ದ.ರಾ.ಬೇಂದ್ರೆ (ವಿಶ್ವಮಾನ್ಯರು) (ಇಬುಕ್)

ದ.ರಾ.ಬೇಂದ್ರೆ (ವಿಶ್ವಮಾನ್ಯರು) (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

ಲೇಖಕರು:

ಸಂಪಾದಕ: ಡಾ।। ನಾ. ಸೋಮೇಶ್ವರ

ಲೇಖಕ: ಟಿ. ಎಸ್‌. ಗೋಪಾಲ್‌

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ಜನವರಿ 31, 1986- ಅಕ್ಟೋಬರ್ 26, 1981) ಕನ್ನಡ ಸಾಹಿತ್ಯದ ನವೋದಯ ಕವಿ. ವರಕವಿ. ಮೊದಲ ಬಾರಿಗೆ ಕನ್ನಡಕ್ಕೆ ಪೂರ್ಣ ಪ್ರಮಾಣದ ಜ್ಞಾನಪೀಠವನ್ನು ತಂದವರು. ಕನ್ನಡ ಕಾವ್ಯಕ್ಕೆ ನಿಜವಾದ ಅರ್ಥದಲ್ಲಿ ಗೇಯತೆಯನ್ನು, ಲಾಲಿತ್ಯವನ್ನು, ಮಾಧುರ್ಯವನ್ನು ಬೇಂದ್ರೆಯವರು ತಂದರು. ಜನಸಾಮಾನ್ಯರ ಪದಗಳನ್ನು ಆರಿಸಿಕೊಂಡು, ಅವುಗಳನ್ನು ಅಧ್ಯಾತ್ಮದ ಔನ್ನತ್ಯಕ್ಕೆ ಏರಿಸಿದರು. ತಮ್ಮ ಜೀವಮಾನದ ಕೊನೆದಿನಗಳಲ್ಲಿ ಸಂಖ್ಯಾಶಾಸ್ತ್ರದ ಮೋಡಿಗೊಳಗಾಗಿ ಅವರು ಬರೆದ ಪದ್ಯಗಳು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾದವು ಎನ್ನುವುದು ನಿಜ. ಬೇಂದ್ರೆಯವರು ಒಂದು ಬಹು ದೊಡ್ಡ ‘ದೌರ್ಬಲ್ಯ‘ವೆಂದರೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದ ಉಕ್ಕಿ ಹರಿಯುತ್ತಿದ್ದ ತಮ್ಮ ಭಾವನೆಗಳಿಗೆ ಒಂದು ಒಡ್ಡನ್ನು ಹಾಕಲು ಅಸಮರ್ಥರಾದದ್ದು. ಹಾಗಾಗಿಯೇ ಬೇಂದ್ರೆಯವರು ಯಾವುದೇ ‘ಮಹಾಕಾವ್ಯ‘ವನ್ನು ಬರೆಯಲು ಹೋಗಲಿಲ್ಲ. ಅವರ ಬದುಕೇ ಯಾವ ಮಹಾಕಾವ್ಯಕ್ಕೂ ಕಡಿಮೆಯಿಲ್ಲ ಎನ್ನುವುದು ಬೇರೆಯ ಮಾತು. ಬೇಂದ್ರೆಯವರ ಕುರಿತ ಈ ಕೃತಿಯನ್ನು ಶ್ರೀ ಟಿ.ಎಸ್. ಗೋಪಾಲ್ ರಚಿಸಿದ್ದಾರೆ.

ಪುಟಗಳು: 48 

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !