ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದ ಲಲಿತ ಪ್ರಬಂಧಗಳ ಸಂಕಲನ. ಭಾರತಿ ಬಿ ವಿ ಯವರ ವಿಶೇಷ ಹಾಸ್ಯ ಪ್ರಜ್ಞೆ ಈ ಲಲಿತ ಪ್ರಬಂಧಗಳಲ್ಲಿ ಅನಾವರಣಗೊಂಡಿದೆ.
ಭಾರತಿ ಬಿ ವಿ ಯವರು ಹುಟ್ಟಿದ್ದು ಕೊಳ್ಳೆಗಾಲದಲ್ಲಿ. ಬೆಳೆದಿದ್ದು ಮೈಸೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ. ಪ್ರಾಥಮಿಕ ಶಿಕ್ಷಣ ಆ ಎಲ್ಲ ಊರುಗಳ ಸರಕಾರಿ ಶಾಲೆಗಳಲ್ಲಿ. ಹೈಸ್ಕೂಲಿನಿಂದಾಚೆಗೆ ಶುರುವಾಗಿ ಇಲ್ಲಿಯವರೆಗೂ ಬೆಂಗಳೂರು ಅವರ ಊರಾಗಿದೆ. ಮೊದಲ ಪುಸ್ತಕ ‘ಸಾಸಿವೆ ತಂದವಳು’ (2013) ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ ಕೆ ಇಂದಿರಾ ಪ್ರಶಸ್ತಿ ಬಂದಿದೆ. ಉಸಿರಿರುವವರೆಗೂ ಒಳ್ಳೆಯದನ್ನು ಓದುತ್ತಾ, ಅಲ್ಪಸ್ವಲ್ಪ ಬರೆಯುತ್ತಾ, ಊರೂರು ಅಲೆಯುತ್ತಾ ಮತ್ತು ನಗುತ್ತಾ ಬದುಕಿರುವಾಸೆ ಹೊಂದಿದ್ದಾರೆ.
ಪುಟಗಳು: 160