ಗುಲಾಮಗಿರಿಯ ಆ ಹನ್ನೆರಡು ವರ್ಷಗಳು

ಗುಲಾಮಗಿರಿಯ ಆ ಹನ್ನೆರಡು ವರ್ಷಗಳು

Regular price
$7.99
Sale price
$7.99
Regular price
Sold out
Unit price
per 
Shipping does not apply

ಜಗತ್ತಿನ­ ಅತ್ಯಂತ ಹೀನಾಯ ಪರಿಸ್ಥಿತಿ ಎಂದರೆ ಮನುಷ್ಯ ತನ್ನಂಥದೇ ಇನ್ನೊಬ್ಬ ಮನುಷ್ಯನನ್ನು ತನ್ನ ಸೇವೆಗಿರುವ ಪ್ರಾಣಿಯಂತೇ ನಡೆಸಿಕೊಳ್ಳುವುದು. ಅದರಲ್ಲಿಯೂ ಅಮೆರಿಕದಂಥ ದೇಶ ಕರಿಯ ವರ್ಣದ ಜನರನ್ನು ಅಕ್ಷರಶಃ ಪ್ರಾಣಿಗಳಿಗಿಂತ ಹೀನಾಯವಾಗಿ ಮಾರುಕಟ್ಟೆಯಲ್ಲಿಟ್ಟು ಮಾರಾಟ ಮಾಡಿ, ದಾಸ್ಯಕ್ಕೆ ಬಳಸಿಕೊಂಡಿರುವ ಬರ್ಬರ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಇಂಥ ಕರಾಳ ಇತಿಹಾಸವನ್ನು ಎಳೆಎಳೆಯಾಗಿ ಬಿಚ್ಚಿಡುವ ಕೃತಿ ಗುಲಾಮಗಿರಿಯ ಆ ಹನ್ನೆರಡು ವರ್ಷಗಳು. ಇದು 1853ರಲ್ಲಿ ಬಿಡುಗಡೆಯಾದ ಸೋಲೋಮನ್‌ ನಾರ್ಥಪ್‌ ಅವರ ಆತ್ಮಚರಿತ್ರೆ ಆಧರಿಸಿ ಹಿಂದಿಯಲ್ಲಿ ಬಂದ ಕೃತಿಯ ಕನ್ನಡಾನುವಾದ. 

ಅಮೆರಿಕಾದಲ್ಲಿ ಗುಲಾಮರನ್ನು ಒಂದು ವಿಧದಲ್ಲಿ ಆಸ್ತಿಯೆಂದು ಪರಿಗಣಿಸಲಾಗುತ್ತಿತ್ತು. ತಮ್ಮ ಉಪಯೋಗಕ್ಕೆ ಬರುವವರೆಗೆ ಅವರನ್ನು ಬಳಸಿಕೊಳ್ಳಲಾಗುತ್ತಿತ್ತು; ಅವರು ಉಪಯೋಗಕ್ಕೆ ಬಾರದಿದ್ದಾಗ ಅವರನ್ನು ಜೀವನದಿಂದ ದೂರಕ್ಕೆ ಎಸೆದು ಬಿಡಲಾಗುತ್ತಿತ್ತು. ಹೊಡೆಯುವುದು-ಬಡಿಯುವುದು, ಮಹಿಳಾ ಗುಲಾಮರೊಂದಿಗೆ ಲೈಂಗಿಕ ದೌರ್ಜನ್ಯ, ಗುಲಾಮರನ್ನು ವಸ್ತುಗಳೆಂಬತೆ ಮಾರುವುದು-ಖರೀದಿಸುವುದು, ಅಡ್ಡಿಪಡಿಸಿದಾಗ ಅವರನ್ನು ಗಲ್ಲಿಗೇರಿಸುವುದು – ಇವೆಲ್ಲವೂ ಸಾಮಾನ್ಯವಾಗಿ ನಡೆಯುತ್ತಿದ್ದವು.

10 ಜುಲೈ, 1808 ರಲ್ಲಿ ಜನಿಸಿದ ಸೋಲೋಮನ್ ನಾರ್ಥಪ್ ಆಫ್ರಿಕಾದ ಕರಿಯ ವ್ಯಕ್ತಿಯಾಗಿದ್ದ. ವಾಶಿಂಗ್ಟನ್‍ನಲ್ಲಿ ವಾಸಿಸುತ್ತಿದ್ದ ಇವನನ್ನು, ಇವನು ಸ್ವತಂತ್ರ ನಾಗರಿಕನಾಗಿದ್ದಾಗ್ಯೂ ಅಪಹರಿಸಿ ಗುಲಾಮ-ಪದ್ಧತಿಯಿದ್ದ ದಕ್ಷಿಣ ಪ್ರದೇಶಕ್ಕೆ ಮಾರಲಾಗಿತ್ತು. ಹನ್ನೆರಡು ವರ್ಷಗಳವರೆಗೆ ತನ್ನ ಮನೆ-ಪರಿವಾರದಿಂದ ದೂರವಿದ್ದು ಗುಲಾಮನಾಗಿ ಅನುಭವಿಸಿದ ಶಾರೀರಿಕ ಮತ್ತು ಮಾನಸಿಕ ಯಾತನೆಗಳನ್ನು ಸೋಲೋಮನ್ ಕಣ್ಣಿಗೆ ಕಟ್ಟಿದಂತೆ ಈ ಕೃತಿಯಲ್ಲಿ ವರ್ಣಿಸಿದ್ದಾನೆ.


ಪುಟಗಳು: 240