ಏಳು ನಾಟಕಗಳು (ಇಬುಕ್)

ಏಳು ನಾಟಕಗಳು (ಇಬುಕ್)

Regular price
$3.99
Sale price
$3.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ

Publisher: Naagu Smaraka Prakashana


1976 ರಿಂದ 1996 ರ ಅವಧಿಯಲ್ಲಿ ನಾನು ರಚಿಸಿದ “ಭಾಗೀರಥಿ—ಅಂಬೆ—ಹಾವು—ಅಂಗಿ ಬಟ್ಟೆ—ಒಂದು ರೂಪಾಯಿ—ಕಳ್ಳರಿದ್ದಾರೆ ಎಚ್ಚರಿಕೆ—ಹೆಣದ ಹಣ” ನಾಟಕಗಳನ್ನು ಒಗ್ಗೂಡಿಸಿ ‘ಏಳು ನಾಟಕಗಳು’ ಸಂಕಲನವನ್ನು ಹೊರತಂದಿದ್ದೇನೆ.

ಸಮಕಾಲೀನ  ಗ್ರಾಮೀಣ  ಭಾರತವು  ಎದುರಿಸುತ್ತಿರುವ  ನೈತಿಕ  ಬಿಕ್ಕಟ್ಟನ್ನು  ಬಹು ಚೆನ್ನಾಗಿ  ಪ್ರತಿಬಿಂಬಿಸುತ್ತಿರುವ  ಸಿ.ಪಿ.ನಾಗರಾಜರ  “ಹಾವು--ಅಂಗಿ ಬಟ್ಟೆ--ಒಂದು ರೂಪಾಯಿ--ಕಳ್ಳರಿದ್ದಾರೆ  ಎಚ್ಚರಿಕೆ--ಹೆಣದ ಹಣ” - ಈ ಐದು  ನಾಟಕಗಳು  ಒಂದು  ವಿಶಿಷ್ಟ  ಕಾರಣಕ್ಕಾಗಿ  ಗಮನ  ಸೆಳೆಯುತ್ತವೆ. ಎಲ್ಲ  ನಾಟಕಗಳ  ಕೇಂದ್ರ  ವ್ಯಕ್ತಿಯು   ತನ್ನ  ಸುತ್ತಣ  ಸಮಾಜವನ್ನು  ಹೊರಗಿನಿಂದ  ನಿಂತು  ವೀಕ್ಷಿಸುವ  ಬುದ್ಧಿಜೀವಿಯಂತಿದ್ದಾನೆ. ಸುತ್ತಣ  ಸಮಾಜವನ್ನು  ಟೀಕಿಸುವ  ಈತ  ಸ್ವವಿಮರ್ಶೆಯನ್ನು  ಮಾಡಿಕೊಳ್ಳುತ್ತಾನೆ; ಇತರರನ್ನು  ಸ್ವವಿಮರ್ಶೆಗೆ  ಪ್ರೇರೇಪಿಸುತ್ತಾನೆ. ಪ್ರಾಮಾಣಿಕ  ಚರ್ಚೆ  ಸಂವಾದಗಳ  ಮೂಲಕ  ಗ್ರಾಮೀಣ  ಸಮಾಜವನ್ನು  ಶೋಧಿಸುವುದು  ಈ  ನಾಟಕಗಳ  ಉದ್ದೇಶ. ಭ್ರಷ್ಟಾಚಾರ, ಜಾತೀಯತೆ  ಹಾಗೂ  ಮೌಢ್ಯದಂತಹ  ಅನಿಷ್ಟಗಳು  ಇಡೀ  ದೇಶವನ್ನೇ  ವ್ಯಾಪಿಸಿವೆಯಾದರೂ, ನಾಟಕಕಾರರು  ತನಗೆ  ಪರಿಚಯವಿರುವ  ಬದುಕಿನ  ಶೋಧನೆಯ  ಮೂಲಕವೇ  ಸಮಸ್ಯೆಗೆ  ಉತ್ತರವನ್ನು  ಕಂಡುಕೊಳ್ಳಲು  ಪ್ರಯತ್ನಿಸಿದ್ದಾರೆ. ಸಮರ್ಥ  ಸಂಭಾಷಣಾ  ನಿರ್ಮಿತಿ  ಎಲ್ಲ  ನಾಟಕಗಳ  ಮುಖ್ಯ ಸತ್ವವಾಗಿದೆ. ವಸ್ತುವಿನ್ಯಾಸ, ಪಾತ್ರರಚನೆ, ಸನ್ನಿವೇಶ ಕಲ್ಪನೆಗಳೆಲ್ಲ ಮಾತುಗಾರಿಕೆಗೆ  ಪೂರಕವೆಂಬಂತೆ  ಯೋಜನಾಬದ್ಧವಾಗಿ  ರೂಪುಗೊಂಡಿವೆ. ಪ್ರತಿ ನಾಟಕವೂ ಭ್ರಷ್ಟಸಮಾಜದ ಒಂದೊಂದು ಮುಖವನ್ನು  ಅನಾವರಣಗೊಳಿಸುತ್ತಾ, ನಮ್ಮ  ದೇಶದ  ಅವನತಿಗೆ  ಕನ್ನಡಿ  ಹಿಡಿಯುತ್ತದೆ.

 

- ಕೆ.ಮರುಳ ಸಿದ್ದಪ್ಪ

 

ಪುಟಗಳು: 250

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !