ದಹನ

ದಹನ

Regular price
$4.99
Sale price
$4.99
Regular price
Sold out
Unit price
per 
Shipping does not apply

ಸಮಾಜದ ಮನಸ್ಸಿಗೆ ಬೇಕಾಗಿರುವ ಚಿಕಿತ್ಸೆಯಂತೆ ಸೇತೂರಾಮ್ ಅವರ ಮೂರು ಕಥೆಗಳು ಇಲ್ಲಿವೆ.

ನಂಗೇಲಿ   ಇಲ್ಲಿ ಇಡೀ ಪ್ರಜಾಪ್ರಭುತ್ವದ ಅಧಃಪತನದ ನಾಟಕವು ಪ್ರಧಾನ ನೆಲೆಯಲ್ಲಿದೆ. ನಮ್ಮ ದೇಶ ಕೃಷಿಪ್ರಧಾನ ದೇಶವೆನ್ನುತ್ತೇವೆ. ದೇಶದ ಬಹುದೊಡ್ಡ ಜನಸಮುದಾಯವು ತೊಡಗಿರುವ ಈ ವೃತ್ತಿಗೆ ಸಂಬಂಧಪಟ್ಟಂತೆ, ಮೊದಲ ‘ಹಸಿರುಕ್ರಾಂತಿ’ಯು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಅತಿಯಾಗಿ ಹೆಚ್ಚಿಸಿತು. ಸರ್ಕಾರವು ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಗೊಬ್ಬರಗಳ ಖರೀದಿಗೆ ರೈತರಿಗೆ ಸಬ್ಸಿಡಿ ನೀಡತೊಡಗಿತು. ಸರ್ಕಾರದ ಈ ಸೌಲಭ್ಯವನ್ನು ರೈತರು ಮತ್ತು ಗೊಬ್ಬರಗಳ ಮಾರಾಟಗಾರರ ಅಪವಿತ್ರ ಕೂಟವು ದುರುಪಯೋಗ ಮಾಡಿಕೊಳ್ಳ ತೊಡಗಿತು; ಸರ್ಕಾರ ವನ್ನು ದೋಚತೊಡಗಿತು. ಸರ್ಕಾರೀ ಅಧಿಕಾರಿಗಳೂ ಈ ದುಷ್ಟ ಕೂಟದಲ್ಲಿ ಶಾಮೀಲಾದರು. ರಾಜಕೀಯ - ವಾಣಿಜ್ಯಾತ್ಮಕವಾದ ಈ ಭ್ರಷ್ಟತೆಯು ತನ್ನಷ್ಟಕ್ಕೆ ತಾನು ಎನ್ನುವಂತೆ ಪ್ರತ್ಯೇಕವಾಗಿ ಉಳಿಯುವುದಿಲ್ಲ. ಅನೈತಿಕತೆಯಿಂದ ಬಂದ ಹಣ ಕುಟುಂಬದಲ್ಲಿ ಅನೈತಿಕತೆಯ ಬೀಜವನ್ನೂರುತ್ತದೆ; ಅದರ ವಿಘಟನೆಗೆ ಕಾರಣವಾಗುತ್ತದೆ. ಸೋಮಸುಂದರನ ಕುಟುಂಬದ ವಿಘಟನೆಯ ದುರಂತವನ್ನು ಕಥೆ ತೀವ್ರವಾಗಿ ಹೇಳುತ್ತದೆ. ಮಗ ಕುಡುಕನಾಗುತ್ತಾನೆ; ಷಂಡನಾಗುತ್ತಾನೆ. ಎಂಜಲಿನ ಕಾಸಿಗೆ ಕೈಯೊಡ್ಡುತ್ತ ತಲೆಹಿಡುಕನಾಗುತ್ತಾನೆ. ಸೊಸೆ ಸಿಡಿದುನಿಲ್ಲುತ್ತಾಳೆ; ಮನೆಯಲ್ಲಿಯೇ ಗೆಣೆಕಾರನೊಬ್ಬ ನೊಂದಿಗೆ ಕೂಟ ನಡೆಸುತ್ತಾಳೆ; ಕೊನೆಗೆ ಗೆಣೆಕಾರನ ವಂಚನೆಗೆ ಈಡಾಗಿ ನೇಣುಬಿಗಿದು ಕೊಂಡು ಸಾಯುತ್ತಾಳೆ.

ಒಂದೆಲಗ  ಕಥೆಯಲ್ಲಿ ಸಿಂಗಲ್-ಪೇರೆಂಟ್‍ನ ಗಂಡು ಹೆಣ್ಣುಗಳ ಜೀವನಚಿತ್ರಗಳಿವೆ.

ದಹನ ಉಳಿದೆರಡು ಕಥೆಗಳಿಗಿಂತ ಭಿನ್ನವಾದದ್ದು ಮತ್ತು ಹೆಚ್ಚು ಸಂಕೀರ್ಣವಾದ ಕಥೆಯಾಗಿದೆ. ಇಲ್ಲಿ ಮುರಿದುಹೋಗುತ್ತಿದ್ದ ತನ್ನ ಕೌಟುಂಬಿಕ ಬದುಕನ್ನು ಸಂಭಾಳಿಸಿ ಪುನಃರಚಿಸಿಕೊಳ್ಳುವ ಅಕ್ಷತಾ, ಗಂಡು ಒಡ್ಡುವ ಆಮಿಷವನ್ನು ತನ್ನ ಅಂತರಂಗದ ಕೆಚ್ಚನ್ನು ಹೆಚ್ಚಿಸಿಕೊಳ್ಳುವ ಚಿಕಿತ್ಸೆಯಂತೆ ನಿರ್ವಹಿಸುತ್ತಾಳೆ. 

ಪುಟಗಳು: 148

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

ಸೇತುರಾಂ ರವರ 'ದಹನ' ದ ವಿಡಿಯೋ ವಿಮರ್ಶೆ ಇಲ್ಲಿದೆ: