುವ ಒಟ್ಟು ಪ್ರಕರಣಗಳು ಸಾವಿರದ ಆಸುಪಾಸಿನಲ್ಲಿದ್ದರೆ, ಇದೊಂದೇ ಘಟನೆ ಬಲಿಪಡೆದಿದ್ದು 6000ಕ್ಕೂ ಅಧಿಕ ಜನರನ್ನು. ಇಲ್ಲಿ ಯಾವ ಸಾವಿಗೂ ಧರ್ಮವಿರಲಿಲ್ಲ! ಹಿಂದೂ ಮುಸ್ಲಿಮರೆನ್ನದೆ ಕಂಡ ಕಂಡವರು ಬೀದಿ ಹೆಣವಾಗಿದ್ದಂತಹ ದಾರುಣ ಘಟನೆಗಳಾಗಿದ್ದವು. ಇದೇ ಗಲಭೆ ಬಿಹಾರಕ್ಕೂ ಹಬ್ಬಿ ಗಾಂಧೀಜಿಯವರು ಅಲ್ಲೇ ಬೀಡು ಬಿಟ್ಟು ಗಲಭೆ ನಿಯಂತ್ರಿಸಲು ಪಟ್ಟಪಾಡು ಅಷ್ಟಿಷ್ಟಲ್ಲ ಆದರೂ ದ್ವೇಷವೆಂಬುದು ಆ ಮಟ್ಟಿಗೆ ಮನುಷ್ಯರ ನರನಾಡಿಗೆ ಸೇರಿಕೊಂಡಿತ್ತು. ಈ ಪ್ರಕರಣದಲ್ಲಿ ಬಿಹಾರವೊಂದರಲ್ಲೇ ಸತ್ತವರು 7000ಕ್ಕೂ ಅಧಿಕ ಜನರು. 1947ರಲ್ಲಿ ಸ್ವಾತಂತ್ರ್ಯ ಘೋಷಣೆಯ ನಂತರ ಮತ್ತು ಆಸುಪಾಸಿನಲ್ಲಿ ಎರಡೂ ದೇಶಗಳಲ್ಲಿ ಪಂಜಾಬ್‌, ಬಂಗಾಳ, ದೆಹಲಿ ಸುತ್ತಮುತ್ತ ಪ್ರದೇಶಗಳು ಸಾವು, ಅತ್ಯಾಚಾರ, ದೊಂಬಿ ಮುಂತಾದವುಗಳಿಂದ ಬರ್ಭರತೆಯ ಪರಮಾವಧಿಯನ್ನೇ ಮೀರಿತ್ತು. ಅಷ್ಟಲ್ಲದೇ ಅದನ್ನು ಶತಮಾನದ ದುರಂತವೆನ್ನುತ್ತಾರೆಯೇ?!

ಈ ಹಿಂಸಾಚಾರಗಳು ಒಂದು ಕಡೆಯಾದರೆ ನಾನು ಈ ಪುಸ್ತಕದಲ್ಲಿ ಹೇಳಹೊರಟಿರುವುದು ಇದರ ಹಿನ್ನೆಲೆಯಲ್ಲಿ, ಇವೆಲ್ಲದರ ಜೊತೆಗೇ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು. ಒಂದು ಕಡೆ ಆ ಎಲ್ಲ ಘಟನೆಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ದೊಡ್ಡ ದೊಡ್ಡ ಸೌಧಗಳು, ಆಶ್ರಮಗಳು, ಸರ್ಕಾರಿ ಬಂಗಲೆಗಳು, ರಾಜಕೀಯದ ಪಟ್ಟುಗಳಿಗೆ ಸಾಕ್ಷಿಯಾಗುತ್ತಲಿದ್ದವು. ಕೊನೆಗೆ ದೇಶವನ್ನು ವಿಭಜನೆಯ ಹಂತಕ್ಕೆ, ಮನುಕುಲದ ಭೀಕರ ದುರಂತಕ್ಕೆ ಕೊಂಡೊಯ್ದಿದ್ದರಲ್ಲಿ ಕೋಮುವಾದ, ರಾಜಕೀಯ ಮತ್ತು ಪೂರಕವಾದ ಘಟನೆಗಳೆಲ್ಲವೂ ಕಾರಣವಾಗಿದ್ದವು.

ಮಾತಿಗೆ ಸಿಕ್ಕಾಗೆಲ್ಲ ಪುಸ್ತಕ, ಸಮಾಜ, ಸಮಾನತೆ, ಸಹಬಾಳ್ವೆ, ರಾಜಕೀಯವೇ ನಮ್ಮ ಸ್ನೇಹಿತರ ಬಳಗದ ಮಾತಿನ ವಸ್ತು, ಹೀಗೆಯೇ ಒಂದು ಚರ್ಚೆಯಲ್ಲಿ ಹುಟ್ಟಿದ್ದು ಈ ಪುಸ್ತಕದ ವಿಷಯ. ಆಗ ನನ್ನನ್ನು ಈ ಕುರಿತು ಸುದೀರ್ಘ ಓದಿಗೆ ಹಚ್ಚಿದವರು ಆತ್ಮೀಯರಾದ ನಾಗೇಗೌಡ ಕೀಲಾರ ಶಿವಲಿಂಗಯ್ಯರವರು. ಈ ಪುಸ್ತಕದ ವಿಷಯವನ್ನು ಕೈಗೆತ್ತಿಕೊಂಡವಳು ಹುಡುಕಾಟಕ್ಕೆ ಇಳಿದದ್ದು ಅಗತ್ಯವಾದ ಮಾಹಿತಿಯ ಆಕರಗಳಿಗೆ. ಕೆಲವೊಂದು ಪುಸ್ತಕಗಳು ಭಾರತದಲ್ಲಿ ಲಭ್ಯವಿದ್ದರೆ, ಇನ್ನೊಂದಿಷ್ಟಕ್ಕೆ ಬೇರೆ ಬೇರೆ ದೇಶಗಳಲ್ಲಿ, ಅಲ್ಲಿನ ಯುನಿವರ್ಸಿಟಿಯ ಲೈಬ್ರೆರಿಗಳಲ್ಲಿ ಹುಡುಕಾಡಬೇಕಿತ್ತು. ಇಲ್ಲೇ ಲಭ್ಯವಿದ್ದ ಮಾಹಿತಿಗಳನ್ನು ಕಲೆ ಹಾಕಿ ಅಧ್ಯಯನ ಮಾಡುತ್ತಿದ್ದಾಗಲೇ ಶುರುವಾದ ಕೋವಿಡ್‌ ಮತ್ತು ಅದರ ಬೆನ್ನಲ್ಲೇ ಬಂದ ಲಾಕ್‌ಡೌನ್‌ ಹೊರಗಡೆಯಿಂದ ಪುಸ್ತಕ ತರಿಸಿಕೊಳ್ಳುವ ನನ್ನ ಯೋಜನೆಗೆ ತೀವ್ರ ಹೊಡೆತ ಕೊಟ್ಟಿದ್ದು ನಿಜ. ಈ ಸಂದರ್ಭದಲ್ಲಿ ಬೇರೆ ಬೇರೆ ಯುನಿವರ್ಸಿಟಿಗಳಿಂದ, ಬ್ರಿಟಿಷ್‌ ಲೈಬ್ರೆರಿಯಿಂದ ಪುಸ್ತಕಗಳನ್ನು ತೆಗೆಸಿ ತಲುಪಿಸಿದ್ದು ನವೀನ್‌ ಭಾರತಿಯವರು. ಮತ್ತೊಂದಿಷ್ಟು ಪುಸ್ತಕಗಳು ಬೇಕಿದ್ದಾಗ ಸಹಾಯಕ್ಕೆ ನಿಂತವರು ಮುಂಬೈಯಲ್ಲಿ ಕೆನರಾ ಬ್ಯಾಂಕಿನ ಅಧಿಕಾರಿಯಾಗಿರುವ ಸ್ನೇಹಿತ ನಾಗರಾಜ್‌ ಕಸಲಾರವರು ಹಾಗೂ ಬಾಲ್ಯದ ಗೆಳತಿ ವಸುಧಾ ರಾವ್‌. ಈ ಎಲ್ಲರ ಸಹಾಯದಿಂದ ಇಂತದ್ದೊಂದು ಕೃತಿ ನಿಮ್ಮ ಕೈಗಿಡಲು ಸಾಧ್ಯವಾಯಿತು. ಎಲ್ಲರನ್ನೂ ಮನಃಪೂರ್ವಕವಾಗಿ ನೆನೆಯುತ್ತಾ, ಧನ್ಯವಾದಗಳನ್ನು ಹೇಳಬಯಸುತ್ತೇನೆ. 2019ರಲ್ಲಿ ಶುರುವಾದ ಈ ಕೃತಿಯೊಂದಿಗಿನ ಪಯಣ ಮುಗಿದು ಪುಸ್ತಕದ ಕರಡು ಪ್ರತಿ ಕೈಗಿಡುತ್ತಿದ್ದಂತೆ, ತಿದ್ದಿ ತೀಡಿ, ಅಗತ್ಯ ಬದಲಾವಣೆಗಳನ್ನು ಸೂಚಿಸಿ ರೂಪು ಕೊಟ್ಟಿದ್ದು ನಾಗೇಗೌಡ ಕೀಲಾರ ಶಿವಲಿಂಗಯ್ಯರವರು ಮತ್ತು ಕಾದಂಬರಿಕಾರ ಕರಣಂ ಪವನ್‌ ಪ್ರಸಾದ್‌ರವರು. ಒಂದು ರೀತಿಯಲ್ಲಿ ಪುಸ್ತಕದ ಮೊದಲ ವಿಮರ್ಶಕರಿವರು. ನನ್ನ ಮೇಲೆ ಭರವಸೆಯಿಟ್ಟು ಮಾಡಿದ ಈ ಸಹಾಯಕ್ಕೆ ಇಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ಪುಸ್ತಕದ ವಿಷಯ ನನ್ನ ತಲೆಯಲ್ಲಿ ಪಕ್ವವಾಗುವ. ಮೊದಲೇ, ಹೊಸದೊಂದು ಪುಸ್ತಕ ಬರೆಯುತ್ತೇನೆಂದು ಗೊತ್ತಾಗುತ್ತಲೇ ನನ್ನ ಮೇಲಿನ ನಂಬಿಕೆಯಿಂದ ತಕ್ಷಣವೇ ಪ್ರಕಟಿಸುತ್ತೇನೆಂದು ನಿರ್ಧಾರಕ್ಕೆ ಬಂದು, ಕಾದು ಪ್ರಕಟಿಸುವುದರೊಂದಿಗೆ ಪುಸ್ತಕದ ಸಹಭಾಗಿ ಆದವರು ಕಾನ್ಕೇವ್‌ ಪ್ರಕಾಶನದ ನಂದೀಶ್‌ ದೇವ್‌ ಅವರು. ನಮ್ಮ ಈ ಪಯಣ ಹೀಗೇ ಮುಂದುವರಿಯಲಿ ಎಂದು ಆಶಿಸುತ್ತೇನೆ. ಈ ಬರಹಕ್ಕೆ ಫೈಜ್‌ ಅವರ ನನ್ನ ಇಷ್ಟದ ಕವಿತೆ. ಮುಂದಿಟ್ಟುಕೊಂಡು, ನಿಮಗೆಲ್ಲರಿಗೂ ಅದನ್ನು ಓದಿಸಲೇಬೇಕು ಅಂದುಕೊಳ್ಳುತ್ತಿರುವಾಗ ಉರ್ದು ಕವಿತೆಯನ್ನು ಕನ್ನಡಕ್ಕೆ ಅನುವಾದಿಸುವುದೇ ನನಗೊಂದು ಸವಾಲಾಗಿತ್ತು. ತಕ್ಷಣಕ್ಕೆ ಸಹಾಯಕ್ಕೆ ನಿಂತವರು ಸದಾ ಕವಿತೆಯನ್ನೇ ಮಾತಾಡುವ ನಮ್ಮ ನಡುವಿನ ಚಿದಂಬರ ನರೇಂದ್ರರವರು. ಸರಳವಾಗಿ ಕವಿತೆಯನ್ನು ಅನುವಾದಿಸಿಕೊಟ್ಟ ಅವರಿಗೆ ಪ್ರೀತಿಯ ಧನ್ಯವಾದಗಳು. ಇನ್ನು ಇದರಲ್ಲಿರುವ ಚಿತ್ರಗಳನ್ನು ಹುಡುಕಾಡಲು ಪಾಡು ಪಡುತ್ತಿದ್ದಾಗ ತನಗೆ ಗೊತ್ತಿರುವ ಎಲ್ಲಾ ಕಡೆ ಹುಡುಕಾಡಿ ಅಗತ್ಯ ಚಿತ್ರಗಳನ್ನು ಒದಗಿಸಿಕೊಟ್ಟ ಪತ್ರಕರ್ತರಾದ ಸಮೀವುಲ್ಲ ಬೆಳಗೂರು ಅವರಿಗೆ ಮನದಾಳದ ಧನ್ಯವಾದಗಳು.



- ಪಲ್ಲವಿ ಇಡೂರು

 

ಪುಟಗಳು: 188

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !