ಬೊಮ್ಮನಹಳ್ಳಿಯ ಕಿಂದರಿ ಜೋಗಿ (ಆಡಿಯೋ  ಬುಕ್)

ಬೊಮ್ಮನಹಳ್ಳಿಯ ಕಿಂದರಿ ಜೋಗಿ (ಆಡಿಯೋ ಬುಕ್)

Regular price
$3.99
Sale price
$3.99
Regular price
Sold out
Unit price
per 
Shipping does not apply

ಬರಹಗಾರ: ಕುವೆಂಪು

 

ಆಡಿಯೋ ಪುಸ್ತಕದ ಅವಧಿ : 45 ನಿಮಿಷ

ಸಹಯೋಗ:

ನಾವು ಸ್ಟುಡಿಯೋ, ಮೈಸೂರು

 

ಹತ್ತಿರ ಹತ್ತಿರ ನೂರು ವರ್ಷಗಳ ಹಿಂದೆ ಕುವೆಂಪು ಅವರು ರಚಿಸಿದ ಈ ಕವಿತೆಗಳು ಅಂದಿನಿಂದಲೂ ಮಕ್ಕಳು-ಹಿರಿಯರು ಎಲ್ಲರನ್ನೂ ರಂಜಿಸುತ್ತ ಬಂದಿವೆ. ಈ ಕವಿತೆಗಳಿಗೆ ಈ ಹಿಂದೆ ಖ್ಯಾತ ನಾಟಕಕಾರ ಬಿ.ವಿ.ಕಾರಂತರು ಹಾಕಿದ ಟ್ಯೂನ್ಸ್ ಅನ್ನು ಪಡೆದು ಮರುಸಂಯೋಜಿಸಿ ನಿಮಗಾಗಿ ತಂದಿದ್ದಾರೆ ಲೇಖಕ, ಸಂಗೀತಗಾರ ಅನುಷ್ ಶೆಟ್ಟಿಯವರು. ಅವರ ಜೊತೆಯಲ್ಲಿ ಇಲ್ಲಿನ ಕವಿತೆಗಳಿಗೆ ಹಿನ್ನೆಲೆ ದನಿ ನೀಡಿದ್ದಾರೆ ಕರ್ವಾಲೊ, ಜುಗಾರಿ ಕ್ರಾಸ್ ಆಡಿಯೋಪುಸ್ತಕಗಳ ಖ್ಯಾತಿ ರಂಗಕರ್ಮಿ, ಚಿಂತಕ ಶ್ರೀಪಾದ ಭಟ್ ಅವರು. ಈಗ ಮೈಲ್ಯಾಂಗ್ ಅಲ್ಲಿ ಕೇಳಿ ಒಂದು ಕ್ಲಾಸಿಕ್!

------------------
ಕುವೆಂಪು ಈ ಕವಿತೆ ಬರೆಯಲು ಪ್ರೇರಣೆ ನೀಡಿದ್ದು ಜರ್ಮನಿ ದೇಶದ ಒಂದು ಪುಟ್ಟ ಕವಿತೆ. ಅದು ಅಲ್ಲಿ ಕವಿತೆಯಾಗುವ ಮುನ್ನ ಜನಮನದ ಕಥೆಯಾಗಿ ಹರಿದಾಡುತ್ತಿತ್ತಂತೆ. ಅದನ್ನು ಇಂಗ್ಲಿಷ್‌ ಕವಿ ರಾಬರ್ಟ್‌ ಬ್ರೌನಿಂಗ್‌ ಕವಿತೆಯಾಗಿಸಿದ. ಅದಕ್ಕೆ ಅವನು ಇಟ್ಟ ಹೆಸರು 'ಪೈಡ್‌ ಪೈಪರ್‌ ಆಫ್‌ ಹ್ಯಾಮ್ಲಿನ್‌' ಅಂತ.


ಜರ್ಮನಿಯ ಆ ಕಾವ್ಯ ಕನ್ನಡದ ಕುವೆಂಪು ಅವರಿಗೆ ಪ್ರೇರಣೆ ನೀಡುತ್ತದೆ. ಹ್ಯಾಮ್ಲಿನ್‌ನ ಪೈಡ್‌ ಪೈಪರ್‌ ಇಲ್ಲಿ ಬೊಮ್ಮನಹಳ್ಳಿಯ ಕಿಂದರಿಜೋಗಿಯಾಗುತ್ತಾನೆ. ಕನ್ನಡದ ಈ ಕವಿತೆಯಲ್ಲಿ ಎಲ್ಲೂ ಇದು ಬೇರೆ ದೇಶದ್ದು ಎನಿಸುವುದೇ ಇಲ್ಲ. ತುಂಗಾತೀರದ ಬೊಮ್ಮನಹಳ್ಳಿಯ ಅಪ್ಪಟ ಜಾನಪದ ಕವಿತೆಯಾಗಿ ಇದು ಮರುಹುಟ್ಟು ಪಡೆದಿದೆ. ಅದು ಮಕ್ಕಳಿಗಾಗಿ ಬರೆದ ನೀಳ್ಗವಿತೆ. ಓದುತ್ತ ಹೋದಾಗ ಅದು ಮುಗಿದದ್ದೇ ಗೊತ್ತಾಗುವುದಿಲ್ಲ. ಕುವೆಂಪು ಕಣ್ಣಿಗೆ ಅದೆಷ್ಟು ಬಗೆಯ ಇಲಿಗಳು ಕಾಣುತ್ತವೆ ನೋಡಿ:

ಜೋಗಿಯು ಬಾರಿಸೆ ಕಿಂದರಿಯ

ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸೊಂಡಿಲಿ,

ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ,

ಮಾವಿಲಿ, ಅಕ್ಕಿಲಿ, ತಂಗಿಲಿ, ಗಂಡಿಲಿ,

ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ,

ಎಲ್ಲಾ ಬಂದವು ಓಡೋಡಿ...

ಇಡೀ ಕಾವ್ಯ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ರಸಾನುಭೂತಿಯನ್ನು ನೀಡುತ್ತದೆ. ಅದಕ್ಕೇ ಇರಬೇಕು, ಅದು ಹುಟ್ಟಿ 93 ವರ್ಷ ಕಳೆದರೂ ಹಳೆಯದಾಗಿಲ್ಲ.

ಸುಭಾಸ ಯಾದವಾಡ
ಮೂಲ: ವಿಜಯವಾಣಿ ಪತ್ರಿಕೆಯ ಬರಹ ( https://www.vijayavani.net/article-about-kindari-jogi/)

 

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.