ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 5

ವೇದಮಂತ್ರಗಳ ಅದ್ಭುತ ರಹಸ್ಯ – ಭಾಗ 5

Regular price
$4.99
Sale price
$4.99
Regular price
Sold out
Unit price
per 
Shipping does not apply

ಯಜ್ಞ ಎಂದರೆ ಬದುಕುವ ಕಲೆ 

ತಪ್ಪು ಬದುಕಿನ ರೀತಿಯನ್ನು ಅಳವಡಿಸಿಕೊಂಡರೆ ಸರಿಬದುಕು ಯಾವುದೆಂದೇ ತಿಳಿಯದಾಗುತ್ತದೆ. ಒಮ್ಮೆ ಯಾವುದನ್ನಾದರೂ ತಪ್ಪಾಗಿ ಅರ್ಥೈಸಿಕೊಂಡರೆ ಸರಿ ವಿಷಯ ತಿಳಿಯಲು ಮನಸ್ಸೇ ಬರುವುದಿಲ್ಲ. ಅನಗತ್ಯವಾದ ಯಾವುದನ್ನೋ ವೈಭವೀಕರಿಸಿದರೆ ಅಗತ್ಯವಾದ್ದು ಮರೆಗೇ ಸರಿದು ಬಿಡುತ್ತದೆ. ನಮ್ಮ ಜೊತೆ ಇತರ ಜೀವಿಗಳೂ ಈ ಜಗತ್ತಿನಲ್ಲಿವೆ. ಅವುಗಳಿಗೆ ತೊಂದರೆಯಾಗದಂತೆ ನಾವೂ ಬದುಕಬೇಕು. ನಮಗೆ ಸರಿ ಎಂದು ತಿಳಿದ ಮಟ್ಟಕ್ಕೆ ತಕ್ಕಂತೆ ನಾವೂ ನಡೆಯಲು ಯತ್ನಿಸುತ್ತೇವೆ. ಆದರೂ ನಮಗೆ ಪರಿಪೂರ್ಣತೆ ಇಲ್ಲ. ‘ಕೆಲವೊಂದು ಸಂಗತಿಗಳನ್ನು ಮಾಡಬೇಕೋ ಬಿಡಬೇಕೋ; ಯಾವುದು ಸರಿ’ ಎಂಬ ದ್ವಂದ್ವ ಕಾಡುತ್ತದೆ. ಅಲ್ಲೆಲ್ಲಾ ಸರಿ ಯಾವುದು ಎಂದು ತಿಳಿಯುವ ಒಂದು ವ್ಯವಸ್ಥೆ ಬೇಕು. ಅದನ್ನೇ ಯಜ್ಞಗಳು ಎನ್ನುತ್ತಾ ಅವುಗಳ ಬಗ್ಗೆ ವಿಸ್ತಾರವಾಗಿ ವಿವರಿಸುತ್ತವೆ ವೇದಮಂತ್ರಗಳು. ಯಜ್ಞಗಳು ಎಂದರೆ ಅದೇನೋ ಯಾರೋ ಮಾಡುವ ಕೊಡಗಟ್ಟಲೆ ತುಪ್ಪ ಬೆಂಕಿಗೆ ಹಾಕಿ ಏನೆಲ್ಲಾ ಮಾಡುವ ಒಂದು ಶಾಸ್ತ್ರ ಎನ್ನುವ ಅಭಿಪ್ರಾಯ ಬಹಳಷ್ಟು ಜನರದು. ಪುರಾಣಗಳಲ್ಲಿ ಅದನ್ನೆಷ್ಟು ಅಧ್ವಾನ ಮಾಡಿ ಹೇಳಿದ್ದಾರೆಂದರೆ ಈಗ ಅದಕ್ಕೆ ಹೊರತಾದ ನಿಜವಾದ ಅರ್ಥ ಹೇಳಿದರೂ ಅದನ್ನು ನಂಬುವ ಮನ:ಸ್ಥಿತಿ ನಮಗಿಲ್ಲದಂತಾಗಿದೆ. ಅಗ್ನಿಗೆ ತುಪ್ಪ ಹಾಕಿ ಮಾಡುವ ಅಗ್ನಿಹೋತ್ರ ಮತ್ತು ಅದನ್ನೇ ಎಲ್ಲರೂ ಸೇರಿ ದೊಡ್ಡದಾಗಿ ಮಾಡುವ ಕ್ರಿಯೆಯೂ ಯಜ್ಞವೇ. ಆದರೆ ವೇದ ಹೇಳುವ ನಿಜವಾದ ಯಜ್ಞವೇ ಬೇರೆ. ಯಜ್ಞ ಎನ್ನುವುದನ್ನು ತಪ್ಪಾಗಿ ತಿಳಿಯುವಂತೆ ಮಾಡಿದ್ದಾರೆ ಪುರಾಣ ಕರ್ತೃಗಳು. ಯಜ್ಞ ಎಂದರೆ ದೇವರನ್ನು ಒಲಿಸಿ ವರ ಕೇಳಲು ಮಾಡುತ್ತಿದ್ದ ಒಂದು ಕ್ರಿಯೆ ಎಂದು ತಿಳಿಯುವುದೇ ತಪ್ಪು. ಯಾವುದನ್ನು ನಮಗೆ ಹಾಗೂ ಇತರರಿಗೆ ಒಳ್ಳೆಯದಾಗುವಂತೆ ಬದುಕುಪೂರ್ತಿ ಮಾಡುತ್ತಲೇ ಇರಬೇಕೋ ಅದರ ರೀತಿ ನೀತಿಗಳೇ ಯಜ್ಞಗಳು. ಬದುಕುವ ಕಲೆಯನ್ನು ತಿಳಿಸಿಕೊಡುವ ಆ ವಿಧಾನಗಳೇ ವೇದ ವಿವರಿಸುವ ಪಂಚಮಹಾಯಜ್ಞಗಳು.

ಪುಟಗಳು  : 63