ಹೆಬ್ಬಾವಿನೊಡನೆ ಹೋರಾಟ

ಹೆಬ್ಬಾವಿನೊಡನೆ ಹೋರಾಟ

Regular price
$3.99
Sale price
$3.99
Regular price
Sold out
Unit price
per 
Shipping does not apply

ಕೃತಿಯ ಪ್ರಾರಂಭವೇ ನಮ್ಮ ತೇಜಸ್ವಿಯವರ ಬೈಗಳದೊಂದಿಗೆ … ಕತ್ಲೇಕಾಡಿನಲ್ಲಿ ಹೆಬ್ಬಾವೊಂದು ಹಟ್ಟಾತ್ತನೆ ಒಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡಿರುವ ಬಗ್ಗೆ ವಿಚಾರಿಸಿ ತಿಳಿದು ಬರಿಯದೇ ಸೋಮಾರಿಯಾಗಿ ಇರುವ ಲೇಖಕರಿಗೆ ಬೈಯುತ್ತಾ ಪೋನಿನ ಕರೆಯನ್ನು ಬಂದ್ ಗೊಳಿಸುತ್ತಾರೆ…


“ಹೆಬ್ಬಾವಿನೊಡನೆ ಹೋರಾಟ” ಎಷ್ಟು ಭಯಮಿಶ್ರಿತ ರೋಮಾಂಚನದ ಹೆಸರಲ್ಲವೇ… ಕಥೆ(ನಿಜಸಂಗತಿ) ಓದುವಾಗಲೂ ತುಂಬಾ ರೋಮಾಂಚನ ಮತ್ತು ಕುತೂಹಲಕರವಾಗಿ ಸಾಗುತ್ತದೆ… ಲೇಖಕರ ಊರಾದ ಕೆಂಜಿಗೆಯಿಂದ ಸುಮಾರು ದೂರದಲ್ಲಿರುವ ಕತ್ಲೇಕಾನಿಗೆ ಹೋಗಿ ಹೆಬ್ಬಾವು ಮತ್ತು ಅದರ ಆಕ್ರಮಣಕ್ಕೊಳಗಾದ ಜಾರ್ಜ್ ನ ಬಗ್ಗೆ ತಿಳಿದು ಅದನ್ನು ಸಂಕ್ಷಿಪ್ತವಾಗಿ ಬರೆಯುವ ಕೆಲಸವನ್ನು ವಹಿಸಿದರು ತೇಜಸ್ವಿಯವರು ಪ್ರದೀಪರಿಗೆ….
ಲೇಖಕರು ಕೆಂಜಿಗೆಯಲ್ಲಿರುವ ಪೂರ್ವಜರ ತೋಟದಲ್ಲಿಯೇ ಸಾವಯವ ಕೃಷಿ ಮಾಡುವೇನೆಂದು ಹೇಳಿ, ಎಷ್ಟೇ ಪ್ರಯತ್ನಿಸಿದರೂ ತುಂಬಾ ನಷ್ಟ ಅನುಭವಿಸಿದ್ದರು… ಇದರಿಂದ ಬೇಸತ್ತ ಕಾರಣ ಕತ್ಲೇಕಾನಿಗೆ ಹೋಗಿ ಏನು ನಡೆಯಿತು ಎಂಬ ವಿಷಯವನ್ನು ತಿಳಿದು ಸವಿಸ್ತಾರವಾಗಿ ಬರೆಯುವ ನಿರ್ಧಾರ ಮಾಡಿ, ಇವರ ಸ್ನೇಹಿತರಾದ ನವೀನರನ್ನು ಬಲವಂತ ಪಡಿಸಿ ಒಪ್ಪಿಸಿ ಹೊರಡಿಸುತ್ತಾರೆ…ನವೀನರ ಹಾಸ್ಯಭರಿತ ಮಾತಿನಿಂದ ಸ್ವಲ್ಪ ಮಜವಾಗಿರುತ್ತೆ, ಎಂದು ಯೋಚಿಸುತ್ತಾರೆ ಲೇಖಕರು….. ಕತ್ಲೇಕಾನಿಗೆ ಪೂರ್ವ ಸಿದ್ದತೆಯೊದಿಂಗೆ ಲೇಖಕರು ಅವರ ಹಳೇ ಮಾರುತಿಯೊಂದಿಗೆ ಹೊರಡುತ್ತಾರೆ… ಆ ಕಾರು ಎಷ್ಟು ಒಳ್ಳೇ ಕಂಡೀಷನ್ ನಲ್ಲಿತ್ತು ಎಂದರೆ.. ಹಾರ್ನ್ ನನ್ನು ಒಂದು ಬಿಟ್ಟು ಮಿಕ್ಕೆಲ್ಲಾ ಪಾರ್ಟ್ಸ್ ಗಳೂ ಸೌಂಡ್ ಮಾಡುತ್ತಿದ್ದವು, ಇದನ್ನು ನವೀನರು ಹೇಳಿ ನಗುತ್ತಾರೆ… ನಂತರ ಕತ್ಲೇಕಾನಿಗೆ ಹೋಗಿ ಅಲ್ಲಿ ಚಿನ್ನಯ್ಯ, ಹೂವಮ್ಮ, ಇರಾನಿ, ಎಲ್ಲರನ್ನೂ ಮೀಟ್ ಮಾಡಿ ಇವರಿಗೆ ಬೇಕಾದ ಮಾಹಿತಿಗೊಸ್ಕರ ಕಾರ್ಯ ಮಗ್ನರಾಗುತ್ತಾರೆ…


ಇವರು ಹೋದ ಮಾರನೇ ದಿನವೇ ಜಾರ್ಜ್ ಬಂದು ಹಾಜರಾಗಿ ಎಲ್ಲಾ ವಿವರವನ್ನು ಕೊಡುವುದಾಗಿ ಹೇಳಿದ. ಲೇಖಕರು ಮತ್ತು ಜಾರ್ಜ್ ಮಾತ್ರ ಹೆಬ್ಬಾವು ಆಕ್ರಮಣ ಮಾಡಿದ ಜಾಗಕ್ಕೆ ಹೋದರು. ತೋಟದ ಮಧ್ಯೆ ಕಾಡೊಂದನ್ನು ಪರಿಸರದ ಪ್ರಿಯನಾದ ಜಾರ್ಜ್ ಬಿಟ್ಟಿರುತ್ತಾನೆ.. ಅದರ ಸೌಂದರ್ಯವನ್ನು ವೀಕ್ಷಿಸುತ್ತಾ ಇರುವಾಗ ಹೆಬ್ಬಾವಿನ ಹೋರಾಟ ನಡೆದಿದ್ದು, ಅದರ ರೋಮಾಂಚನದ ವಿವರಣೆ… ಬೇರೆ ಏನನ್ನೋ ಗಮನಿಸುತ್ತಿದ್ದವನು, ಯಾವುದೋ ಬಳ್ಳಿ/ಮುರಿದ ಕೊಂಬೆ ಕಾಲಿಗೆ ತೊಡರಿಸಿಕೊಂಡಿದೆ ಎಂದು ಭಾವಿಸಿ ಕೆಳಗೆ ನೋಡುತ್ತಾನೆ… ಹೆಬ್ಬಾವು… ಒಮ್ಮೆಲೇಗೆ ದಿಗ್ಘ್ರಾಂತನಾಗಿ ಹೌಹಾರಿದ್ದಾನೆ… ಹಾವು, ಎರಡು ಕಾಲುಗಳ ನಡುವೆ ನುಗ್ಗಿ, ಎಂಟರ ಕುಣಿಕೆ ಆಕಾರದಲ್ಲಿ ಸುತ್ತಿ ಕೊಳ್ಳುತ್ತಿದೆ… ಅವಘಡಗಳು ಬಂದಾಗ, ನಿಜವಾದ ರಕ್ಷಣೆ ಎಂದರೆ ಧೈರ್ಯ ಮತ್ತು ಸಮಯ ಪ್ರಜ್ಞೆ.. ಇವರೆಡು ಜಾರ್ಜ್ ನಲ್ಲಿ ಹೆಚ್ಚಾಗಿತ್ತು.. ಅದರಿಂದಲೇ ಅವನು ಅದರಿಂದ ಬಚಾವಾಗಿದ್ದು… ಅವನು ಆವೇಶಭರಿತನಾಗಿ ಹೇಳುತ್ತಾ ಹೋದ.. ಪ್ರತಿಯೊಂದು ವಿಷಯವನ್ನು ನಮ್ಮ ಕಣ್ಣ ಮುಂದೆ ಕಾಣುವ ಹಾಗೆ ವಿವರಿಸುತ್ತಾನೆ… ಹಾವು ಇವನ ದೇಹವನ್ನು ಬಳಸುತ್ತಾ ಸೊಂಟಕ್ಕಿಂತ ಮೇಲೆಯೇ ಬಂದು ಬಿಡುತ್ತದೆ… ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ, ಕೆಳಗೆ ನೂಕಲು ಬಲಗೈಯಿಂದ ಪ್ರಯತ್ನಿಸುತ್ತಾನೆ.. ಆಗ… ಹಾವು… ಉಗ್ ಎಂದು ಕೆಕ್ಕರಿಸಿ ಹಲ್ಲು ಬಿಟ್ಟಿತ್ತು.. ಅದರ ಬಾಯಿಂದ, ಕೆಟ್ಟ ಕೊಳೆತ ವಾಸನೆ… ಬಾಯೊಳಗೆ ಗರಗಸವನ್ನು ಹೋಲುವ ಹಳದಿ ಬಣ್ಣದ ಹಲ್ಲುಗಳು… ಎಂದು ಎಲ್ಲವನ್ನೂ ವಿವರಿಸುತ್ತಾನೆ…. ಹೀಗೆಯೇ ಸುಮಾರು 25 ನಿಮಿಷಗಳ ಕಾಲ ಅದರೊಡನೆ ಸಮಬಲದಿಂದ ಹೋರಾಡಿ, ಅದರಿಂದ ಬಿಡಿಸಿಕೊಂಡು ದೂರ ಓಡಿ ಬಂದು ನಿಃಶಕ್ತಿಯಿಂದ ಕುಸಿದು ಬೀಳುತ್ತಾನೆ.. 

ಇದನ್ನೇಲ್ಲಾ ಕೇಳಿದ ನಮ್ಮ ಲೇಖಕರಿಗೆ ಹೆಬ್ಬಾವಿನೊಡನೆ ಸೆಣಸಾಟದ ಅನುಭವ ಅಷ್ಟು ಬೇಗ ಆಗುತ್ತೇಂತ ಗೊತ್ತಿರಲಿಲ್ಲ…
ಹಾ… ಹ… ಎಲ್ಲಾ ಕಥೆಯನ್ನು ನಾನೇ ಹೇಳೊಲ್ಲ… ನಿಮಗೂ ತುಂಬಾ ಕುತೂಹಲವಾಗಿದ್ದರೆ.. ಈ ಪುಸ್ತಕವನ್ನು ಕೊಂಡು ಓದಿರೀ…
ಪುಸ್ತಕದಲ್ಲಿ ಬರುವ ಬೆಟ್ಟ, ರಸ್ತೆ, ಇನ್ನಿತರ ಚಿತ್ರಗಳನ್ನು ಹೆಬ್ಬಾವಿನಂತೆಯೇ ಅದ್ಬುತವಾಗಿ ಚಿತ್ರಿಸಿದ್ದಾರೆ….

ಧನ್ಯವಾದಗಳು…

 

ದೇವಿಶ್ರೀ ಪ್ರಸಾದ್

ಕೃಪೆ 

pustakapremi.wordpress.com


ಪುಟಗಳು: 108

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !