ಬಹುಮುಖಿ

ಬಹುಮುಖಿ

Regular price
$3.99
Sale price
$3.99
Regular price
Sold out
Unit price
per 
Shipping does not apply

ಇದು ಈವತ್ತಿನ ಕಾಲದಲ್ಲಿ ಜರುಗುವ ನಾಟಕ. ರೋಚಕ ಕಥೆಯೊಂದರ ಬೆನ್ನಟ್ಟಿ ಹೋದ ಪತ್ರಕರ್ತನೊಬ್ಬನಿಗೆ ಎದುರಾಗುವ ಜಗತ್ತು ಇಲ್ಲಿ ಹಲವು ಪಾತಳಿಗಳಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅವನು ಸೃಷ್ಟಿಸಿದ ಸುದ್ದಿಯ ಮುಖಾಂತರ ಅವನ ಜೀವನದೊಳಕ್ಕೆ ಬರುವ ಜನರು ಅವರವರ ಕಥೆಗಳನ್ನು ಮುಂಚೂಣಿಗೆ ತರುತ್ತಾರೆ ಮತ್ತು ಆ ಮೂಲಕ ಪಲ್ಲಟದ ನೋವು, ಶಹರದ ಬದುಕಿನ ಢಾಂಬಿಕತೆ, ಪೊಳ್ಳು ಸಂಬಂಧಗಳ ಅಸಹನೀಯತೆ, ನಗರವೆಂಬ ಬೆಂಕಿಯೊಳಗೆ ಬಿದ್ದು ಉರಿದುಹೋಗುತ್ತಿರುವ ಜೀವನಕ್ರಮಗಳು ಅನಾವರಣಗೊಳ್ಳುತ್ತವೆ.

ನಮ್ಮ ದಿನನಿತ್ಯಗಳನ್ನು ಅನೇಕ ವಿಧಗಳಲ್ಲಿ ಪ್ರಭಾವಿಸುತ್ತಿರುವ ಮಾಧ್ಯಮಗಳು, ಅವು ಹುಟ್ಟಿಸಿದ ಭ್ರಮಾಲೋಕದಲ್ಲಿ ತಾಳತಪ್ಪಿದ ಸಂಬಂಧಗಳು, ಇತಿಹಾಸ-ಕಥನ-ನೆನಪುಗಳನ್ನು ಕುಶಲ ತಂತ್ರದಿಂದ ಬಳಸುವ ಜನರು ನಾಟಕದುದ್ದಕ್ಕೂ ಹಲವು ವೇಷಗಳಲ್ಲಿ ಬರುತ್ತಾರೆ. ಯಾವುದು ಕಥನ, ಯಾವುದು ಇತಿಹಾಸ, ಯಾವುದು ವೈಯಕ್ತಿಕ ದುರಂತ, ಯಾವುದು ಜೀವನೋಪಾಯದ ಕಾಯಕ ಅನ್ನುವುದು ಸ್ಪಷ್ಟವಾಗದ, ಯಾರು ಯಾರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆಂದು ತಿಳಿಯದ ವಿಶ್ವದೊಳಗೆ ಈ ನಾಟಕವಿದೆ.

 

ಪುಟಗಳು: 90

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !