ಲೇಖಕರು: ನವೀನ್ ಲಕ್ಕೂರ್
ಅನುವಾದಕರು: ಕವಿತಾ ಪರಮೇಶ್
ಈ ಪುಸ್ತಕದಲ್ಲಿ, ಹನ್ನೆರಡು ಅತ್ಯಂತ ಅವಶ್ಯಕವಾಗಿರುವ, ವಿರೋಧಭಾಸವಾದ ಹಾಗೂ ಪ್ರಬಲವಾದ ಸೂತ್ರಗಳನ್ನು ವಿವರಿಸಲಾಗಿದೆ. ಎರಡು ತುಂಟು ಆನೆಗಳ ಸಂವಾದದ ಮೂಲಕ, ಉದ್ಯಮಶೀಲತೆಯಲ್ಲಿ ಯಶಸ್ಸು ಸಾಧಿಸುವ ಸೂತ್ರಗಳನ್ನು ಮತ್ತು ಅವುಗಳ ಬಳಕೆಯಿಂದ ಅಸಮಾನ್ಯ ಯಶಸ್ಸು ಸಾಧಿಸುವ ಬಗೆಯನ್ನು ತಿಳಿಸಲಾಗಿದೆ. ಅವರ ನಿರೂಪಣೆಯನ್ನು ಸೂಕ್ತವಾದ ಉದಾಹರಣೆಯೊಂದಿಗೆ ವಿವರಿಸಿರುವುದರಿಂದ, ಓದುಗರಿಗೆ ಈ ಸೂತ್ರಗಳನ್ನು ಸರಳವಾಗಿ ಅರ್ಥವಾಗಲಿದೆ.
ಒಬ್ಬ ಉದ್ಯಮಿ ತನ್ನ ಉದ್ಯಮದ ಬೆಳವಣಿಗೆಗಾಗಿ ಅದರ ಕಾರ್ಯಾಚರಣೆಯಲ್ಲಿ ಉದ್ಯಮಕ್ಕೆ ಸಂಬಂದಿಸಿದ ಎಲ್ಲರೊಂದಿಗೆ ಆರೋಗ್ಯಕರ ಸಂಬಂಧವನ್ನು ಬೆಳೆಸಿಕೊಳ್ಳಲು ಮನದಟ್ಟು ಮಾಡಿಕೊಳ್ಳಬೇಕಾಗಿರುವ ಹಾಗೂ ಅಳವಡಿಸಿಕೊಳ್ಳಬೇಕಾಗಿರುವ ಹಲವು ಆಯಾಮಗಳನ್ನು ಅತ್ಯುತ್ತಮವಾಗಿ ಲೇಖಕರು ಹೊರತಂದಿದ್ದಾರೆ. ಒಬ್ಬ ವ್ಯಾಪಾರಿ ಹೇಗೆ ತನ್ನನ್ನು ಉದ್ಯಮಿಯಾಗಿ ಪರಿವರ್ತಿಸಿಕೊಳ್ಳಬಹುದೆಂದು ತಿಳಿಸಿಕೊಡುತ್ತಾರೆ. ಈ ಪುಸ್ತಕದಿಂದ ಕಲಿಯುವುದು ಹಾಗೂ ಗಳಿಸುವುದು ತುಂಬಾ ಇದೆ. ಸಂಭಾಷಣೆ ಶೈಲಿ ನಿರೂಪಣೆ ಅಳವಡಿಸಿಕೊಂಡಿರುವುದರಿಂದ, ಓದುವುದು ಉತ್ಸಾಹದಾಯಕವಾಗಿದೆ.
ಟಿಕೆಕೆ ಭಾಗವತ್
ಮಾಜಿ ಛೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರು,
ಇಂಡಿಯನ್ ಓವರ್‍ಸೀಸ್ ಬ್ಯಾಂಕ್,
ಈ ಪುಸ್ತಕದ ಅವಳಿ ಸೂತ್ರಗಳನ್ನು ಗಮನಿಸಿದಾಗ, ಅವು ಒಂದೇ ನಾಣ್ಯದ ಎರಡು ಮುಖಗಳಂತೆ ಕಂಡು ಬಂದು, ಸರಳವೆನಿಸಬಹುದು. ಆದರೆ ಅವುಗಳನ್ನು ಎರಡು ಲವಲವಿಕೆಯಿಂದ ಕೂಡಿರುವ ಆನೆಗಳ ಆಸಕ್ತಿದಾಯಕ ಕಥೆಗಳ ಮೂಲಕ ಅರ್ಥೈಸಿಕೊಂಡಾಗ, ಆ ಸೂತ್ರಗಳ ಆಳವಾದ, ಗಹನವಾದ ಅರ್ಥ ಹೊರಹೊಮ್ಮುತ್ತದೆ.
ಚಿಕ್ಕದಾದ, ಅರ್ಥ ಬದ್ಧವಾದ ಬದಲಾವಣೆಗಳನ್ನು ತರುವುದಕ್ಕೆ ಎಲ್ಲರೂ ಶ್ರಮ ವ್ಯಯಿಸುವ ಅವಶ್ಯಕತೆ ಇಲ್ಲ. ಉದ್ಯಮಶೀಲತೆ ಎಂದರೆ ದೊಡ್ಡ ದೊಡ್ಡ ದಿನ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದಲ್ಲ. ವ್ಯವಹಾರಿಕ ದೃಷ್ಟಿಯಿಂದ ಮಾತ್ರ ದಿನ ನಿತ್ಯದ ಚಟುವಟಿಕೆಗಳಾದ ಉತ್ಪಾದನೆ ಹಾಗೂ ಸೇವೆಯನ್ನು ನೋಡದೆ ಸಾಮಾಜಿಕ ದೃಷ್ಟಿ ಹೊಂದಿದರೆ, ಸರ್ವರೂ ಸಂಪತ್ತುಗಳಿಸಬಹುದು.
ಈ ಹನ್ನೆರಡು ಸೂತ್ರಗಳು ಹಲವು ರೀತಿಯಲ್ಲಿ ಉಪಯುಕ್ತವಾಗಿವೆ. ಇವುಗಳನ್ನು ಆಳವಾಗಿ ತಿಳಿದುಕೊಳ್ಳುವುದು ಒಳಿತು. ಇವುಗಳ ಒಳಾರ್ಥ ನಿಮ್ಮ ಯೋಚನಾಶೈಲಿ ಹಾಗೂ ನಡತೆಯನ್ನು ಸರಿಪಡಿಸುತ್ತವೆ. ಇವುಗಳನ್ನು ಅರ್ಥಮಾಡಿಕೊಂಡು, ಅಳವಡಿಸಕೊಳ್ಳುವುದರಿಂದ ನಿಮ್ಮ ಉದ್ಯಮಶೀಲತೆಯಲ್ಲಿ ಹಲವು ಸಕಾರಾತ್ಮ ಬದಲಾವಣೆಗಳನ್ನು ಕಾಣಬಹುದು.
ವಿ.ವಿ. ರಂಗನಾಥನ್
ವರ್ಲ್ಡ್ ಎಂಟ್ರೆಪ್ರೆನೂರ್ ಆಫ್ ದಿ ಇಯರ್ - ಮೊನಾಕೋ
ಪುಟಗಳು: 250
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !