ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು; ಭಾಗ 3

ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು; ಭಾಗ 3

Regular price
$4.99
Sale price
$4.99
Regular price
Sold out
Unit price
per 
Shipping does not apply

ಕಳೆದ ಕಾಲ ತಿರುಗಿ ಬರುವುದಿಲ್ಲ. ನಾವು ಹಿಂತಿರುಗಿ ನೋಡಿದಾಗ ಕಳೆದ ಬದುಕಿನಲ್ಲಿ ವಿಷಾದ, ದು:ಖ ತುಂಬಿದ್ದರೆ ಮತ್ತೆ ಹಿಂದೆ ಹೋಗಿ ಅವನ್ನು ಸರಿಪಡಿಸಲಾಗುವುದಿಲ್ಲ. ಹಾಗಾಗಿ ಮುಂದೆ ಯಾವುದರಿಂದ ತೃಪ್ತಿ, ಸಮಾಧಾನ ಸಿಗಬಹುದು ಎಂಬ ಲೆಕ್ಕಾಚಾರ ಇಂದೇ ಹಾಕಬೇಕು. ಅದಾಗಬೇಕಾದರೆ ಲೋಕಜ್ಞಾನ, ತಪ್ಪು ಸರಿ ನಿರ್ಧಾರ ಮಾಡುವ ವಿಚಾರವಂತಿಕೆ ಬೇಕು. ಇಂದಿನ ಕಾರ್ಯಗಳಿಂದಾಗುವ ಮುಂದಿನ ಪರಿಣಾಮ ಊಹಿಸುವ ಶಕ್ತಿ ಬೇಕು. ಹಾಗಿರುವವರಿಗೆ ದು:ಖ-ಸಂಕಟಗಳು ಬಾಧಿಸುವುದು ಕಮ್ಮಿ. ಇಲ್ಲಿ ಜ್ಞಾನದ ಪಾತ್ರ ಹಿರಿದು.

ನಮಗೆ ಗೋಚರವಾಗಿದ್ದರ ಜೊತೆಗೆ ಅಗೋಚರವಾದ್ದನ್ನೂ ಮನಸ್ಸು ಗ್ರಹಿಸುತ್ತದೆ. ಆದರೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಅದಕ್ಕಿಲ್ಲ. ಗ್ರಹಿಸಿದ ಸಂಗತಿಗಳ ಮೇಲೆ ಬುದ್ಧಿ, ವಿವೇಕ ನಿರ್ಧಾರ ತೆಗೆದುಕೊಳ್ಳುತ್ತದೆ. ಆ ನಿರ್ಧಾರಗಳು ಸರಿಯೂ ಇರಬಹುದು. ತಪ್ಪೂ ಆಗಬಹುದು. ಅದು ಅವರವರ ಅನುಭವ ಮತ್ತು ತಿಳುವಳಿಕೆಯ ಆಧಾರದ ಮೇಲೆ ನಿಂತಿರುತ್ತದೆ. ತಿಳುವಳಿಕೆ ಬರುವುದು ಓದು, ಚಿಂತನೆ ಮತ್ತು ಅನುಭವಗಳಿಂದ! 

ಮನಸ್ಸೇ ಎಲ್ಲದಕ್ಕೂ ಮೂಲ. ನಮಗೆ ಬೇಕಾದ ಶಾಂತಿ, ಸಮಾಧಾನ, ನೆಮ್ಮದಿ, ಸುಖ ಎಲ್ಲವೂ ಸಿಗುವುದು ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಮಾತ್ರ. ಅದರಿಂದಲೇ ದೈಹಿಕ ಆರೋಗ್ಯವೂ! ಅಷ್ಟೇ ಅಲ್ಲ; ನಮ್ಮ ಮನಸ್ಸು ಸುಸ್ಥಿತಿಯಲ್ಲಿದ್ದರೆ ಸಮಾಜದ ಆರೋಗ್ಯವೂ ಸುಧಾರಿಸುತ್ತದೆ. ಸಮಾಜದಿಂದಲೂ ಅದು ನಮಗೆ ತಿರುಗಿ ಬರುತ್ತದೆ. ಆ ರೀತಿ ಮನಸ್ಸನ್ನು ಸುಸ್ಥಿತಿಯಲ್ಲಿಡಬೇಕಾದರೆ ಅದರ ಬಗ್ಗೆ ತಿಳಿದಿರಬೇಕು. ನಮ್ಮ ಸಂಪರ್ಕಕ್ಕೆ ಬರುವ ಇತರರ ಮನಸ್ಸೂ ಹೇಗೆ ಕೆಲಸಮಾಡುತ್ತದೆ ಅದಕ್ಕೆ ಕಾರಣವೇನು? ಎಲ್ಲವನ್ನೂ ತಿಳಿದಿದ್ದರೆ ಅದು ಸುಲಭ ಸಾಧ್ಯ. ನಾವು ಬಹಳಷ್ಟು ಕಾಯಿಲೆಗಳಿಗೆ ದೈಹಿಕ ವೈದ್ಯರನ್ನು ಭೇಟಿಮಾಡುತ್ತೇವೆ. ಆದರೆ ಅದಕ್ಕಿಂತ ಮುಖ್ಯವಾಗಿ ಮಾನಸಿಕ ವೈದ್ಯರನ್ನು ಭೇಟಿ ಮಾಡಲು ಹಿಂಜರಿಯುತ್ತೇವೆ. ನಮ್ಮ ದೈಹಿಕ ಕಾಯಿಲೆಗಳಿಗೂ ಮನಸ್ಸಿಗೂ ಇರುವ ಸಂಬಂಧಗಳ ಬಗ್ಗೆ ನಮಗೆ ತಿಳಿಯದೆ ಇರುವುದೇ ಅದಕ್ಕೆ ಕಾರಣ. ಅದಕ್ಕಿಂತ ಮುಖ್ಯವಾಗಿ ಮನುಷ್ಯರ ಮನಸ್ಸು ಮತ್ತು ಸ್ವಭಾವಗಳ ಬಗ್ಗೆ ತಿಳಿದಿದ್ದರೆ ನಮ್ಮ ಮನಸ್ಸನ್ನೇ ಕೆಡಿಸಿಕೊಳ್ಳದೆ ಇರಲು ಸಾಧ್ಯ. ಅಷ್ಟಾದರೆ ಎಲ್ಲವೂ ಸಾಧ್ಯ!

ಭಾಗ 1,2,3,4 ರಲ್ಲಿ ಗಿರಿಮನೆ ಶ್ಯಾಮರಾವ್ ಅವರು ಮನುಷ್ಯನ ಮನಸ್ಸು ಹಾಗೂ ಅದರ ಸ್ವಭಾವಗಳನ್ನು ಉದಾಹರಣೆಗಳೊಂದಿಗೆ ಸುಂದರವಾಗಿ ವಿವರಿಸಿದ್ದಾರೆ.

ಇದರಲ್ಲಿ ಬಹಳಷ್ಟು ಆಕಾಶವಾಣಿಯ ‘ಚಿಂತನ’ದಲ್ಲಿ ಪ್ರಸಾರವಾದ ಮತ್ತು ಎಲ್ಲವೂ ‘ಸಂಯುಕ್ತ ಕರ್ನಾಟಕ ಪತ್ರಿಕೆ’ಯಲ್ಲಿ ಪ್ರಕಟವಾದ ‘ವಿಚಾರ ರಶ್ಮಿ’ ವಾರದ ಅಂಕಣಗಳು.