ಅಧ್ಯಾತ್ಮ ಡೈರಿ

ಅಧ್ಯಾತ್ಮ ಡೈರಿ

Regular price
$6.99
Sale price
$6.99
Regular price
Sold out
Unit price
per 
Shipping does not apply

ಡೈರಿ ಬರೆಯುವ ರೂಪದಲ್ಲಿರುವ ಇಲ್ಲಿನ ಪುಟ್ಟ ಪುಟ್ಟ ಬರಹಗಳಲ್ಲಿ ಪ್ರೀತಿ ಮತ್ತು ಬದುಕಿನ ಕುರಿತ ಸ್ಪೂರ್ತಿ ತುಂಬುವ ಬರಹಗಳಿವೆ. ಇದನ್ನು ಚೇತನಾ ತೀರ್ಥಹಳ್ಳಿಯವರು ಬರೆದಿದ್ದಾರೆ. ಅಧ್ಯಾತ್ಮ, ನಮ್ಮಂಥ ಜನಸಾಮಾನ್ಯರ ಪಾಲಿಗೆ ಅಲೌಕಿಕ ಸಾಧನೆಯ ವಿಷಯವಲ್ಲ. ದಿನದಿನದ ಜಂಜಡದಿಂದ ಮುಕ್ತರಾಗಲು, ಹಗುರಾಗಲು, ಅಡ್ಡಿ ಆತಂಕಗಳನ್ನು ಎದುರಿಸುವ ಕಸುವು ತುಂಬಿಕೊಳ್ಳಲು ಅದೊಂದು ಊರುಗೋಲು. ವ್ಯಕ್ತಿತ್ವ ವಿಕಸನ ಸಾಧ್ಯವಾಗದ ಹೊರತು ಸಮಾಜ ಜೀವಿಯಾಗಿ, ವಿಶ್ವಮಾನವರಾಗಿ ನಮ್ಮ ಬೆಳವಣಿಗೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಅಧ್ಯಾತ್ಮ ನಮ್ಮ ಜೀವನ ಯಾನದ ಒಂದು ಮುಖ್ಯ ಮಾರ್ಗ. ತಿಂದುಂಡು ಬದುಕಿ ಸತ್ತು ಹೋಗುವ ಸರಳ ಪ್ರಕ್ರಿಯೆ ಸಂಕೀರ್ಣವಾಗ ತೊಡಗಿದಾಗ, ಆ ಸಿಕ್ಕನ್ನು ಬಾಚಿ ನೇರಗೊಳಿಸುವ ಹಣಿಗೆಯೇ ನಮ್ಮ ಪಾಲಿನ ಅಧ್ಯಾತ್ಮ. ಅಧ್ಯಾತ್ಮ ಡೈರಿ, ಈ ಸಿಕ್ಕು ಬಿಡಿಸುವ ಪ್ರಕ್ರಿಯೆಯಲ್ಲಿ ಸಿಕ್ಕ ಕೆಲವು ಹೊಳಹುಗಳ ಬರವಣಿಗೆ

ಪುಟಗಳು : 136