ಬರ್ಮುಡಾ ಟ್ರ್ಯಾಂಗಲ್‌

ಬರ್ಮುಡಾ ಟ್ರ್ಯಾಂಗಲ್‌

Regular price
$1.99
Sale price
$1.99
Regular price
Sold out
Unit price
per 
Shipping does not apply

ದಕ್ಷಿಣ ಫ್ಲೋರಿಡಾದಿಂದ ಬಹಾಮ ಮತ್ತು ಪೋರ್ಟೋರಿಕೋ ದೇಶಗಳನ್ನು ಬಳಸಿ ಬರ್ಮುಡಾವರೆಗಿರುವ , ಅಟ್ಲಾಂಟಿಕ್‌ ಸಾಗರದಲ್ಲಿನ ತ್ರಿಕೋಣಾಕಾರದ ಜಲಪ್ರದೇಶವೇ 'ಬರ್ಮುಡಾ ಟ್ರ್ಯಾಂಗಲ್'. ಈ ಜಲಪ್ರದೇಶ ಇವತ್ತು ಜಗತ್ತಿನ ಅತ್ಯಂತ ವಿವರಣಾತೀತ ರಹಸ್ಯಗಳ ತವರುಮನೆಯಾಗಿದೆ. ಇಲ್ಲಿ ಈಚೆಗೆ , ಎಂದರೆ ೧೯೪೫ರಿಂದ ಈಚೆಗೇ ಕನಿಷ್ಠ ನೂರು ವಿಮಾನಗಳೂ ಹಡಗುಗಳೂ ಸರ್ಕಾರಿ ದಾಖಲೆಗಳ ಪ್ರಕಾರವೇ , ಯಾವ ಸುಳಿವನ್ನೂ ಉಳಿಸದೆ , ಅಕ್ಷರಶಃ ಅಂತರ್ಧಾನವಾಗಿವೆ. ಈ ಇಪ್ಪತ್ತಾರು ವರ್ಷಗಳ ಕಾಲಾವಧಿಯಲ್ಲಿ ಇವುಗಳಲ್ಲಿ ಯಾನಮಾಡುತ್ತಿದ್ದ ಕನಿಷ್ಠ ಒಂದು ಸಾವಿರ ಜನರು ಮೃತ ದೇಹ ಅಥವಾ ಅಪಘಾತದ ಕುರುಹುಗಳು , ಅಥವಾ ಅಪಾ ಯದ ಸಂಜ್ಞೆಗಳು ಇತ್ಯಾದಿ ಯಾವುದನ್ನೂ ಉಳಿಸದೆ , ನಾವರಿಯದ ಎಲ್ಲಿಗೋ ನಿರ್ಗಮಿಸಿದ್ದಾರೆ! ಇವರು ಪ್ರಯಾಣ ಮಾಡುತ್ತಿದ್ದ ನೌಕೆಗಳಾಗಲಿ , ವಿಮಾನಗ ಳಾಗಲಿ ಅಥವಾ ಅವುಗಳ ಅವಶೇಪಗಳಾಗಲಿ ಈವರೆಗೂ ದೊರೆತಿಲ್ಲ. ಈಗ ಅಲ್ಲಿ ವಾಹನಸಂಚಾರ ಹೆಚ್ಚಿದ್ದರೂ, ತನಿಖೆ, ಮುನ್ನೆಚ್ಚರಿಕೆ ಕ್ರಮಗಳು ಅತ್ಯಾಧುನಿಕವಾಗಿದ್ದರೂ ಅಂತರ್ಧಾನಗಳು ಮಾತ್ರ ಮತ್ತೂ ಸಂಭವಿಸುತ್ತಲೇ ಇವೆ.


ಅನೇಕ ವಿಮಾನಗಳು ಹೊರಟ ಅಥವಾ ಇಳಿಯುವ ವಿಮಾನ ನಿಲ್ದಾಣದ ಜೊತೆ ಸಹಜ ಸಂಪರ್ಕವನ್ನು ಇಟ್ಟುಕೊಂಡಿರುವಾಗಲೇ , ತಾವು ಮಾಯವಾಗುವ ಕೊನೆಯ ಗಳಿಗೆಯವರೆಗೂ ಸಂಭಾಷಿಸುತ್ತಿದ್ದು ಹಠಾತ್ತಾಗಿ ಮಾಯವಾಗಿವೆ! ಹೆಚ್ಚೆಂದರೆ ಕೆಲವು ವೈಮಾನಿಕರು ತಾವು ಮಾಯವಾಗುವ ಮುನ್ನ ತಮ್ಮ ಉಪಕರಣಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದೋ , ಕಾಂಪಾಸ್‌ ಮುಳ್ಳು ಗಡಿಯಾರದಂತೆ ಗಿರಿಗಿರಿ ತಿರುಗುತ್ತಿದೆಯೆಂದೋ , ಅಥವಾ ಆಕಾಶ ಹಳದಿಯಾಗುತ್ತಿದೆಯೆಂದೋ ಇಲ್ಲವೇ ಸಮುದ್ರ ಹೇಗಿರಬೇಕಿತ್ತೋ ಹಾಗಿಲ್ಲವೆಂದೋ ಅರ್ಥವಾಗದ , ಹೆಚ್ಚಿನ ಯಾವ ವಿವರಣೆಯೂ ಇಲ್ಲದ ವಿಲಕ್ಷಣ ರೇಡಿಯೋ ಸಂಕೇತಗಳನ್ನು ಕಳಿಸಿ ನಾಪತ್ತೆಯಾಗಿದ್ದಾರೆ.

ಬರ್ಮುಡಾ ಟ್ರ್ಯಾಂಗಲ್-ನಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಅಸಾಧಾರಣ ಹಾಗೂ ರಹಸ್ಯಮಯ ಘಟನೆಗಳು ವಿಜ್ಞಾನಕ್ಕೆ ಬಿಡಿಸಲಾರದ ಒಗಟುಗಳಾಗಿವೆ. ನಮಗೆ ಅರ್ಥವಾಗದುದು ಸುಳ್ಳು ಎಂದು ಅಲ್ಲಗಳೆಯುವುದು ವಿಜ್ಞಾನಕ್ಕೆ ಅಪಚಾರ ಮಾಡಿದಂತೆ. ಎಲ್ಲವೂ ಗೊತ್ತಿರುವ ಸುಪರಿಚಿತ ಪ್ರಪಂಚ ಒಂದರಲ್ಲಿ ಕ್ಷೇಮವಾಗಿ ಬಾಳಿಬದುಕುವ ಆಸೆ ಎಲ್ಲರಲ್ಲಿಯೂ ಇರುವಂತೆಯೇ ನೂತನ ಅಪರಿಚಿತ ದಿಗಂತಗಳನ್ನು ಅರಿಯುವ, ಅನ್ವೇಷಿಸುವ ಆಸೆಯೂ ಸಹ ಎಲ್ಲರಲ್ಲಿ ಇರುತ್ತದೆ. ಆದ್ದರಿಂದಲೇ ಕನ್ನಡ ನಾಡಿನ ಓದುಗರಿಗೆ ಬರ್ಮುಡಾ ಟ್ರ್ಯಾಂಗಲಿನ ವಿಚಿತ್ರ ಘಟನೆಗಳನ್ನೂ, ಅಲ್ಲಿನ ಅದೃಶ್ಯ ಶಕ್ತಿಗಳ ದಿಗಿಲಿಕ್ಕಿಸುವ ಪ್ರಭಾವಗಳನ್ನು ಪರಿಚಯಿಸುವ ಸಾಹಸಕ್ಕೆ ಶ್ರೀ ಪ್ರದೀಪ ಕೆಂಜಿಗೆಯವರು ಕೈ ಹಾಕಿದ್ದಾರೆ. ಬರ್ಮುಡಾ ಟ್ರ್ಯಾಂಗಲಿನ ಬಗ್ಗೆ ಈವರೆಗೆ ಬಂದಿರುವ ಗ್ರಂಥ ರಾಶಿಯನ್ನೆಲ್ಲಾ ಅಭ್ಯಾಸ ಮಾಡಿ ಅದನ್ನೆಲ್ಲಾ ಸರಳ ಸುಲಲಿತ ಕನ್ನಡದಲ್ಲಿ ಈ ಪುಸ್ತಕದಲ್ಲಿ ತಿಳಿಸಿದ್ದಾರೆ.

 

ಪುಟಗಳು: 98

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !