ಹಕೂನ ಮಟಾಟ

ಹಕೂನ ಮಟಾಟ

Regular price
$3.99
Sale price
$3.99
Regular price
Sold out
Unit price
per 
Shipping does not apply

ಹೊಚ್ಚ ಹೊಸ ನಿರೂಪಣಾ ಶೈಲಿಯೊಂದಿಗೆ ಕನ್ನಡ ಕಥಾಲೋಕ ಪ್ರವೇಶಿಸಿದ ನಾಗರಾಜ ವಸ್ತಾರೆಯವರ ಮೊದಲ ಕಥಾಸಂಕಲನವಿದು. ಡಾ. ಯು. ಆರ್. ಅನಂತರಮೂರ್ತಿ ಪ್ರಶಸ್ತಿಯನ್ನು ಪಡೆದ ಈ ಕೃತಿ, ವಸ್ತಾರೆಯವರ ಖಾಸಾ ಓದುಗ ಬಳಗವನ್ನೇ ಹುಟ್ಟಿ ಹಾಕಿತು.

 

ಕಳೆದೆರಡು-ಮೂರು ದಶಕಗಳಲ್ಲಿ ನಮ್ಮ ಸಾಮಾಜಿಕ ವೈಯಕ್ತಿಕ ಜೀವನದಲ್ಲಿ ಆಗುತ್ತಿರುವ ಪಲ್ಲಟಗಳು ನಾಗರಾಜ ವಸ್ತಾರೆಯವರ ಕತೆಗಳಿಗೆ ಹಿನ್ನೆಲೆಯಾಗಿದೆ. ಜಾಗತೀಕರಣ, ಉದಾರೀಕರಣ, ಹಣದ ಪ್ರಭಾವ, ಸರಕು ಸಂಸ್ಕೃತಿ ನಮ್ಮೆಲ್ಲರ ಒಳಬದುಕನ್ನು ಪ್ರವೇಶಿಸಿದೆ, ಪ್ರಭಾವಿಸಿದೆ. ಇದೆಲ್ಲದರ ಬಗ್ಗೆ ನಮ್ಮ ಪ್ರಾಮಾಣಿಕ ನಿಲುವೇನು ಎಂಬುದು ನಮಗೇ ಗೊತ್ತಿಲ್ಲ. ಹಾಗೆ ಗೊತ್ತು ಮಾಡಿಕೊಳ್ಳುವಂತಹ ಹುಡುಕಾಟಕ್ಕೆ ನಾವೆಲ್ಲರು ನಮ್ಮ ನಮ್ಮ ಬರಹಗಳಲ್ಲಿ, ವೃತ್ತಿಗಳಲ್ಲಿ ಕೌಟುಂಬಿಕ ಜೀವನದಲ್ಲಿ ತೊಡಗಿದ್ದೇವೆಯೇ ಎಂಬ ಪ್ರಶ್ನೆಗೆ ಉತ್ತರ ನಮ್ಮ ಕಾಲದ ಪ್ರತಿಯೊಬ್ಬ ಮನುಷ್ಯನ ವೈಯಕ್ತಿಕ ದೈವಕ್ಕೆ ಬಿಟ್ಟದ್ದು. ನಾಗರಾಜರು ನಮ್ಮ ಕಾಲದ ಎಲ್ಲ ಸೂಕ್ಷ್ಮ ಬೆಳವಣಿಗೆಗಳನ್ನು ತಮ್ಮ ಮೈಮೇಲೆ ಎಳೆದುಕೊಂಡು ಹುಡುಕಾಟಕ್ಕೆ ತೊಡಗಿದ್ದಾರೆ ಎಂಬುದೇ ಮುಖ್ಯವಾದದ್ದು.

ಕಳೆದೆರಡು ದಶಕಗಳ ಬೆಳವಣಿಗೆ ನಮ್ಮ ಸ್ವಾತಂತ್ರ್ಯ, ಸಾಧ್ಯತೆ, ಸುಖಗಳನ್ನು ಇನ್ನಿಲ್ಲದಂತೆ ಹೆಚ್ಚಿಸಿ ನಮ್ಮೆಲ್ಲರನ್ನು ಇನ್ನೂ ಹೆಚ್ಚಿನ ಪ್ರೀತಿಯ, ಜವಾಬ್ದಾರಿಯ ಮನುಷ್ಯರನ್ನಾಗಿ ಮಾಡಿಬಿಟ್ಟಿದೆ ಎಂಬುದೊಂದು ಗ್ರಹೀತ ಚಾಲ್ತಿಯಲ್ಲಿದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ನಾವು ಮಕ್ಕಳಿಗೆ ನೀಡುವ ಹಿಂಸೆ, ಅವರಿಂದ ಮಿತಿಮೀರಿ ನಿರೀಕ್ಷಿಸುವುದು, ಅವರ ವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸುವುದು -ಇವೆಲ್ಲವೂ ಹಿಂದಿನ ದಿನಗಳಿಗಿಂತಲೂ ಹೆಚ್ಚು ಸೂಕ್ಷ್ಮವಾಗಿ, ಕ್ರೂರವಾಗಿ, ನಾಜೂಕಾಗಿ ಮುಂದುವರಿಯುತ್ತಿದೆ. ಬೋರಲು ಕತೆ ಓದುವಾಗ ನನಗೆ ನಾವು ಇನ್ನೂ ಎಲ್ಲೂ ಬದಲಾಗೇ ಇಲ್ಲವೇನೋ ಅಥವಾ ನಮ್ಮ ಮಕ್ಕಳ ಬಗ್ಗೆ ನಮಗಿರುವ ದುರಾಸೆ, ಕ್ರೌರ್ಯ ಇನ್ನೂ ಸೂಕ್ಷ್ಮವಾಯಿತೇನೋ ಈಚಿನ ದಿನಗಳಲ್ಲಿ ಅನಿಸಿತು.

-ಕೆ. ಸತ್ಯನಾರಾಯಣ

 

ಲೇಖಕರ ಪರಿಚಯ

 

ನಾಗರಾಜ ವಸ್ತಾರೆ ವೃತ್ತಿಯಿಂದ ಆರ್ಕಿಟೆಕ್ಟ್. ಬೆಂಗಳೂರಿನಲ್ಲಿ ಕಟ್ಟಡಗಾರಿಕೆಯ ವಿನ್ಯಾಸವನ್ನು ಕೈಕೊಳ್ಳುವ ಸ್ವಂತ ಉದ್ದಿಮೆಯನ್ನು ನಡೆಸುತ್ತಿದ್ದಾರೆ. 'ಪ್ರಾಗ್ರೂಪ ಅಮೂರ್ತಸಿಟಿ' ಇವರ ವೃತ್ತಿಪರ ಅಭ್ಯಾಸದ ಹೆಸರು. ಬರೆವಣಿಗೆ ಇವರ ಪರ್ಯಾಯ ಆಸಕ್ತಿ. ಕತೆ, ಕವನ, ಲೇಖನ, ಪ್ರಬಂಧಗಳನ್ನು ಬರೆದಿದ್ದಾರೆ. ನಾಡಿನ ಎಲ್ಲ ಮುಖ್ಯ ಪತ್ರಿಕೆಗಳಲ್ಲಿ ಇವು ಪ್ರಕಟಗೊಂಡಿವೆ. 'ವಸ್ತಾರೆ ಪದ್ಯಗಳು' ಮತ್ತು 'ವಸ್ತಾರೆ ಇನ್ನೂ ಎಪ್ಪತ್ತೈದು' - ಪದ್ಯಸಂಕಲನಗಳು. 'ಡುಅಬಲ್ ಪ್ರಕಾಶನ'ವು ಇವನ್ನು ಪ್ರಕಟಿಸಿದೆ. 'ಹಕೂನ ಮಟಾಟ', 'ನಿರವಯವ' - ಈ ಕಥಾಸಂಕಲನಗಳನ್ನಲ್ಲದೆ 'ಮಡಿಲು' ಎಂಬ ನೀಳ್ಗತೆಯನ್ನು 'ಛಂದ ಪುಸ್ತಕ'ವು ಪ್ರಕಟಿಸಿದೆ. '360 ಡಿಗ್ರಿ' ಎಂಬ ಲೇಖನ ಸಂಗ್ರಹವನ್ನೂ, '90 ಡಿಗ್ರಿ' ಎಂಬ ಕಥಾಸಂಕಲನವನ್ನೂ, 'ಅರ್ಬನ್ ಪ್ಯಾಂಥರ್' ಎಂಬ ನೀಳ್ಗತೆಯನ್ನೂ - 'ಸಾಂಚಿಮುದ್ರೆ' ಬೆಳಕಿತ್ತಿದೆ.

 

ಪುಟಗಳು: 180

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !