ಓದಿದವರು: ನವ್ಯ ನಾಗರಾಜ್
ಆಡಿಯೋ ಪುಸ್ತಕದ ಅವಧಿ : 2 ಗಂಟೆ 45 ನಿಮಿಷ
ಮಕ್ಕಳಿಗೆ ಕತೆ ರುಚಿ ಕೊಡುತ್ತದೆ. ಅದರಲ್ಲೂ ನಾಯಿ, ಬೆಕ್ಕು, ಮೊಲ, ಹಸು ಇತ್ಯಾದಿ ಕಣ್ಣಿಗೆ ಕಾಣಲು ಸಿಗುವ ಪ್ರಾಣಿಗಳ ಕತೆ ಅವರಿಗೆ ಅಚ್ಚುಮೆಚ್ಚು. ಪ್ರಾಣಿ-ಪಕ್ಷಿಗಳ ಬದುಕು ಮತ್ತು ಪ್ರಕೃತಿಯೊಂದಿಗೇ ನಮ್ಮ ಬದುಕೂ ಕೂಡಿಕೊಂಡಿರುತ್ತದೆ. ಕಾಡು, ಪ್ರಕೃತಿಯ ಒಂದು ಭಾಗ. ಕಾಂಕ್ರೀಟ್ ಕಾಡೊಳಗೆ ಬೆಳೆದ ಮಕ್ಕಳಿಗೆ ಅದು ತಿಳಿಯುವುದಾದರೂ ಹೇಗೆ? ಅದಕ್ಕೆ ಮಲೆನಾಡಿನ ಚಿತ್ರಣಕ್ಕಿಂತ ಉತ್ತಮ ಬೇರೊಂದಿಲ್ಲ. ಇಲ್ಲಿ ಟಾಮಿ ಎಂಬ ನಾಯಿಯನ್ನು ಕೇಂದ್ರವಾಗಿಟ್ಟುಕೊಂಡು, ನಡೆದ ಘಟನೆಗಳನ್ನೇ ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಮಲೆನಾಡಿನ ಪ್ರಕೃತಿ ಚಿತ್ರಣದೊಂದಿಗೆ ಕತೆಯ ರೂಪದಲ್ಲಿ ಹೆಣೆದಿದ್ದೇನೆ. ಬದುಕಿನ ಘಟನೆಗಳನ್ನೊಳಗೊಂಡ `ಮಲೆನಾಡಿನ ರೋಚಕ ಕತೆಗಳು' ಕಂಡ ಯಶಸ್ಸೇ ಈ ಕೃತಿ ಬರೆಯಲು ಕಾರಣ. ಜೊತೆಗೆ ಪ್ರಾಣಿ, ಪಕ್ಷಿ, ಕಾಡು, ಗಿಡಮರಗಳ ಮಲೆನಾಡಿನ ಬದುಕಿನ ಬಗ್ಗೆಯೂ ಮಾಹಿತಿ ಸಿಗುತ್ತದೆ. ನಗರದ ಆಧುನಿಕ ಬದುಕನ್ನೇ ಕಾಣುವ ಇಂದಿನ ಮಕ್ಕಳಿಗೆ ಹೀಗೊಂದಿದೆ ಎಂದಾದರೂ ತಿಳಿಯಲಿ ಎನ್ನುವುದು ಆಶಯ.
ಇದು ಮಕ್ಕಳಿಗೆ ಎಂದಿದ್ದರೂ ಮಲೆನಾಡಿನ ನೈಜ ಚಿತ್ರಣ, ನೈಜ ಘಟನೆಗಳು ಮಕ್ಕಳಿಗೆ ಮಾತ್ರವಲ್ಲ; ಎಲ್ಲರಿಗೂ ಒಂದೇ. ಹಾಗಾಗಿ ಇದನ್ನು ದೊಡ್ಡವರೂ ಧಾರಾಳವಾಗಿ ಓದಬಹುದು. ಮಕ್ಕಳಿಗೂ ಅರ್ಥವಾಗುವಂತೆ ಬರೆದಿದ್ದೇನೆ ಅಷ್ಟೆ.
ಈ ಪುಸ್ತಕ ಈಗ ಆಡಿಯೋ ಬುಕ್ ಆಗಿದೆ. ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.