ಬಲಾಕ (ಇಬುಕ್)

ಬಲಾಕ (ಇಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಬತೇರಿಯೆಂದರೆ ಕೋಟೆಯ ಗೋಡೆಯನ್ನು ಇನ್ನಷ್ಟು ಎತ್ತರಿಸಿ ಹಗೆಯ ಪಡೆಗಳನ್ನು ದೂರದಲ್ಲಿರುವಾಗಲೆ ಗುರುತಿಸಲು, ಎಚ್ಚರದಿಂದ ಕಾವಲು ಕಾಯಲು ಇರುವ ದುಂಡನೆಯ ತಾಣ. ಇದು ವಿಹಂಗಮ ನೋಟಕ್ಕೆ ನೆರವಾಗುವ ಸ್ಥಳ. ಪ್ರಸ್ತುತ ಸಂಕಲನ ಗ್ರಂಥಕ್ಕೆ, ಪ್ರಾಚೀನ-ಅರ್ವಾಚೀನ ಕವಿ-ಕೃತಿಗಳ ಪಕ್ಷಿನೋಟ ವಾಗಿರುವ ಕಾರಣ, ‘ಬತೇರಿ’ ಎಂಬ ಹೆಸರಿಟ್ಟಿದ್ದೇನೆ.

ಪಂಪ, ರನ್ನ, ನಯಸೇನ, ನೇಮಿಚಂದ್ರ - ಮೊದಲಾದ ಹಳೆಗನ್ನಡ ಕವಿಗಳನ್ನು ಕುರಿತು ಬರೆದ ಬರೆಹಗಳ ಜೊತೆಗೆ ಕುಮಾರವ್ಯಾಸ, ರತ್ನಾಕರವರ್ಣಿ, ಪಾಯಣ್ಣ ವ್ರತಿ, ಕನಕದಾಸರು - ಮುಂತಾದ ನಡುಗನ್ನಡ ಕವಿಗಳನ್ನು ಚರ್ಚಿಸಿರುವ ಲೇಖನಗಳೂ ಇವೆ. ಹಾಗೆಂದು ಇಡೀ ಸಂಕಲನ ಪುರಾತನ ಸಾಹಿತ್ಯ ಜಿಜ್ಞಾಸೆಗಷ್ಟೇ ಸೀಮಿತವಾಗಿಲ್ಲ.

ವಿಮರ್ಶಾತ್ಮಕ ಪ್ರಬಂಧಗಳಿರುವ ಈ ದೊಡ್ಡ ಕಟ್ಟಿನಲ್ಲಿ ಅರೆಪಾಲು ಹಿಂದಣ ಸಾಹಿತ್ಯಕ್ಕೆ ಮೀಸಲು ಇನ್ನು ಅರೆಪಾಲು ಆಧುನಿಕ ಸಾಹಿತ್ಯ ವಿವೇಚನೆಗೆ ಮುಡಿಪು. ನಮ್ಮ ಸಮಕಾಲೀನ ಸಾಹಿತ್ಯ ಕ್ಷೇತ್ರದ ಹಾಸು ದೊಡ್ಡದು. ಇದರ ವೈವಿಧ್ಯವೂ ಗಮನಾರ್ಹ ಹೊಸಗನ್ನಡ ಸಾಹಿತ್ಯ ಸಮೀಕ್ಷೆಯ ತೆನೆಯಲ್ಲಿ ಬಗೆಬಗೆಯ ಎಸಳುಗಳಿವೆ. ಭಾಷಾವಿಜ್ಞಾನ, ವ್ಯಾಕರಣ, ಸಂಶೋಧನೆ, ಕವಿ-ಕಾವ್ಯ ಪರಿಚಯ, ವ್ಯಕ್ತಿಚಿತ್ರಣ, ಜೀವನ ಚರಿತ್ರೆಗಳ ಅವಲೋಕನ, ಕೆಲವು ಪುಸ್ತಕಗಳ ವಿಮರ್ಶೆ, ತೆಲುಗು ಮತ್ತು ಬಂಗಾಳಿ ಭಾಷೆಯ ಒಬ್ಬೊಬ್ಬ ಲೇಖಕರ ಕೊಡುಗೆಯ ಸ್ವರೂಪ - ಹೀಗೆ ಹಲವು ಹತ್ತು ಬಗೆಯ ಬರೆಹಗಳು ಇಲ್ಲಿ ಮೈ ಪಡೆದಿವೆ.

ಇಲ್ಲಿನ ಬರವಣಿಗೆ ಒಂದು ಕೂರಿಗೆಯಲ್ಲಿ ಕುಳಿತು ಬರೆದುದಲ್ಲ. ಮೈಸೂರು, ಗುಲಬರ್ಗಾ, ಧಾರವಾಡ, ಮದರಾಸು ವಿಶ್ವವಿದ್ಯಾಲಯಗಳು ಏರ್ಪಡಿಸಿದ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ (ಸಿದ್ಧಪಡಿಸಿ ಓದಿದ) ಪ್ರಬಂಧಗಳಿವೆ, ಸ್ಮರಣಸಂಚಿಕೆ ಗಳಿಗೆ ಬರೆದ ಬರೆಹಗಳಿವೆ, ಪತ್ರಿಕೆಗಳಿಗೆ ಬರೆದ ಲೇಖನಗಳಿವೆ, ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯವಸ್ಥೆಗೊಳಿಸಿದ ಸಂಕಿರಣದಲ್ಲಿ ಮಾಡಿದ ಭಾಷಣಗಳಿವೆ. ಒಟ್ಟಾರೆ ಆಧುನಿಕ ಸಾಹಿತ್ಯದ ಪ್ರತಿಫಲನ ಇಲ್ಲಿದೆ. ಬಿತ್ತರ, ಬದ್ದವಣ ಹಾಗೂ ಬೊಂಬಾಳ - ಸಂಕಲನಗಳಲ್ಲಿ ಪ್ರಕಟವಾದ ಕೆಲವು ಪ್ರಬಂಧಗಳು ಈ ಸಂಕಲನದಲ್ಲಿಯೂ ಸೇರಿವೆ.

ಪ್ರಾಚೀನ ಮತ್ತು ಅರ್ವಾಚೀನ ಸಾಹಿತ್ಯ ಜಗತ್ತಿನ ಪರಿಚಯ ಬಯಸುವವರಿಗೆ ಈ ಸಂಕಲನ ನೆರವಿಗೆ ನಿಲ್ಲುತ್ತದೆ, ಪೂರ್ವಗ್ರಹಗಳಿರದ ಮತ್ತು ಬಹುಮುಖಿಯಾದ ಇಂತಹ ಸಂಕಲನಗಳು ಗಂಭೀರ ಸಾಹಿತ್ಯದಲ್ಲಿ ಆಸಕ್ತಿ, ಅಭಿರುಚಿ ಇರುವ ಓದುಗರಿಗೆ ಉತ್ತಮ ಪ್ರವೇಶ ಕಲ್ಪಿಸುತ್ತವೆ.

 

ಪುಟಗಳು : 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !