ಕನ್ನಡದಲ್ಲಿ ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ಪ್ರಕಟವಾಗಿರುವ ಮಹತ್ವದ ಕಾದಂಬರಿಗಳಲ್ಲೊಂದು ಘಾಚರ್ ಘೋಚರ್. ಆಧುನಿಕ ಬೆಂಗಳೂರು ನಗರದ ಜೀವನವನ್ನು ಎತ್ತಿಕೊಂಡು ಇಷ್ಟೊಂದು ಸಂವೇದನಾಶೀಲವಾಗಿ, ಸೂಕ್ಷ್ಮವಾಗಿ, ಹೃದಯಂಗಮವಾಗಿ ವಿವೇಚಿಸುವ ಇನ್ನೊಂದು ಕಾದಂಬರಿ ನಮ್ಮಲ್ಲಿ ಬಂದಿಲ್ಲ.
-ಗಿರೀಶ ಕಾರ್ನಾಡ
ಧ್ಯಾನಿಸಿ ಬರೆದ ಕತೆಯೊಂದು ಹೇಗೆ ಒಳನೋಟಗಳನ್ನೂ ಅನುಭವವನ್ನೂ ಒಂದಿಡೀ ತಲೆಮಾರಿನ ತಲ್ಲಣವನ್ನೂ ಹಿಡಿದಿಟ್ಟುಕೊಂಡಿರುತ್ತದೆ ಎಂಬುದು ಕುತೂಹಲಕಾರಿ. ಘಾಚರ್ ಘೋಚರ್ ಅಂಥದ್ದೊಂದು ಕತೆ.
-ಜೋಗಿ
'ಘಾಚರ್ ಘೋಚರ್' ಕಥೆಯಲ್ಲಿ ಕಥೆ ನಿಜವಾಗಿಯೂ ಮುಗಿದಿಲ್ಲ ಅಂತನ್ನಿಸುವುದು, ಆ ದಾರಿಗೆ ಇರಬಹುದಾದ ಹಲವು ಸಾಧ್ಯತೆಗಳ ಕಾರಣದಿಂದಾಗಿ.
-ವೆಂಕಟ್ರಮಣ ಗೌಡ
ಕೇವಲ ಸಾಂಸಾರಿಕ ರಗಳೆ ಅಥವಾ ಗೋಳುಕರೆಯಾಗಬಹುದಾಗಿದ್ದ ಕಥನವೊಂದು ಮನುಷ್ಯ ಸ್ವಭಾವ ಮತ್ತು ವರ್ತನೆಗಳ ಹಿಂದಿನ ನಿಗೂಢತೆಗೆ ಹಿಡಿದ ಕನ್ನಡಿಯಾಗಿಬಿಡುತ್ತದೆ; ಗ್ರಹಿಕೆ ಮತ್ತು ಅಭಿವ್ಯಕ್ತಿಗಳ ಸಾಧ್ಯತೆ ಮತ್ತು ಕಷ್ಟಗಳ ಬಗೆಗಿನ ಧ್ಯಾನವಾಗಿಬಿಡುತ್ತದೆ.
-ಟಿ.ಪಿ. ಅಶೋಕ
ಈ ಯುಗಳ ಪದ ನಮ್ಮ ಇಡೀ ಬದುಕೇ ಗೋಜಲಾಗಿರುವ ಕ್ರಮಕ್ಕೆ ಭಾವ ಪ್ರತಿಧ್ವನಿಯಂತೆ ಅನುರಣನಗೊಳ್ಳುತ್ತದೆ.
-ಎಸ್. ಆರ್. ವಿಜಯಶಂಕರ
ಪುಟಗಳು: 124
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !