ಭೂಮಿಕಾ ಸಂಪುಟ - ೧ (ಇಬುಕ್)

ಭೂಮಿಕಾ ಸಂಪುಟ - ೧ (ಇಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ʻಭೂಮಿಕಾʼ - ಇದು ನನ್ನ ಸಂಶೋಧನ ಪ್ರಬಂಧಗಳ ತೂಣೀರ. ನನ್ನ ಒಂಬತ್ತು ಪುಸ್ತಕಗಳಲ್ಲಿ ಹರಿದು ಹೋಗಿದ್ದ ಪ್ರಬಂಧಗಳ ಪೋಣಿಕೆ. ೧. ಚಾವುಂಡ ರಾಯ ಪುರಾಣಂ (ಸಂಪಾದನೆ - ೧೯೮೩), ೨. ಬಾಂದಳ (೧೯೮೩), ೩. ಬಾಸಿಂಗ (೧೯೮೫), ೪. ಬಡಬಾಗ್ನಿ (೧೯೯೫), ೫. ಬಿತ್ತರ (೧೯೯೮), ೬. ರೋಣ ಬಸದಿ : ಶಾಸನಗಳ ನೆಲೆಯಲ್ಲಿ (೨೦೦೨), ೭. ಬದ್ದವಣ (೨೦೦೩), ೮. ಸಮಗ್ರ ಜೈನ ಸಾಹಿತ್ಯ ಸಂಪುಟಗಳು, ಸಂಪುಟ-೨ (೨೦೦೬), ೯. ಬೊಂಬಾಳ (೨೦೦೭), ಈ ಪುಸ್ತಕಗಳಲ್ಲಿ ಪ್ರಕಟವಾಗಿದ್ದ ಸಂಶೋಧನ ಪ್ರಬಂಧಗಳು ʻಭೂಮಿಕಾ ಸಂಪುಟʼ ಒಂದರ ತಿರುಳು. ಇವು ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ವಿಚಾರ ಸಂಕಿರಣಗಳಲ್ಲಿ, ವಿಶ್ವವಿದ್ಯಾನಿಲಯಗಳು, ಅಕಾಡೆಮಿಗಳು ಹಾಗೂ ಸಾಹಿತ್ಯ ಪರಿಷತ್ತು, ರಾಜ್ಯದ ಒಳಗೆ ನಾಡಿನ ಹೊರಗೆ ಮಾಡಿದ, ಮಂಡಿಸಿದ ಉಪನ್ಯಾಸಗಳು, ಓದಿದ ಪ್ರಬಂಧಗಳು. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾದ ಪ್ರಬಂಧಗಳಿದ್ದರೆ, ಕ್ವಚಿತ್ತಾಗಿ ಉಳಿದವು ಅಪ್ರಕಟಿತ ಸಂಪ್ರಬಂಧಗಳು.

ಮಹಿಳಾ ಪರವಾದ, ಮಹಿಳೆಯರನ್ನೇ ಕುರಿತಾದ, ಅವರ ಸುತ್ತ-ಮುತ್ತ ಆಳಕ್ಕೆ ಹರಿದಾಡಿದ ಪ್ರಬಂಧಗಳನ್ನು ʻಭರಣʼ - ಎನ್ನುವ ಶೀರ್ಷಿಕೆ ಹೊತ್ತ ಸಂಪುಟ ಐದರಲ್ಲಿ ಸೇರಿಸಲಾಗಿದೆ. ಹೆಣ್ಣಿಗೆ ಸಂಬಂಧಿಸಿದ ವೈಚಾರಿಕ, ವಿಮರ್ಶಾತ್ಮಕ, ಸಂಶೋಧ ನಾತ್ಮಕ ಪ್ರಬಂಧಗಳು, ವ್ಯಕ್ತಿಚಿತ್ರಗಳು ಮತ್ತು ಮಹಿಳಾ ಸಾಹಿತಿಗಳ ಪುಸ್ತಕಗಳಿಗೆ ಬರೆದ ಮುನ್ನುಡಿ, ಅಭಿಪ್ರಾಯಗಳು - ಹೀಗೆ 'ಭರಣ' ಸಂಪುಟ ಐದರಲ್ಲಿ, ಐದು ಭಾಗಗಳಿವೆ. ಇಷ್ಟು ವಿವರವನ್ನು ಕೊಡುವ ಮುಖ್ಯ ಉದ್ದೇಶವೆಂದರೆ, ಸಂಶೋಧನ ಪ್ರಬಂಧದ ಸಂಪುಟ ಒಂದರಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಒಂದು ಪ್ರಬಂಧವೂ ಇಲ್ಲ ಎನ್ನುವ ಪ್ರಶ್ನೆ ಉದ್ಧವಿಸಿದರೆ, ಅದಕ್ಕೆ ಉತ್ತರ ರೂಪ ಈ ವಿವರಣೆ.

ಈ ಸಂಪುಟದ ಪರಿವಿಡಿಯಲ್ಲಿ ಒಟ್ಟು ನಲವತ್ತೊಂದು ಪ್ರಬಂಧಗಳ ಶಿರೋನಾಮೆ ಗಳಿವೆ. ಆದರೆ ವಾಸ್ತವವಾಗಿ ನನ್ನ ಪ್ರಬಂಧಗಳ ಸಂಖ್ಯೆ ಮುವ್ವತ್ತೈದು ಮಾತ್ರ ಉಳಿದ ಆರು ಪ್ರಬಂಧಗಳು ನನ್ನ ಇತರ ಪ್ರಬಂಧ ಸಂಕಲನಗಳಾದ ಬಿತ್ತರ, ಬದ್ದವಣ, ಬೊಂಬಾಳ, ರೋಣಬಸದಿ, ಚಾವುಂಡರಾಯ ಪುರಾಣ ಮತ್ತು ಸಮಗ್ರ ಜೈನ ಸಾಹಿತ್ಯ ಸಂಪುಟ-೨ - ಇವುಗಳಿಗೆ ಈ ಪುಸ್ತಕಗಳ ಪ್ರಧಾನ ಸಂಪಾದಕರು ಬರೆದ ಮುನ್ನುಡಿಯ ಮಾತುಗಳಿವೆ. ಅವುಗಳನ್ನು ಈ ಸಂಪುಟದಲ್ಲಿ ಸೇರಿಸಲಾಗಿದೆ. ಅದಕ್ಕೆ ಪ್ರಮುಖ ಕಾರಣವಿದೆ. ಈ ಹೊತ್ತಗೆಗಳನ್ನು ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಹೊಂಬುಜ ಜೈನಮಠ, ಶ್ರವಣಬೆಳುಗೊಳದ ಜೈನ ಅಧ್ಯಯನ ಸಂಸ್ಥೆ - ಇವು ಪ್ರಕಟಿಸಿವೆ. ಆಯಾ ಸಂದರ್ಭದಲ್ಲಿ ಅವುಗಳ ಪ್ರಧಾನ ಸಂಪಾದಕರಾಗಿದ್ದವರು, ಡಾ. ಎಚ್.ಜೆ. ಲಕ್ಕಪ್ಪ ಗೌಡರು, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌, ಡಾ. ವಿವೇಕ ರೈ, ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕರು, ಹೊಂಬುಜ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರು, ಶ್ರವಣಬೆಳುಗೊಳ, ಪ್ರೊ. ಹಂಪ ನಾಗರಾಜಯ್ಯನವರು. ವಿದ್ವಾಂಸರಾದ ಇವರುಗಳು, ತಾವು ಪ್ರಕಟಿಸಿದ ಪುಸ್ತಕಗಳ ಪ್ರಸ್ತುತತೆ, ಮಹತ್ವ ಹಾಗೂ ಸಂಶೋಧಕಿಯ ವಿದ್ವತ್ತು, ಆಕೆಗೆ ಸಂಶೋಧನೆಯಲ್ಲಿರುವ ಶ್ರದ್ಧೆ - ಸಾಧನೆಗಳನ್ನು ಕುರಿತು ಪ್ರಸ್ತಾಪಿಸಿ ದ್ದಾರೆ. ಅವರ ಮೌಲಿಕ ವಿದ್ವತ್‌ಪೂರ್ಣ ಮಾತುಗಳು, ಗ್ರಂಥಗಳ ಅನನ್ಯತೆಯ ದೃಷ್ಟಿಯಿಂದ ಮಹತ್ವವಾದುವೆನಿಸಿದವು. ಆದುದರಿಂದ ಆಯಾ ಪುಸ್ತಕಗಳ ಪ್ರಧಾನ ಸಂಪಾದಕರ ಮುನ್ನುಡಿಯ ಮಾತುಗಳನ್ನು ಇಲ್ಲಿ ಸೇರಿಸಲಾಗಿದೆ.

 

ಪುಟಗಳು : 150

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !