ಭಾರತ ಕಥಾಮಂಜರಿ (ಇಬುಕ್)

ಭಾರತ ಕಥಾಮಂಜರಿ (ಇಬುಕ್)

Regular price
$1.99
Sale price
$1.99
Regular price
Sold out
Unit price
per 
Shipping does not apply

GET FREE SAMPLE

 

ಕುಮಾರವ್ಯಾಸ ಭಾರತದ ಎರಡು ಕಥಾನಕಗಳು.

 

ತನ್ನ ಪ್ರತಿಭೆಯನ್ನು ಭಗವದಿಚ್ಛೆಯ ಲಿಪಿಕಾರಮಾತ್ರವನ್ನಾಗಿ ಮಾಡಿ ಕೊಂಡು ಮಹಾಕಾವ್ಯವನ್ನು ಸೃಜಿಸಿದ ಮಹಾಕವಿಗಳಲ್ಲಿ ಕುಮಾರವ್ಯಾಸ ಅನ್ಯಾದೃಶ ಸತ್ತ್ವಶಾಲಿ. ಕವಿ ಪ್ರತಿಭೆಯ ದೃಷ್ಟಿಯಲ್ಲಿ ನೋಡಿದರೂ ಅವನು ಪ್ರಾಕೃತಿಕ-ಅದ್ಭುತವಾಗಿಯೇ ಉಳಿದಿದ್ದಾನೆ. ಸ್ವಪ್ರತಿಭೆ ಹಾಗೂ ದಿವ್ಯದರ್ಶನ ಗಳ ವಿರಳಸಂಯೋಗವನ್ನು ಈ ಮಹಾಸತ್ತ್ವನಲ್ಲಿ ಕಾಣುತ್ತೇವೆ. ಮಹಾ ವಿಶಾಲಮತಿಗಳೂ ವಿರಾಟ್ ದರ್ಶನ ಸಂಪನ್ನರೂ ಆದ ಮಹರ್ಷಿ ವ್ಯಾಸರ ಮಾನಸಪುತ್ರನೆನಿಸಿಕೊಳ್ಳುವ ಸೌಭಾಗ್ಯವನ್ನು ಪಡೆದ ಪುಣ್ಯವಂತ ಈ ನಮ್ಮ ಕುಮಾರವ್ಯಾಸ ಯೋಗೀಂದ್ರ. ಕಾವ್ಯ ಸೃಷ್ಟಿಯನ್ನು ಚಾರು ಸೃಷ್ಟಿ ಮಾತ್ರ ವಾಗಿ ಭಾವಿಸದೆ ಭಗವದ್‌ಯೋಗವಾಗಿ ಸಂಭಾವಿಸಿ ಅನುಭಾವಿಸಿದ ; ಲೌಕಿಕ ಪಾರಮಾರ್ಥಿಕಗಳ, ಮಾನುಷ ಅತಿಮಾನುಷಗಳ, ಮಾನಸ ಅತಿಮಾನಸಗಳ ವ್ಯಾಪಾರಗಳನ್ನು ತನ್ನ ಕಾವ್ಯದಲ್ಲಿ ದಿವ್ಯವಾಗಿ ಸಂಯೋಗಿಸಿದ ಯೋಗಿಕವಿ ಯೀತ. ಮೇಲ್‌ನೋಟಕ್ಕೆ ಹುಚ್ಚು ಭಕ್ತನಂತೆ ಭಾಸವಾಗಿ, ಭಾವೋದ್ರಿಕ್ತ ನಂತೆ ಮಾತಾಳಿಯಂತೆ ಅವಜ್ಞೆಗೂ ಪಾತ್ರನಾಗಬಹುದಾದ ಈ ಅತಿ ಜಟಿಲ ವಿರಲ ಸರಲ ಕವಿ, ಸಾವಧಾನದ ಅಭ್ಯಾಸಕ್ಕೆ ಭಗವದ್ ಚೋದ್ಯವೆಂಬಂತೆ ಅನುಭೂತವಾದರೆ ಆಶ್ಚರ್ಯವೇನೂ ಇಲ್ಲ. ಹೀಗೆ ಪ್ರಾರಂಭದಲ್ಲಿ ಅತ್ಯಂತ ಸರಲ ವೆಂಬಂತೆ ತೋರಿ ಅನುಭವಕ್ಕೆ ಅತಿ ಸೂಕ್ಷ್ಮ ಸಂಕೀರ್ಣವಾಗಿ ಪ್ರಜ್ಞಾಗೋಚರ ವಾಗುವ ಕವಿಗಳು ಕನ್ನಡದಲ್ಲಿ ವಿರಲವೆಂದೇ ಹೇಳಬೇಕು.

 

 

ಪುಟಗಳು: 130
 
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !