ಚಿಗುರಿದ ಕನಸು

ಚಿಗುರಿದ ಕನಸು

Regular price
$5.99
Sale price
$5.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

ಜ್ಞಾನಪೀಠ ಪುರಸ್ಕೃತರಾದ ಶಿವರಾಮ ಕಾರಂತರ ಅತ್ಯುತ್ತಮ ಕಾದಂಬರಿ. ಶಂಕರನ ಪಾತ್ರವನ್ನು ಆಧಾರವಾಗಿಟ್ಟುಕೊಂಡು ಮಾನವರ ಸಂಬಂಧಗಳ ಬಗ್ಗೆ ಈ ಕಾದಂಬರಿಯಲ್ಲಿ ಸುಂದರವಾಗಿ ವಿವರಿಸಿದ್ದಾರೆ.

*ಈಗಿನ ಪೀಳಿಗೆಯಲ್ಲಿ ಎಷ್ಟೋ ಜನರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವುದಕ್ಕೆ ಮತ್ತು ಉದ್ಯೋಗದ ಸಲುವಾಗಿ ತಮ್ಮ ಹುಟ್ಟೂರನ್ನು ತ್ಯಜಿಸಿ ನಗರಕ್ಕೆ ಹೋಗಿ ವಿದ್ಯಾಭ್ಯಾಸ ಮುಗಿಸಿ, ಉದ್ಯೋಗ ಪಡೆದು ಅಲ್ಲೇ ನೆಲಸುತ್ತಾರೆ. ಉದ್ಯೋಗ ದೊರಕಿದ ನಂತರ ತಮ್ಮ ಹುಟ್ಟೂರನ್ನೇ ಮರೆಯುವ ಎಷ್ಟೋ ಜನರನ್ನು ಹಾಗೆಯೇ ಹೆತ್ತವರಿಗೆ ತಿಂಗಳಿಗೆ ಇಷ್ಟು ಅಂತ‌ ಕಳಿಸಿದರೆ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸುತ್ತಾರೆ , ಆದರೆ ಹಿರಿಯರು ಹುಟ್ಟಿ ಬೆಳದ ನೆಲ, ಅದನ್ನು ಕಾಣಬೇಕು, ಅಲ್ಲಿ ಬದುಕಬೇಕು, ಅದು ಬರೀ ನೆಲವೆಲ್ಲ ಅದೊಂದು ದೇವಸ್ತಾನ,ಅದು ತನ್ನ ಹೆತ್ತ ತಾಯಿಗೆ ಸಮಾನವೆಂದು ಭೂಮಿತಾಯಿಯ ಮಕ್ಕಳಿಗಿರಬೇಕಾದ ಆಸೆ, ಆದರೆ ಈಗಿನ ಪೀಳಿಗೆಯಲ್ಲಿ ಅದು ಬತ್ತಿಹೋಗಿದೆ ಅದಕ್ಕೆ ಅವರವರ ಕಾರಣಗಳುಂಟು*

ಆದರೆ ಇಲ್ಲಿ ಬರುವ ಶಂಕರನ ಪಾತ್ರವು ಅದಕ್ಕೆ ‌ತದ್ವಿರುದ್ದ, ತಾನು ಹುಟ್ಟಿ ಬೆಳೆದಿದ್ದು ನಗರದಲ್ಲಾದರೂ ತನಗೆ ಹುಟ್ಟೊರಿಲ್ಲವೆಂದು ಬೇಸರ, ತಾನು ವಿದ್ಯುತ್ ಇಂಜಿನಿಯರ್ ಅದರೂ ತನ್ನ ಆಸಕ್ತಿಯಲ್ಲ ಕೃಷಿ ಜೀವನದಲ್ಲಿ. ತನ್ನ ಸ್ನೇಹಿತನಾದ ಸೀತಾರಾಮನಿಂದ ತನ್ನ ಹುಟ್ಟೂರು ಬಂಗಾಡಿ ಎಂದು ತಿಳಿದು ಅಲ್ಲಿಗೆ ಹೋಗುತ್ತಾನೆ. ಅಲ್ಲಿ ಹಲವಾರು ವ್ಯಕ್ತಿಗಳನ್ನು ಭೇಟಿಯಾದಾಗ ಮನುಷ್ಯರ ಗುಣಗಳನ್ನು ಒಂದೂಂದಾಗಿ ಅರ್ಥಮಾಡಿಕೂಳ್ಳುತ್ತಾನೆ. ಅಲ್ಲಿ ಆತನನ್ನು ಪ್ರೀತಿಸುವ ತನ್ನ ಅಜ್ಜಿ, ಮುತ್ತಯ್ಯ ಕೃಷ್ಣ, ಶ್ರೀ ಮತಿ,ಆರಾಧಿಸುವ ಎಳಚಿತ್ತಾಯರು, ದ್ವೇಷಿಸುವ ತನ್ನ ಸೋದರಮಾವ ರಾಮಾರಾಯ ಇನ್ನೂ ಹಲವರನ್ನು ಭೇಟಿಯಾಗುತ್ತಾನೆ. ಶಂಕರ ಮತ್ತು ತನ್ನ ತಮ್ಮ ವಿಠ್ಠಲರ ಸಂಬಂಧದ ಬಗ್ಗೆ ಓದುತ್ತಾ ಹೋದರೆ ಎಷ್ಟೋ ಖುಷಿಯಾಗುತ್ತದೆ ಅಣ್ಣ ತಮ್ಮಂದಿರ ಸಂಬಂಧ ಹೀಗಿರಬೇಕೆಂದು. ವಿಠ್ಠಲನ ಹಾಗು ಸೀತಾರಾಮನ ಸಹಾಯದಿಂದ ಕೃಷಿ ಜೀವನವನ್ನು ಆರಂಭಿಸಿ ಒಳ್ಳೆ ಕೀರ್ತಿ ಹೊಂದುತ್ತಾನೆ, ಹೀಗೆ‌ ತನ್ನ ಜೀವನವು ಸಾಗುವ ಸಮಯದಲ್ಲಿ ತನ್ನನ್ನು ಪ್ರೀತಿಸುವವರನ್ನು ಕಳೆದುಕೂಳ್ಳುತ್ತಾನೆ. *ನಗರದಲ್ಲಿ ದೂರಕದೇ‌ ಇರುವ ಸಂತೋಷವನ್ನು, ತನ್ನನ್ನು ಪ್ರೀತಿಸುವವರನ್ನು, ಒಳ್ಳೆಯ ಸ್ನೇಹಿತರನ್ನು, ಕಡೆಯದಾಗಿ ತನ್ನನ್ನು ಅರ್ಥ ಮಾಡಿಕೂಂಡು ತನ್ನ ಜೊತೆಯಲ್ಲಿ ಇರಲು ಇಷ್ಟಪಟ್ಟ ವರಲಕ್ಷ್ಮೀ ಮತ್ತು ತಂದೆ ತಾಯಿಯರ ಜೂತೆ ಬಂಗಾಡಿಯಲ್ಲಿ ಕೃಷಿ ಜೀವನ ಸಾಗಿಸುತ್ತಾ ಹೋಗುತ್ತಾನೆ* .

"ಸಂಬಂಧಗಳನ್ನು ಎಷ್ಟು ಸ್ವಚ್ಚವಾಗಿ ಇಟ್ಟುಕೊಂಡರೆ, ಬದುಕು ಅಷ್ಟೇ ಸಂತೋಷವಾಗಿರುತ್ತದೆ".

 

- ಕಾರ್ತಿಕ್ 

 

ಕೃಪೆ

https://www.goodreads.com/

 

ಪುಟಗಳು: 320

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !