ಬೆಸ್ಟ್‌ ಆಫ್‌ ಡುಂಡಿ (ಆಡಿಯೋ  ಬುಕ್)

ಬೆಸ್ಟ್‌ ಆಫ್‌ ಡುಂಡಿ (ಆಡಿಯೋ ಬುಕ್)

Regular price
$5.99
Sale price
$5.99
Regular price
Sold out
Unit price
per 
Shipping does not apply

ಓದಿದವರು:  ಎಚ್. ಡುಂಡಿರಾಜ್

ಆಡಿಯೋ ಪುಸ್ತಕದ ಅವಧಿ : 1 ಗಂಟೆ 07 ನಿಮಿಷ

 

ನನ್ನ ಆಯ್ದ ಹನಿಗವನಗಳ ಸಂಗ್ರಹ 'ಬೆಸ್ಟ್ ಆಫ್ ಡುಂಡಿ' ಇದರ ಇ ಬುಕ್ ಮತ್ತು ಆಡಿಯೊ ಬುಕ್ ಆವೃತ್ತಿ ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಪ್ರೈ.ಲಿ ಮೂಲಕ ಹೊರಬರುತ್ತಿರುವುದು ತುಂಬಾ ಸಂತೋಷದ ಸಂಗತಿ. ನನ್ನ ಮೊದಲ ಹನಿಗವನ ಸಂಕಲನ 'ಪಾಡ್ಯ ಬಿದಿಗೆ ತದಿಗೆ' 1985 ರಲ್ಲಿ ಪ್ರಕಟವಾಗಿತ್ತು. ಆ ನಂತರ ಕಳೆದ 35 ವರ್ಷಗಳಲ್ಲಿ ನನ್ನ 17 ಹನಿಗವನ ಸಂಕಲನಗಳು ಪ್ರಕಟವಾಗಿವೆ. ಇಲ್ಲಿಯವರೆಗೆ ನಾನು 4500ಕ್ಕೂ ಹೆಚ್ಚು ಹನಿಗವನಗಳನ್ನು ಬರೆದಿರುವೆ. ಈ ಸಂಗ್ರಹದ ವೈಶಿಷ್ಟ್ಯವೆಂದರೆ ಇದೇ ಮೊದಲ ಬಾರಿಗೆ ನನ್ನ ಹನಿಗವನಗಳು ಇ ಬುಕ್ ಮತ್ತು ಆಡಿಯೊ ಬುಕ್ ರೂಪದಲ್ಲಿ ಬರುತ್ತಿವೆ. ಇಲ್ಲಿರುವ ಇನ್ನೂರು ಹನಿಗವನಗಳನ್ನು ನಾನೇ ಆಯ್ಕೆ ಮಾಡಿ ನಾನೇ ವಾಚನ ಮಾಡಿದ್ದೇನೆ.

ಕಳೆದ ನಾಲ್ಕು ದಶಕಗಳಿಂದ ನನ್ನ ಹನಿಗಾರಿಕೆ ನಿರಂತರವಾಗಿ ನಡೆದು ಬರಲು ಕಾರಣ ಕನ್ನಡದ ಓದುಗರು ನೀಡಿದ ಪ್ರೋತ್ಸಾಹ. ಇದಕ್ಕಾಗಿ ಓದುಗ ಬಂಧುಗಳಿಗೆ ನಾನು ಚಿರಋಣಿ. ಈಗ ಡಿಜಿಟಲ್ ಹಾಗೂ ಆಡಿಯೊ ಆವೃತ್ತಿಯಲ್ಲಿ ಬರುತ್ತಿರುವ ಈ ಸಂಕಲನವೂ ಕಾವ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ಭಾವಿಸುತ್ತೇನೆ. 

 

-ಎಚ್.ಡುಂಡಿರಾಜ್

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.