ಫ್ಲೈಯಿಂಗ್‌ ಸಾಸರ್‍ಸ್(1)

ಫ್ಲೈಯಿಂಗ್‌ ಸಾಸರ್‍ಸ್(1)

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ

 

 UFO.. unidentified Flying Objects. ! ಹೀಗೆ ‘ಗುರುತಿಸಲಾಗದ ಹಾರುವ ತಟ್ಟೆಗಳು’ ಎಂದೇ ಈಗ ಗುರುತಿಸಲ್ಪಡುವ ಆಕಾಶದಲ್ಲಿ ಅಮಾನವ ನಿಯಂತ್ರಿತ ವಸ್ತುಗಳು !. ಇಂತಹ UFOಗಳ ಕುರಿತು ಈಗಾಗಲೇ ಸಾಕಷ್ಟು ಪುಸ್ತಕಗಳು, ಚಲನಚಿತ್ರಗಳು, ಪ್ರಬಂಧಗಳು, ಸಾಕ್ಷ್ಯ ಚಿತ್ರಗಳು ಇನ್ನೂ ಅನೇಕ ಮಾದ್ಯಮಗಳಲ್ಲಿ , ಒಂದು ಅನಿರ್ದಿಷ್ಟ ವಿವವರಗಳು ಮೂಡಿಬಂದಿವೆ.

ಇಂತಹ ಅನಿರ್ದಿಷ್ಟ ವಿಷಯಗಳ ಬಗ್ಗೆ ತೇಜಸ್ವಿಯವರು ಇಪ್ಪತ್ತಾರು ವರ್ಷಗಳ ಹಿಂದೆಯೇ ಈ UFOಗಳನ್ನು ಬೆಂಬಿಡದೆ ಮಾಹಿತಿ ಕಲೆ ಹಾಕಿ ವರದಿಗಳನ್ನು ಸಿದ್ಧಪಡಿಸಿದ್ದರು. ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಅದೆಷ್ಟೋ ಮಾಹಿತಿ ತಂತ್ರಜ್ಞಾನ ಮುಂದುವರಿದಿದ್ದೂ ಸಹ ಇವುಗಳ ಬಗ್ಗೆ ನಿಖರವಾದ ರೂಪ ರೇಖೆಗಳು ದೊರೆತಿಲ್ಲ. ಆದ್ದರಿಂದಲೇ ಅವು ಇನ್ನೂ ಸಹ unidentified ಆಗಿಯೇ ಉಳಿದುಕೊಂಡು , ಚಿರಂತನ ಕುತೂಹಲ ವ ಜಿಜ್ಞಾಸೆಯನ್ನು ಹುಟ್ಟು ಹಾಕಿವೆ.

ಈ ಪುಸ್ತಕದ ಮೂಲಕ ತೇಜಸ್ವಿಯವರು ಮೂರು ಪ್ರಮುಖ ವಿಷಯಗಳನ್ನು ತಿಳಿಸುತ್ತಾರೆ…

೧) ಹಾರುವ ಸಾಸರುಗಳು ಭ್ರಾಂತಿಗಳಲ್ಲ ನಿಜ ಎಂಬುದು

೨) ಅವು ಭೂಮಿಯ ಮೂಲದವುಗಳಾಗಿ ಕಾಣುತ್ತಿಲ್ಲ

೩) ಅವು ಬುದ್ಧಿ ಅಥವಾ ಪ್ರಜ್ಞೆಯ ನಿಯಂತ್ರಣಕ್ಕೆ ಒಳಪಟ್ಟಂತೆ ವರ್ತಿಸುತ್ತಿವೆ ಎಂಬುದು

ದಶಕಗಳ ಹಿಂದೆ ಅಕ್ಷರತೆ ಕಡಿಮೆ ಇದ್ದು ರಾಜಕಾರಣಿಗಳ ಹೆಲಿಕಾಪ್ಟರಿಗೂ ಸಾಸರ್’ಗೂ ವ್ಯತ್ಯಾಸ ತಿಳಿಯದಷ್ಟು ಜನ ಮುಗ್ಧರಾಗಿದ್ದರಿಂದ , ಭಾರತದಲ್ಲಿ UFOಗಳ ಕುರಿತ ವರದಿ ವ ಅಧ್ಯಯನ ಕಡಿಮೆಯಾದ ಕಾರಣ ತಿಳಿಸಿದ್ದಾರೆ ತೇಜಸ್ವಿಯವರು.

- ಪುಸ್ತಕಪ್ರೇಮಿ ಬ್ಲಾಗ್ ವಿಮರ್ಶೆ 

 

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !