ಬೆಳಗಾಗಿ ಎಚ್‍ಎಸ್‍ವಿ ನೆನೆಯುವುದು ಸ್ನೇಹವೆಂಬ ಚುಂಬಕವನ್ನ. ಗೆಳೆತನಕ್ಕೆ ಬಹು ದೊಡ್ಡ ಬೆಲೆ ಕೊಟ್ಟ ಕವಿ ಇವರು. ‘ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು’ ಎನ್ನುವ ಅವರದೇ ಕವಿತೆಯಂತೆ ಅವರಿಗೆ ಗೆಳೆಯರೆಂಬ ವಿಸ್ತಾರ ಬಾನು ಬೇಕು. ಅಂತಹ ಬೆಳಗಾಗಿ ತಾವೆದ್ದು ನೆನೆದ 21 ಆತ್ಮೀಯರ ಚಿತ್ರವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ‘ಅನಾತ್ಮ ಕಥನ’ದ ಮೂಲಕ ತಮ್ಮನ್ನೇ ಕಟ್ಟಿಕೊಟ್ಟ ಎಚ್ಚೆಸ್ವಿ ಈಗ ಕನ್ನಡ ಸಾಹಿತ್ಯ ಜಗತ್ತು ಪ್ರೀತಿಯಿಂದ ಕಂಡ ಮಹನೀಯರನ್ನು ನಮ್ಮ ಮುಂದಿರಿಸಿದ್ದಾರೆ. ಎಚ್ಚೆಸ್ವಿ ಎಂಬ ಕೆಲಿಡಿಯೋಸ್ಕೊಪ್ ಮೂಲಕ ಹಾದು ಬಂದ ಈ ಬರಹಗಳು ಕನ್ನಡದ ಬಗ್ಗೆ ಹೆಮ್ಮೆ ಮೂಡಿಸುತ್ತವೆ.
ಪುಟಗಳು: 141
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !