ಚೆಕ್-ಪೋಸ್ಟ್

ಚೆಕ್-ಪೋಸ್ಟ್

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

 

ಪ್ರಕಾಶಕರು: ಗೋಮಿನಿ ಪ್ರಕಾಶನ

Publisher: Gomini Prakashana

 

ಚೆಕ್‌ಪೋಸ್ಟ್ನ ಬಹುತೇಕ ಭಾಗ ವೈಯಕ್ತಿಕ ಬದುಕನ್ನು ಬಂಡವಾಳ ಮಾಡಿಕೊಂಡು ಬರೆದ ಕಾದಂಬರಿ. ಜೀವನದ ಅನಿರೀಕ್ಷಿತಗಳಿಗೆ ಶರಣಾಗಿ, ತಲ್ಲಣಗಳಿಗೆ ಸಾಕ್ಷಿಯಾಗಿ, ಕೈ ಕೊಸರಿಕೊಂಡೋ... ಕರೆದಂತೆ ಹಿಂಬಾಲಿಸಿಕೊ೦ಡೋ... ಹೇಗೋ ಒಂದು ಬದುಕು ಸವೆಸುತ್ತಾ, ಒಂದೊ೦ದು ಕಾಲಘಟ್ಟದಲ್ಲಿ ನಿಂತು ಬಂದ ದಾರಿಯನ್ನೊಮ್ಮೆ ಅವಲೋಕಿಸಿಕೊಂಡಾಗ ಅಕ್ಷರ ರೂಪದಲ್ಲಿ ದಕ್ಕಿದ್ದೇ ಈ ಚೆಕ್‌ಪೋಸ್ಟ್. ಹಾಗಂತ ಇದನ್ನೊಂದು ಬಯೋಗ್ರಾಫಿ ಅಂದುಕೊ೦ಡರೆ ಬಿಲ್‌ಕುಲ್ ನನ್ನ ಸಹಮತವಿಲ್ಲ. ಚೆಕಪೋಸ್ಟ್ ಹೊರತುಪಡಿಸಿ ಹೇಳಿಕೊಳ್ಳಬೇಕಾದ ವಿಷಯಗಳೇ ಸಾಕಷ್ಟಿರುವಾಗ ಆತ್ಮಚರಿತ್ರೆ ಹೇಗಾದೀತು!

ನಾನು ಬಂದ೦ತೆ ಬದುಕಿದವನೇ ಅಲ್ಲ. ಅದಕ್ಕಿರುವ ಆದರ್ಶ ದಾರಿಗಳು, ಮಾರ್ಗದರ್ಶಕರು ಕಣ್ಣಿಗೆ ಕಂಡರೂ ಅಪಾಯದ ದಾರಿಗಳನ್ನೇ ಆರಿಸಿಕೊಂಡು ಮೆಟ್ಟಿದವನು. ಮುಂದೊ೦ದು ದಿನ ರೋಚಕ ಕತೆಯಾದರೂ ಹುಟ್ಟಿಕೊಂಡೀತೆ೦ದು ಸವಾಲುಗಳನ್ನೇ ಪ್ರೀತಿಯಿಂದ ಎದುರು ಹಾಕಿಕೊಂಡವನು. ಒಂದೇ ಕಲ್ಲಿನಲ್ಲಿ ಎರಡು ಹೊಡದಂತೆ ಜೀವನಕ್ಕೊಂದು ಊರುಗೋಲು, ಕಾದಂಬರಿಗೊ೦ದು ಕಥಾವಸ್ತುವನ್ನು ಹುಡುಕಿಕೊಂಡು ಬದುಕಿದ ನನ್ನ ಕತೆ ಬಯೋಗ್ರಾಫಿಯ ಆಶಯಗಳನ್ನು ಈಡೇರಿಸುವುದಿಲ್ಲ. ಸಂಕುಚಿತ ಭಾವನೆ, ಸಂಕೋಲೆಗಳ ಪ್ರಭಾವಕ್ಕೆ ಒಳಗಾಗದೇ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಡುತ್ತಾ ಬೆತ್ತಲಾಗುವ ಬಯೋಗ್ರಾಫಿ ಇದಲ್ಲ. ಹಾಗೆಯೇ ಡ್ರೈವರ್ ಕಮ್ ಓನರ್ ಬದುಕಿನ ಪ್ರತಿಯೊಂದು ವಿಷಯಗಳನ್ನೊಳಗೊಂಡ ಕಾದಂಬರಿಯೂ ಅಲ್ಲ.

ಆತ್ಮ ಸಂತೋಷಕ್ಕೆ೦ದು ಬರೆದುಕೊಂಡ ನನಗೆ ನೂರಾರು ಓದುಗರು ಹುಟ್ಟಿಕೊಂಡರು. ಓದುಗರ ಸಂಪ್ರೀತಿಗೆ ಬರೆಯುತ್ತಾ ವಿಮರ್ಶಕರೂ ಹುಟ್ಟಿಕೊಂಡಿದ್ದರಿ೦ದ ಇಷ್ಟೆಲ್ಲಾ ಹೇಳಬೇಕಾಯಿತು.

 

-ರಾಜು ಗಡ್ಡಿ 

 

ಈಗ ಓದಿ ಕೇವಲ ನಿಮ್ಮ ಮೈಲ್ಯಾಂಗ್ ಆ್ಯಪ್ ಅಲ್ಲಿ.

 

ಪುಟಗಳು: 152

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !