ಬದುಕು . . ಬೆಳಕು . . . ಚುಟುಕು - 2 . . . ! (ಇಬುಕ್)

ಬದುಕು . . ಬೆಳಕು . . . ಚುಟುಕು - 2 . . . ! (ಇಬುಕ್)

Regular price
$3.49
Sale price
$3.49
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana 

 

ಕನ್ನಡದ ಟೈಮ್ಸ್ ಆಫ್ ಇಂಡಿಯಾದ ಪ್ರಧಾನ ಸಂಪಾದಕರಾಗಿದ್ದ ಸನ್ಮಿತ್ರ ಶ್ರೀ ಈಶ್ವರ ದೈತೋಟ ಅವರು ವಾರವಾರವೂ ಅವರ ಪತ್ರಿಕೆಗೆ ಪುಟ್ಟದೊಂದು ಅಂಕಣವನ್ನು ಬರೆದುಕೊಡುವುದು ಸಾಧ್ಯವೇ ಎಂದು ಕೇಳಿದಾಗ ಸಂತೋಷದಿಂದ ಒಪ್ಪಿಕೊಂಡ ನಾನು ಯಾವ ವಿಷಯದ ಬಗ್ಗೆ ಬರೆದರೆ ಸೂಕ್ತವಾಗುವುದೆಂದು ಯೋಚಿಸತೊಡಗಿದೆ. ಪ್ರಸಿದ್ಧ ಅಥವಾ ಸಾಮಾನ್ಯ ವ್ಯಕ್ತಿ, ಅಥವಾ ಒಂದು ಸಾಮಾನ್ಯ ಜೀವಿಗೆ ಸಂಬಂಧಿಸಿದ ಬದುಕಿನ ಒಂದು ವಿಶೇಷವಾದ ಘಟನೆ, ಅದು ಬೀರುವ ಬೆಳಕು ಮತ್ತು ಆ ಬದುಕು ಮತ್ತು ಬೆಳಕಿಗೆ ಸಂಬಂಧಿಸಿದಂತೆ ತ್ರಿಪದಿ ರೂಪದ ಒಂದು ಚುಟುಕು- ಇವುಗಳನ್ನು ಸೇರಿಸಿ ವಾರಕ್ಕೊಂದರಂತೆ ಅಂಕಣವನ್ನು ಬರೆಯಲು ನಿರ್ಧರಿಸಿದೆ. ಘಟನೆಗಳ ಕೇಂದ್ರದಲ್ಲಿರುವ ವ್ಯಕ್ತಿಗಳನ್ನು ಅಥವಾ ಜೀವಿಗಳನ್ನು ಆರಿಸಿಕೊಳ್ಳುವಾಗ ಪ್ರಾಚೀನ ಕಾಲದಿಂದ ೨೧ನೇ ಶತಮಾನದ ಅರ್ವಾಚೀನ ಕಾಲದವರೆಗೆ, ಪಕ್ಷಿಗಳಿಂದ ಮಾನವನವರೆಗೆ, ತತ್ತ್ವಜ್ಞಾನಿಗಳಿಂದ ಆರಂಭಿಸಿ ರಾಜಕಾರಣಿಗಳ ತನಕ, ಆತ್ಮಜ್ಞಾನಿಗಳಿಂದ ಪ್ರಾರಂಭಿಸಿ ವಿಜ್ಞಾನಿ-ತಂತ್ರಜ್ಞಾನಿಗಳ ವರೆಗೆ, ಪ್ರಾಚೀನ ಚೀನಾ ದೇಶದಿಂದ ಆಧುನಿಕ ಅಮೇರಿಕಾ ದೇಶಗಳ ವ್ಯಾಪ್ತಿಯನ್ನು ಬಳಸಿಕೊಳ್ಳುವ ಸಾಧ್ಯತೆಯ ಕುರಿತು ಯೋಚಿಸಿದೆ. ಅವರ ಬದುಕಿಗೆ ಸಂಬಂಧಿಸಿದ ಘಟನೆಯು ಹೊರಸೂಸುವ ಬೆಳಕು ಅನೇಕ ಬಣ್ಣಗಳನ್ನು ಒಳಗೊಂಡಿರಬಹುದು: ಕಲಿಯಬಹುದಾದ ಪಾಠ, ಹೊಸ ಚಿಂತನೆಗಳು, ಸಮಾನ ಘಟನೆಗಳು, ಪ್ರೇರಣೆಗಳು, ಸ್ಫುರಣೆಗಳು, ಸ್ಫೂರ್ತಿ, ಸ್ಥೈರ್ಯ, ಬಾಳಿನ ಗುರಿ, ಬಾಳಿಗೆ ಮಾರ್ಗದರ್ಶನ, ಗೆಲುವಿನ ದಾರಿಯ ಅಡೆತಡೆಗಳು, ಸ್ವಾಭಿಮಾನ, ಆತ್ಮವಿಶ್ವಾಸ, ದೇಶಪ್ರೇಮ, ಇತ್ಯಾದಿ ಇತ್ಯಾದಿ.

ಹೀಗೆ ಪ್ರಾರಂಭವಾದ ಅಂಕಣಗಳು ಕನ್ನಡದ ಟೈಮ್ಸ್ ಆಫ್ ಇಂಡಿಯಾದ ಭಾನುವಾರದ ಸಂಚಿಕೆಯಲ್ಲಿ ಸುಮಾರು ೩೩ ತಿಂಗಳುಗಳ ಕಾಲ ನಿರಂತರವಾಗಿ ಪ್ರಕಟಗೊಳ್ಳುತ್ತಾ ಬಂದವು. ಅವುಗಳಲ್ಲಿ ಪ್ರಾರಂಭವಾದ ೧೨ ತಿಂಗಳುಗಳಲ್ಲಿ ಪ್ರಕಟಗೊಂಡ ೫೨ ಅಂಕಣಗಳು ಕ್ರೂಢೀಕರಣಗೊಂಡು ಸಂಪುಟ - ೧ ರಲ್ಲಿ ಅಡಕಗೊಂಡುವು. ಅವುಗಳಲ್ಲಿ ಕಾಡು ಬಾತುಗಳು, ಡಿಮೋಸ್ತನೀಸ್, ಎಡಿಸನ್, ಹೆನ್ರಿ ಫೋರ್ಡ್, ಬುದ್ಧ, ರಾಮಕೃಷ್ಣ ಪರಮಹಂಸ, ವಿವೇಕಾನಂದ, ರಾಕ್‌ಫೆಲ್ಲರ್, ಬಿಥೋವನ್, ಲಿಂಕನ್, ಕೃಪಾಲಾನಿ, ಅನ್ವರ್ ಸದಾತ್, ಟಾಗೋರ್, ಅಬ್ದುಸ್ ಸಲಾಂ, ಐನ್‌ಸ್ಟೈನ್, ರಾಮನ್ ಮೊದಲಾದವರ ಬದುಕಿನ ವಿಶೇಷ ಘಟನೆಗಳು ಮತ್ತು ಅವು ಚೆಲ್ಲುವ ಬೆಳಕುಗಳು ಕಂಡುಬರುತ್ತವೆ.

 

ಪುಟಗಳು: 104

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !