ಎಪಿಕ್ ರಂಗಭೂಮಿ

ಎಪಿಕ್ ರಂಗಭೂಮಿ

Regular price
$3.99
Sale price
$3.99
Regular price
Sold out
Unit price
per 
Shipping does not apply

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಭಾಷೆ ಬೆಳೆಯುವುದು ಅರ್ಥದಿಂದ ಮಾತ್ರವೇ ಅಲ್ಲ, ಅಪಾರ್ಥದಿಂದಲೂ ಕೂಡಾ - ಎನ್ನುವ ಮಾತನ್ನು ಈಚಿನ ಭಾಷಾಶಾಸ್ತ್ರಜ್ಞರು ಹೇಳುತ್ತಾರೆ. 

ಪಾರಿಭಾಷಿಕ ಶಬ್ದಗಳಿಗೆ ಸಂಬಂಧಿಸಿದಂತೆ ಇಂಥ ಅರ್ಥವಿಸ್ತಾರ-ಅರ್ಥಪಲ್ಲಟ ಅಥವಾ ಅಪಾರ್ಥನಿರ್ಮಾಣಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಯಾವುದಾದರೊಂದನ್ನು ಕೊಡಬಹುದಾದರೆ, ಅದು ‘ರಿಯಲಿಸಮ್‌’ ಎಂಬ ಶಬ್ದದ್ದು. ತಾನು ಹೋದ ಕಡೆಯಲ್ಲೆಲ್ಲ ಹೊಸ ಅರ್ಥ-ಅಪಾರ್ಥಗಳನ್ನೇ ಸೃಷ್ಟಿಸಿಕೊಂಡ ಒಂದು ರೋಚಕ ಕಥಾನಕವೇ ಈ ಶಬ್ದದ ಹಿಂದಿದೆ.

‘ಎಪಿಕ್ ರಂಗಭೂಮಿ’ ಎಂಬ ಶಬ್ದದ ಕಥೆಯೂ ಕಡಿಮೆ ಸ್ವಾರಸ್ಯದ್ದೇನಲ್ಲ. 1920ರ ದಶಕದ ಜರ್ಮನಿಯಲ್ಲಿ, ಆ ಕಾಲದ ಸಮಾಜ-ರಾಜಕೀಯಗಳ ಹಾಗೂ ರಂಗಭೂಮಿ ಮತ್ತಿತರ ಕಲೆಗಳ ವಿಶಿಷ್ಟ ಸನ್ನಿವೇಶದಲ್ಲಿ ರೂಪುತಳೆದ ಒಂದು ತಾತ್ವಿಕ ಪರಿಕಲ್ಪನೆ ಇದು. ಮುಂದಿನ ಕೆಲವು ದಶಕಗಳಲ್ಲಿ ಈ ಪರಿಕಲ್ಪನೆಯು ಯುರೋಪಿನ ಬೇರೆ ದೇಶಗಳಿಗೆ ಮತ್ತು ಅಮೇರಿಕಾಕ್ಕೆ ಹರಡಿತು; ಎರಡನೆಯ ಮಹಾಯುದ್ಧ ಮುಗಿಯುವ ವೇಳೆಗಾಗಲೇ ಈ ಪರಿಕಲ್ಪನೆಯು ಪಶ್ಚಿಮದ ಜಗತ್ತಿನಲ್ಲಿ ಸಾಕಷ್ಟು ವಿಶಾಲವಾದ ವ್ಯಾಪ್ತಿಯನ್ನು ಗಳಿಸಿಕೊಂಡಿತ್ತು. ಆ ಮುಂದಿನ ದಶಕಗಳಲ್ಲಿ ಈ ಪರಿಕಲ್ಪನೆಯು ಭಾರತವೂ ಸೇರಿದಂತೆ ಪ್ರಪಂಚದ ಇನ್ನಿತರ ದೇಶಗಳಲ್ಲೂ ಪ್ರಚಾರಕ್ಕೆ ಬಂತು.

ಈ ‘ಎಪಿಕ್ ರಂಗಭೂಮಿ’ ಎಂಬ ಶಬ್ದವನ್ನು ಜನಪ್ರಿಯಗೊಳಿಸಿದ ಪ್ರಖ್ಯಾತ ರಂಗಕರ್ಮಿ ಬರ್ಟೋಲ್ಟ್‌ ಬ್ರೆಖ್ಟ್‌ (1898-1956) ತನ್ನ ಎಲ್ಲ ಬರಹಗಳನ್ನೂ ಬರೆದದ್ದು ಜರ್ಮನ್ ಭಾಷೆಯಲ್ಲಿ. ಹಾಗಾಗಿ ಅದು ಇಂಗ್ಲಿಷ್ ಮತ್ತು ಇನ್ನಿತರ ಐರೋಪ್ಯ ಭಾಷೆಗಳಿಗೆ ಹರಡಿದ್ದು ಅನುವಾದಗಳ ಮೂಲಕ.

ಹಾಗಿದ್ದರೆ, ಇವತ್ತಿನ ಕನ್ನಡದ ಸಂದರ್ಭದಲ್ಲಿ ನಿಂತು, ನಾವು ಈ ಶಬ್ದವನ್ನು ಅರಿಯುವ ಬಗೆ ಏನು? - ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಇರುವ ಒಂದು ಉಪಾಯ, ಈ ಅಧ್ಯಾಯದ ಆರಂಭದಲ್ಲಿಯೇ ಸೂಚಿಸಿದ ಭಾಷಾಶಾಸ್ತ್ರಜ್ಞರ ಧೋರಣೆಯಲ್ಲಿ ನಮಗೆ ಸಿಗುತ್ತದೆ. ಅದು, ಅರ್ಥ ಮತ್ತು ಅರ್ಥದ ಪ್ರಸರಣದ ಸಂದರ್ಭದಲ್ಲಿ ಉದ್ಭವಿಸಿದ ಅನ್ಯಾರ್ಥ- ಅಪಾರ್ಥಗಳೆರಡಕ್ಕೂ ಸಮಾನ ಗೌರವವನ್ನು ಕೊಡುವ ಧೋರಣೆ. ಇಂಥ ಧೋರಣೆಯನ್ನೇ ಮೂಲವಾಗಿಟ್ಟುಕೊಂಡು ಪ್ರಸ್ತುತ ಕಿರುಪುಸ್ತಕವು ‘ಎಪಿಕ್ ರಂಗಭೂಮಿ’ ಎಂಬ ಪರಿಕಲ್ಪನೆಯ ಒಂದು ಚಲನಶೀಲವಾದ ಕಥಾನಕವನ್ನು ಕಟ್ಟಲು ಹೊರಟಿದೆ.

  

ಪುಟಗಳು: 92

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !