ಚಿತ್ರಗುಪ್ತನ ಸನ್ನಿಧಿಯಲ್ಲಿ

ಚಿತ್ರಗುಪ್ತನ ಸನ್ನಿಧಿಯಲ್ಲಿ

Regular price
$3.99
Sale price
$3.99
Regular price
Sold out
Unit price
per 
Shipping does not apply

ಲೇಖಕಿ: ಜಯಶ್ರೀ ಕಾಸರವಳ್ಳಿ

ಪ್ರಸ್ತುತ ಸಂಕಲನದ ಎಲ್ಲ ಕತೆಗಳಲ್ಲೂ ಅಸ್ವಸ್ಥ ಮನಸ್ಥಿತಿಗಳ, ಪರಿಸ್ಥಿತಿಗಳ, ಪ್ರಪಂಚಗಳ ಅನಾವರಣ ನಡೆದಿದೆ. ಪರ್ಯಾಯವಾಗಿ, ಮನಸ್ಸು ಅಸ್ವಸ್ಥಗೊಂಡಿರುವುದರಿಂದ ಸುತ್ತಲ ಲೋಕವೂ ರೋಗಗ್ರಸ್ತವೆಂಬಂತೆ ಕಾಣಿಸುತ್ತಿದೆಯೋ ಅಥವಾ ಅಸ್ವಸ್ಥ ಸಮಾಜವು ಮನಸ್ಸುಗಳ ಅಸ್ವಾಸ್ಥ್ಯಕ್ಕೆ ಕಾರಣವಾಗುತ್ತಿದೆಯೋ ಎಂಬ ಚಿಂತನೆಯೂ ಈ ಕತೆಗಳಲ್ಲಿ ಗುಪ್ತಗಾಮಿನಿಯಾಗಿ ಹರಿದಿದೆ.

‘ಮುತ್ತಿನಡ್ಡಿಗೆ’ ಕತೆಯು ನತದೃಷ್ಟ ಹೆಣ್ಣೊಬ್ಬಳ್ಳ ಹೃದಯ ವಿದ್ರಾವ ಕತೆ.

‘ಇತಿಹಾಸದ ಪುಟಗಳೂ ಮತ್ತು ವಿಯಟ್ನಾಮ್‍ನ ಆ ಹೆಣ್ಣು ಮಗಳೂ’ ಕತೆಯ ವ್ಯಾಪ್ತಿ‘ಮುತ್ತಿನಡ್ಡಿಗೆ’ಗಿಂತ ಜಾಸ್ತಿ. ಬ್ಯೂಟಿ ಪಾರ್ಲರೊಂದರಲ್ಲಿ, ತನಗಿಂತ ಮೇಲಿನ ಸಾಮಾಜಿಕ ಸ್ತರದಲ್ಲಿರುವ ನಿರೂಪಕಿಯ ಮುಂದೆ, ಎರಡು ದಶಕಗಳ ಯುದ್ಧದ ನೆನಪುಗಳ ಭಾರ ಹೊತ್ತ ವಿಯಟ್ನಾಮೀ ಹೆಣ್ಣೊಬ್ಬಳ ಕಥನ ನಡೆಯುತ್ತದೆ.

‘ಸಹಿಷ್ಣುತೆ, ಅಸಹಿಷ್ಣುತೆಗಳ ನಡುವೆ’ ಕತೆಯು ಈ ಕಾಲದ ದೊಡ್ಡ ಜಿಜ್ಞಾಸೆಯೊಂದನ್ನು ತನ್ನ ಸೀಮಿತ ಕಾಲ ದೇಶಗಳ ಪರಿಧಿಯಲ್ಲಿ ಒಳಗೊಳ್ಳುವ ಸಾಹಸವನ್ನು ಮಾಡುತ್ತದೆ.

‘ಗಡಿಯಾರದಡಿಯಲ್ಲಿ’ ಸಾವಿನ ನಿರೀಕ್ಷೆಯಲ್ಲಿರುವ ಒಬ್ಬನ ಕತೆ. ಏಳೇ ದಿನಗಳಲ್ಲಿ ಸಂಭವಿಸಬಹುದಾದ ಸಾವಿನ ನಿರೀಕ್ಷೆಯಲ್ಲಿ ತನ್ನ ಸದ್ಯದ ಬದುಕಿನ ರೀತಿ, ತನ್ನ ಕನಸುಗಳ ಅಸಂಬದ್ಧತೆ, ಸಾವನ್ನು ಎದುರಿಸುವ ಪ್ರಯತ್ನದಲ್ಲಿ ತನ್ನ ಇದುವರೆಗಿನ ಬದುಕಿನ ಸ್ವರೂಪವನ್ನು ಅವಲೋಕಿಸಿಕೊಳ್ಳುವ ಪ್ರಯತ್ನ-ಹೀಗೆ ಸಾವಿನ ಸಾಧ್ಯತೆ ಆವರಿಸಿಕೊಂಡಿರುವ ವ್ಯಕ್ತಿಯೊಬ್ಬನ ಅಂತರಂಗ ಬಹಿರಂಗಗಳನ್ನು ಕತೆ ಬಿಚ್ಚಿಡುತ್ತದೆ.

ಹೀಗೆ ಒಂದೊಂದು ಕಥೆಯೂ ವಿಶಿಷ್ಟವಾಗಿ ಮೂಡಿಬಂದಿವೆ.

ಪುಟಗಳು: 144